Tech Tips: ನಿಮ್ಮ ಮೊಬೈಲ್ ಚಾರ್ಜರ್ಗೂ ಇದೇ ಎಕ್ಸ್ಪೈರ್ ಡೇಟ್: ಹೇಗೆ ತಿಳಿಯುವುದು ನೋಡಿ
ಹೊಸ ಚಾರ್ಜರ್‌ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹಾಗೊ ಹೀಗೊ ಹೊಸ ಚಾರ್ಜರ್ ಅನ್ನು ಖರೀದಿಸುತ್ತೇವೆ ಆದರೆ ಅದು ಒರಿಜಿನಲ್ ಅಥವಾ ಡುಪ್ಲಿಕೇಟ್ ಎಂದು ನಮಗೆ ತಿಳಿದಿಲ್ಲ. ಆದರೆ, ನಿಜವಾದ ಅಥಾ ನಕಲಿ ಚಾರ್ಜರ್ ಅನ್ನು ನೀವು ಸುಲಭವಾಗಿ ಗುರುತಿಸಬಹುದು ಟ್ರಿಕ್ ಒಂದೊಂದಿದೆ. ಇದು ಅನೇಕರಿಗೆ ತಿಳಿದಿಲ್ಲ.
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಮೊಬೈಲ್ ಕಂಪನಿಗಳು ತಮ್ಮ ಸ್ಮಾರ್ಟ್ಫೋನ್ಗಳೊಂದಿಗೆ ಚಾರ್ಜರ್ ಗಳನ್ನು ಒದಗಿಸುವುದಿಲ್ಲ. ದೊಡ್ಡ ದೊಡ್ಡ ಬ್ರ್ಯಾಂಡ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಈ ರೀತಿಯ ಬೆಳವಣಿಗೆ ಹೆಚ್ಚು ಕಂಡುಬರುತ್ತದೆ. ಹೀಗಾದಾಗ ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಹೊರಗಿನಿಂದ ಹೊಸ ಚಾರ್ಜರ್ ಖರೀದಿಸಬೇಕಾಗುತ್ತದೆ.
ಹೊಸ ಚಾರ್ಜರ್‌ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹಾಗೊ ಹೀಗೊ ಹೊಸ ಚಾರ್ಜರ್ ಅನ್ನು ಖರೀದಿಸುತ್ತೇವೆ ಆದರೆ ಅದು ಒರಿಜಿನಲ್ ಅಥವಾ ಡುಪ್ಲಿಕೇಟ್ ಎಂದು ನಮಗೆ ತಿಳಿದಿಲ್ಲ. ಆದರೆ, ನಿಜವಾದ ಅಥಾ ನಕಲಿ ಚಾರ್ಜರ್ ಅನ್ನು ನೀವು ಸುಲಭವಾಗಿ ಗುರುತಿಸಬಹುದು ಟ್ರಿಕ್ ಒಂದೊಂದಿದೆ. ಇದು ಅನೇಕರಿಗೆ ತಿಳಿದಿಲ್ಲ.
ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಬಹಳ ಮುಖ್ಯವಾದ ಗ್ಯಾಜೆಟ್ ಆಗಿಬಿಟ್ಟಿದೆ. ಆನ್‌ಲೈನ್ ಪಾವತಿ, ಶಾಪಿಂಗ್, ಟಿಕೆಟ್ ಬುಕಿಂಗ್ ಮುಂತಾದ ಸಾವಿರಾರು ಕಾರ್ಯಗಳಿಗೆ ಇದನ್ನು ಬಳಸಲಾಗುತ್ತದೆ. ಪ್ರಮುಖ ಕಾರ್ಯಗಳ ಜೊತೆಗೆ, ಮನರಂಜನೆಗಾಗಿ ಇದನ್ನು ವ್ಯಾಪಕವಾಗಿ ಉಪಯೋಗಿಸುತ್ತಾರೆ. ಸ್ಮಾರ್ಟ್‌ಫೋನ್ ದೀರ್ಘಕಾಲದವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸರಿಯಾದ ಚಾರ್ಜರ್ ಅನ್ನು ಬಳಸುವುದು ಬಹಳ ಮುಖ್ಯ.
ನೀವು ನಕಲಿ ಅಥವಾ ಕಡಿಮೆ ಗುಣಮಟ್ಟದ ಚಾರ್ಜರ್ ಅನ್ನು ಬಳಸಿದರೆ, ಫೋನ್ ಬಿಸಿ ಆಗುವುದು ಅಥವಾ ಬ್ಲಾಸ್ಟಿಂಗ್‌ನಂತಹ ಸಮಸ್ಯೆಗಳನ್ನು ಎದುರಿಸಬಹುದು. ನೀವು ಇತ್ತೀಚೆಗೆ ಹೊಸ ಚಾರ್ಜರ್ ಅನ್ನು ಖರೀದಿಸಿದ್ದರೆ, ಅದು ವರಿಜಿನಲ್ ಚಾರ್ಜರ್ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು. ಅಷ್ಟೇ ಅಲ್ಲ, ನಿಮ್ಮ ಫೋನ್‌ನ ಚಾರ್ಜರ್‌ನ ಜೀವಿತಾವಧಿಯ ಮಾಹಿತಿಯನ್ನು ಸಹ ನೀವು ಪಡೆಯಬಹುದು. ಇದನ್ನು ನೀವು ಹೇಗೆ ಕಂಡುಹಿಡಿಯಬಹುದು ಎಂಬುದನ್ನು ನಾವು ಹೇಳುತ್ತೇವೆ.
ನಿಜವಾದ ಅಥವಾ ನಕಲಿ ಚಾರ್ಜರ್ ಅನ್ನು ಹೇಗೆ ಗುರುತಿಸುವುದು?:
ನಿಜವಾದ ಅಥವಾ ನಕಲಿ ಚಾರ್ಜರ್ ಅನ್ನು ಗುರುತಿಸಲು, ನೀವು ಮೊದಲು ಪ್ಲೇ ಸ್ಟೋರ್‌ನಿಂದ BIS ಕೇರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.
ಐಒಎಸ್ ಮತ್ತು ಆಂಡ್ರಾಯ್ಡ್ ಎರಡೂ ಬಳಕೆದಾರರಿಗೆ ಈ BIS ಕೇರ್ ಅಪ್ಲಿಕೇಶನ್ ಲಭ್ಯವಿದೆ. ಬಿಐಎಸ್ ಕೇರ್ ಆ್ಯಪ್‌ನ ಮುಖಪುಟದಲ್ಲಿ ನೀವು ಹಲವು ಆಯ್ಕೆಗಳನ್ನು ಕಾಣಬಹುದು. ಲ್ಲಿ ನೀವು ವೆರಿಫೈ ಆರ್ ನಂ. ನೀವು CRS ಅಡಿಯಲ್ಲಿ ಕ್ಲಿಕ್ ಮಾಡಬೇಕು.
ಇಲ್ಲಿ ನೀವು ಎರಡು ಆಯ್ಕೆಗಳನ್ನು ಪಡೆಯುತ್ತೀರಿ: ಉತ್ಪನ್ನ ನೋಂದಣಿ ಸಂಖ್ಯೆ ಮತ್ತು ಉತ್ಪನ್ನ QR ಕೋಡ್ ಸ್ಕ್ಯಾನ್.
ಈಗ ಚಾರ್ಜರ್‌ನಲ್ಲಿ ಬರೆದಿರುವ ನೋಂದಣಿ ಸಂಖ್ಯೆಯನ್ನು ಇಲ್ಲಿ ನಮೋದಿಸಿ ನೀವು ಚಾರ್ಜರ್‌ನ ವಿವರಗಳನ್ನು ಪಡೆಯಬಹುದು.
ಈ ವಿವರದಲ್ಲಿ ನಿಮ್ಮ ಚಾರ್ಜರ್ ಅವಧಿ ಯಾವಾಗ ಮುಗಿಯುತ್ತದೆ ಎಂದು ಸಹ ನಿಮಗೆ ತಿಳಿಯುತ್ತದೆ. BIS ಕೇರ್ ಆಪ್‌ನ ಮಾಲೀಕರು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಆಗಿದೆ. ನಿಮಗೆ ತಿಳಿದಿರುವಂತೆ, BIS ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. BIS ಭಾರತದಲ್ಲಿ ಮಾರಾಟವಾಗುವ ಸರಕುಗಳ ಗುಣಮಟ್ಟದ ಪ್ರಮಾಣೀಕರಣ ಸಂಸ್ಥೆಯಾಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ