Tech Tips: ಕಾಲ್ ರಿಸೀವ್ ಮಾಡಿದಾಗ ಫೋನ್ ಅಟೋಮೆಟಿಕ್ ಆಗಿ ನಿಮ್ಮ ಧ್ವನಿಯಲ್ಲೇ ಮಾತಾಡುತ್ತೆ: ಹೇಗೆ ಗೊತ್ತೇ?

ಸಾಮಾನ್ಯವಾಗಿ ಅಪರಿಚಿತ ಸಂಖ್ಯೆಯಿಂದ ಕರೆಯ ಮಾಲೀಕರ ಹೆಸರನ್ನು ತಿಳಿಯಲು ನಾವು ಟ್ರೂಕಾಲರ್ ಅನ್ನು ಬಳಸುತ್ತೇವೆ. ಆದರೆ ಈಗ ಈ ಟ್ರೂಕಾಲರ್ ಮೂಲಕ ನಿಮ್ಮ ಫೋನ್​ನಲ್ಲಿ ನೀವು ನಿಮ್ಮ ಧ್ವನಿಯಲ್ಲೇ ಅಟೋಮೆಟಿಕ್ ಆಗಿ ಮಾತನಾಡಬಹುದು.

Tech Tips: ಕಾಲ್ ರಿಸೀವ್ ಮಾಡಿದಾಗ ಫೋನ್ ಅಟೋಮೆಟಿಕ್ ಆಗಿ ನಿಮ್ಮ ಧ್ವನಿಯಲ್ಲೇ ಮಾತಾಡುತ್ತೆ: ಹೇಗೆ ಗೊತ್ತೇ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 05, 2024 | 2:50 PM

Truecaller AI Voice Assistant: ಕೃತಕ ಬುದ್ಧಿಮತ್ತೆ (AI) ಇಂದು ಅತ್ಯಂತ ಜನಪ್ರಿಯ ತಂತ್ರಜ್ಞಾನವಾಗಿದೆ. ಇದು ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಕೆಲಸ ಮಾಡುವ ವಿಧಾನವನ್ನೇ ಬದಲಾಯಿಸಿದೆ. ಎಷ್ಟರ ಮಟ್ಟಿಗೆ ಎಂದರೆ, ನಿಮ್ಮ ಮೊಬೈಲ್​ಗೆ ಒಂದು ಕಾಲ್ ಬರುತ್ತಿದೆ ಎಂದುಕೊಳ್ಳಿ. ಆಗ ನೀವು ಕರೆ ಸ್ವೀಕರಿಸಿದಾಗ ನಿಮ್ಮ ಫೋನ್ ಸ್ವಯಂಚಾಲಿತವಾಗಿ ಕರೆ ಮಾಡಿದವರ ಜೊತೆ ನಿಮ್ಮ ಧ್ವನಿಯಲ್ಲೇ ಮಾತನಾಡುವ ಮಟ್ಟಿಗೆ ಬಂದು ನಿಂತಿದೆ. AI ಸಹಾಯದಿಂದ ಇದು ಸಾಧ್ಯವಾಗಿದೆ. ಇಂತಹ ಸಾಹಸ ಮಾಡಿರುವುದು ಟ್ರೂಕಾಲರ್.

ಸಾಮಾನ್ಯವಾಗಿ ಅಪರಿಚಿತ ಸಂಖ್ಯೆಯಿಂದ ಕರೆಯ ಮಾಲೀಕರ ಹೆಸರನ್ನು ತಿಳಿಯಲು ನಾವು ಟ್ರೂಕಾಲರ್ ಅನ್ನು ಬಳಸುತ್ತೇವೆ. ಆದರೆ ಈಗ ಈ ಟ್ರೂಕಾಲರ್ ಮೂಲಕ ನಿಮ್ಮ ಫೋನ್​ನಲ್ಲಿ ನೀವು ನಿಮ್ಮ ಧ್ವನಿಯಲ್ಲೇ ಅಟೋಮೆಟಿಕ್ ಆಗಿ ಮಾತನಾಡಬಹುದು.

ಟ್ರೂಕಾಲರ್ ತನ್ನ ಟ್ರೂಕಾಲರ್ ಅಸಿಸ್ಟೆಂಟ್ ಪರ್ಸನಲ್ ಸೌಂಡ್ ಎಂಬ ವೈಶಿಷ್ಟ್ಯವನ್ನು ನೀಡುತ್ತದೆ. ಈ ವೈಶಿಷ್ಟ್ಯದ ಅಡಿಯಲ್ಲಿ ನೀವು ನಿಮ್ಮ ಧ್ವನಿಯ ಡಿಜಿಟಲ್ ಆವೃತ್ತಿಯನ್ನು ರಚಿಸಬಹುದು. ನಂತರ ನಿಮ್ಮ ಡಿಜಿಟಲ್ ಧ್ವನಿಯನ್ನು Truecaller ಅಸಿಸ್ಟೆಂಟ್ ಬಳಸುತ್ತದೆ.

ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಮಾಡಿದ ವೈಶಿಷ್ಟ್ಯ:

ಇತರರೊಂದಿಗೆ ಸಂಭಾಷಣೆಗಳನ್ನು ಹೆಚ್ಚು ವೈಯಕ್ತೀಕರಿಸುವುದು ಇದರ ಉದ್ದೇಶವಾಗಿದೆ. ಇದರಿಂದ ಇನ್ನೊಂದು ಬದಿಯಲ್ಲಿ ಮಾತನಾಡುವ ವ್ಯಕ್ತಿಯು ಆರಾಮದಾಯಕವಾಗಿ ನಿಮ್ಮ ಮಾತುಗಳನ್ನು ಕೇಳಬಹುದು. ಈ ವೈಶಿಷ್ಟ್ಯವನ್ನು ಹೇಗೆ ಬಳಸಬಹುದು ಎಂಬುದನ್ನು ಕೆಳಗೆ ತಿಳಿಸಲಾಗಿದೆ. ಮೈಕ್ರೋಸಾಫ್ಟ್ ಜೊತೆಗಿನ ಟ್ರೂಕಾಲರ್​ನ ಪಾಲುದಾರಿಕೆಯ ಭಾಗವಾಗಿ ವೈಯಕ್ತಿಕ ಧ್ವನಿ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗಿದೆ. Microsoft Azure AI ಸ್ಪೀಚ್‌ನ ಹೊಸ ವೈಯಕ್ತಿಕ ಧ್ವನಿ ತಂತ್ರಜ್ಞಾನವನ್ನು ಅಪ್ಲಿಕೇಶನ್‌ಗೆ ತರಲು ಎರಡು ಕಂಪನಿಗಳು ಸಹಕರಿಸಿವೆ.

ನಿಮ್ಮ ಧ್ವನಿಯ ಡಿಜಿಟಲ್ ಆವೃತ್ತಿಯನ್ನು ಹೀಗೆ ರಚಿಸಿ:

ಬಳಕೆದಾರರು ಸ್ಟ್ಯಾಂಡರ್ಡ್ ಡಿಜಿಟಲ್ ಅಸಿಸ್ಟೆಂಟ್ ಧ್ವನಿಯನ್ನು ತಮ್ಮದೇ ಆದ ಧ್ವನಿಯೊಂದಿಗೆ ಬದಲಾಯಿಸಬಹುದು. ಇದರಿಂದಾಗಿ ಟ್ರೂಕಾಲರ್ ಅಸಿಸ್ಟೆಂಟ್ ಯಾರಿಗಾದರೂ ಕರೆಯಲ್ಲಿ ಮಾತನಾಡುವಾಗ, ಸಂಭಾಷಣೆಯು ನಿಮ್ಮ ಸ್ವಂತ ಧ್ವನಿಯಲ್ಲಿ ಕೇಳಿಸುತ್ತದೆ.

ವೈಯಕ್ತಿಕ ಧ್ವನಿ ವೈಶಿಷ್ಟ್ಯವನ್ನು ಬಳಸಲು, ಬಳಕೆದಾರರು ಟ್ರೂ ಕಾಲರ್ ಅಪ್ಲಿಕೇಶನ್‌ ನ ಇತ್ತೀಚಿನ ಆವೃತ್ತಿಯನ್ನು ಹೊಂದಿರಬೇಕು ಮತ್ತು ಟ್ರೂ ಕಾಲರ್ ಪ್ರೀಮಿಯಂ ಸದಸ್ಯರಾಗಿರಬೇಕು ಎಂಬುದು ನೆನಪಿರಲಿ. ಟ್ರೂ ಕಾಲರ್ ಪ್ರೀಮಿಯಂ ಚಂದಾದಾರಿಕೆಯ ಬೆಲೆ ತಿಂಗಳಿಗೆ 99 ರೂ. ಗಳಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಇಂಟರ್ನೆಟ್ ಇಲ್ಲದೆ ಯಾವುದೇ ಫೈಲ್​ಗಳನ್ನು ಶೇರ್ ಮಾಡುವುದು ಹೇಗೆ ಗೊತ್ತೇ?

ಈ ರೀತಿಯ ಸೆಟ್ಟಿಂಗ್‌ಗಳನ್ನು ಮಾಡಿ:

ಧ್ವನಿಯನ್ನು ಹೊಂದಿಸುವ ವಿಧಾನವು ತುಂಬಾ ಸುಲಭವಾಗಿದೆ. ಅಪ್ಲಿಕೇಶನ್‌ನಲ್ಲಿ ಅಸಿಸ್ಟೆಂಟ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನಿಮ್ಮ ಧ್ವನಿಯನ್ನು ರೆಕಾರ್ಡ್ ಮಾಡಲು ಮತ್ತು ಹೊಂದಿಸಲು ಸೂಚನೆಗಳನ್ನು ಅನುಸರಿಸಿ. ಇದರ ನಂತರ, ಕರೆ ಬಂದಾಗ AI ಅಸಿಸ್ಟೆಂಟ್ ನಿಮ್ಮ ಧ್ವನಿಯಲ್ಲಿ ಮಾತನಾಡುತ್ತದೆ ಮತ್ತು ಕರೆ ಮಾಡುವವರು ನಿಮ್ಮ ಧ್ವನಿಯಲ್ಲೇ ಕೇಳುತ್ತಾರೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ