Video: ಕಡಿಮೆ ಸಂಬಳ ಇದ್ರೆ ಬೆಂಗಳೂರಿಗೆ ಬರಲೇಬೇಡಿ; ಮಹಿಳೆ ಹೀಗೆಂದಿದ್ದೇಕೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸಿರುವ ಅನೇಕರಿಗೆ ತಿಂಗಳ ಸಂಬಳವೇ ಸಾಲಲ್ಲ. ಹೌದು ಈ ಮನೆ ಬಾಡಿಗೆ, ಮನೆ ಖರ್ಚು ಎಲ್ಲಾ ಸೇರಿಸಿದರೆ ಕಡಿಮೆ ಸಂಬಳದಲ್ಲಿ ಇಲ್ಲಿ ಬದುಕೋಕೆ ಆಗಲ್ಲ. ಹೀಗಾಗಿ ಒಂದು ಲಕ್ಷಕ್ಕೂ ಕಡಿಮೆ ಸಂಬಳ ಇರುವವರು ಬೆಂಗಳೂರಿಗೆ ಮಾತ್ರ ಬರಲೇಬೇಡಿ ಎಂದು ಸಲಹೆ ನೀಡಿದ್ದಾರೆ. ಹೀಗೆನ್ನಲು ಈ ಮಹಿಳೆ ನೀಡಿದ ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರಿನಲ್ಲಿ (Bengaluru) ಉದ್ಯೋಗ ಮಾಡೋದು ಬಹುತೇಕರ ಕನಸು. ಆದ್ರೆ ಈ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಜೀವನ ನಿರ್ವಹಣೆ ತುಂಬಾ ಕಷ್ಟಕರ. ಹೀಗಿರುವಾಗ ಮಹಿಳೆಯೊಬ್ಬರ ವಿಡಿಯೋ ಸದ್ಯ ವೈರಲ್ ಆಗಿದೆ. ಮನೆ ಬಾಡಿಗೆಯಂತೂ ಗಗನಕ್ಕೇರುತ್ತಿದೆ. ಬೆಂಗಳೂರಿನಲ್ಲಿ ಲಕ್ಷಾನುಗಟ್ಟಲೇ ಸಂಬಳದ ಉದ್ಯೋಗ ಸಿಕ್ಕರೆ ಓಕೆ. ನೀವು ಬಾಡಿಗೆ ಮನೆಗೆ ಎರಡರಿಂದ ಮೂರು ಲಕ್ಷ ರೂಪಾಯಿ ಇಟ್ಟುಕೊಳ್ಳಬೇಕು. ಹೀಗಾಗಿ ಬೆಂಗಳೂರಿಗೆ ಬರುವ ಮುನ್ನ ಒಮ್ಮೆ ಯೋಚಿಸಿ ಎಂದು ಮಹಿಳೆ ಸಲಹೆ ನೀಡಿದ್ದಾರೆ. ಈ ವಿಡಿಯೋ ಸದ್ಯ ಆನ್ಲೈನ್ ನಲ್ಲಿ ಚರ್ಚೆ ಹುಟ್ಟು ಹಾಕಿದೆ.
ಕಡಿಮೆ ಸಂಬಳ ಇದ್ರೆ ಇಲ್ಲಿಗೆ ಬರಲೇಬೇಡಿ
ಅತ್ರೇಯಿ (Atreyee) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮಹಿಳೆಯೊಬ್ಬರು ಬೆಂಗಳೂರಿಗೆ ಬರೋರಿಗೆ ಕಿವಿ ಮಾತು ಹೇಳಿದ್ದಾರೆ. ಬೆಂಗಳೂರಿಗೆ ಬರಬೇಕು ಅಂದುಕೊಂಡಿದ್ರೆ ನಿಮ್ಮ ತಿಂಗಳ ಆದಾಯ ಒಂದು ಲಕ್ಷ ರೂಪಾಯಿ ಇರಲಿ. ಇದಕ್ಕಿಂತ ಕಡಿಮೆ ಇದ್ರೆ ನೀವು ಇಲ್ಲಿಗೆ ಬರೋದೆ ಬೇಡ. ಇನ್ನು ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವುದು ಅಷ್ಟು ಸುಲಭವಲ್ಲ. ಇಲ್ಲಿ ಒಂದು ಮನೆಯ ಬೆಲೆಯೇ 2 ಕೋಟಿ ರೂಪಾಯಿ. ಸಾರಿಗೆ ಸಂಪರ್ಕ ಸೇರಿದಂತೆ ಎಲ್ಲಾ ಸೌಕರ್ಯ ಇರುವ ಪ್ರದೇಶಗಳು, ಗೇಟೆಡ್ ಕಮ್ಯುನಿಟಿಯಲ್ಲಿ ಮನೆ ಖರೀದಿಸಬೇಕೆಂದ್ರೆ ನೀವು ನಾಲ್ಕು ಕೋಟಿ ರೂ ಇಟ್ಟುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ತಿಂಗಳ ಸಂಬಳ ಮೂರ್ನಾಲ್ಕು ಲಕ್ಷ ರೂ ಇರ್ಲೆಬೇಕು
ಗೇಟೆಡ್ ಕಮ್ಯುನಿಟಿಯಲ್ಲಿ ನೀವು 2 ಬಿಹೆಚ್ ಕೆ ಅಪಾರ್ಟ್ಮೆಂಟ್ ಗೆ 40,000 ರೂ 45,000 ರೂವರೆಗೆ ಬಾಡಿಗೆ ಕಟ್ಟಲು ಸಿದ್ಧವಿರಬೇಕು. ಸ್ವಂತ ಮನೆ ಖರೀದಿಸಲು ನಿಮ್ಮ ಸಂಬಳ ಮೂರ್ನಾಲ್ಕು ಲಕ್ಷ ರೂ ಆಗಿರಲೇಬೇಕು ಎಂದು ಅಸಲಿ ಸತ್ಯ ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಗಿಟಾರ್‌ಗೆ ‘ಹೆಲ್ಮೆಟ್ ಇಲ್ಲ’ ಎಂದು 500 ರೂ. ದಂಡ; ಬೆಂಗಳೂರಿನ ಎಐ ಟ್ರಾಫಿಕ್ ಕ್ಯಾಮೆರಾದ ಯಡವಟ್ಟು!
ಈ ವಿಡಿಯೋ ವೈರಲ್ ಆಗಿದ್ದು ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದುಡಿದು ತಿನ್ನೋದೇ ಕಷ್ಟ, ಇನ್ನು ಮನೆ ಖರೀದಿ ದೂರದ ಮಾತು ಎಂದಿದ್ದಾರೆ. ಇನ್ನೊಬ್ಬರು, ದುಡ್ಡಿದ್ರೆ ಮಾತ್ರ ಎಲ್ಲಾ ಸಿಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಹೇಳುವುದಕ್ಕಿಂತ ಇಲ್ಲಿ ಹೆಚ್ಚು ಬಾಡಿಗೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




