Plane Crash: ಗ್ರೀಸ್ನ ಕಾಡ್ಗಿಚ್ಚು ನಂದಿಸಲು ಬಂದಿದ್ದ ವಿಮಾನ ಪತನ, ಇಬ್ಬರು ಪೈಲಟ್ಗಳು ಸಾವು
ಗ್ರೀಸ್ ಕೆಟ್ಟ ಶಾಖದ ಅಲೆಯನ್ನು ಎದುರಿಸುತ್ತಿದೆ, ಜತೆಗೆ ಕಾಡ್ಗಿಚ್ಚು ಎಲ್ಲೆಡೆ ಹಬ್ಬಿದೆ. ಅದನ್ನು ನಂದಿಸಲು ಬಂದಿದ್ದ ಅಗ್ನಿಶಾಮಕ ವಿಮಾನವು ಮರಕ್ಕೆ ಡಿಕ್ಕಿ ಹೊಡದು ಪತನಗೊಂಡಿದೆ, ಇಬ್ಬರು ಪೈಲಟ್ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರೋಡ್ಸ್, ಗ್ರೀಸ್, ಜುಲೈ 26: ಗ್ರೀಸ್ ಕೆಟ್ಟ ಶಾಖದ ಅಲೆಯನ್ನು ಎದುರಿಸುತ್ತಿದೆ, ಜತೆಗೆ ಕಾಡ್ಗಿಚ್ಚು ಎಲ್ಲೆಡೆ ಹಬ್ಬಿದೆ. ಅದನ್ನು ನಂದಿಸಲು ಬಂದಿದ್ದ ಅಗ್ನಿಶಾಮಕ ವಿಮಾನವು ಮರಕ್ಕೆ ಡಿಕ್ಕಿ ಹೊಡದು ಪತನಗೊಂಡಿದೆ, ಇಬ್ಬರು ಪೈಲಟ್ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎವಿಯಾ ದ್ವೀಪದಲ್ಲಿರುವ ಕಾಡಿನಲ್ಲಿ ಬೆಂಕಿ ಧಗಧಗಿಸುತ್ತಿತ್ತು, ಅದನ್ನು ನಂದಿಸಲು ಗ್ರೀಕ್ ವಾಟರ್ ಬಾಂಬ್ ವಿಮಾನವು ಕೂಡ ಬಂದಿತ್ತು, ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ತೆರಳಿ ಪತನಗೊಂಡಿತ್ತು, ತಕ್ಷಣವೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪೈಲಟ್ಗಳು ಸುಟ್ಟು ಕರಕಲಾಗಿದ್ದಾರೆ.
ಬೆಂಕಿ ಇದ್ದ ಸ್ಥಳದ ಸಮೀಪವೇ ವಿಮಾನ ಪತನಗೊಂಡಿದೆ, ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ವಿಮಾನ ಪತನಗೊಳ್ಳುವ ಮೊದಲು ಮರಕ್ಕೆ ಡಿಕ್ಕಿ ಹೊಡೆದು ಮರ ಕತ್ತರಿಸಿ ಬೀಳುವುದನ್ನು ದೃಶ್ಯದಲ್ಲಿ ಕಾಣಬಹುದು.
A CL-415 Amphibious-Firefighting Aircraft with the Hellenic Air Force has Crashed today while Fighting a Wildfire on the Greek Island of Evia, the Crash is reported to have resulting in the Immediate Death of the 2 Pilots. pic.twitter.com/Z62f0BLrn3
— OSINTdefender (@sentdefender) July 25, 2023
ಪ್ಲಾಟಾನಿಸ್ಟೊ ಬಳಿ ಅಪಘಾತಕ್ಕೀಡಾಗಿದೆ, ಎವಿಯಾದಲ್ಲಿನ ಬೆಂಕಿಯ ಜ್ವಾಲೆಯ ವಿರುದ್ಧದ ಹೋರಾಟದಲ್ಲಿ ಕನಿಷ್ಠ ಮೂರು ವಿಮಾನಗಳು ಹಾಗೂ 100ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದರು.
ಪ್ರವಾಸಿ ದ್ವೀಪಗಳಾದ ರೋಡ್ಸ್ ಮತ್ತು ಕಾರ್ಫು ಸೇರಿದಂತೆ ಮೂರು ಕಡೆ ಕಾಡ್ಗಿಚ್ಚು ಹಬ್ಬಿದೆ. ಈ ಪ್ರದೇಶದಲ್ಲಿ ಗಾಳಿ ಬಲವಾಗಿರುವುದರಿಂದ ಸುಲಭವಾಗಿ ಬೆಂಕಿ ಹರಡಿದೆ.
ಮತ್ತಷ್ಟು ಓದಿ: Nepal Aircraft Crash: ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನ
ಗ್ರೀಕ್ ದ್ವೀಪಗಳಾದ ರೋಡ್ಸ್ ಮತ್ತು ಕಾರ್ಫುಗಳಲ್ಲಿ ಸಾವಿರಾರು ಸ್ಥಳೀಯರು ಮತ್ತು ಪ್ರವಾಸಿಗರು ಕಾಡಿನ ಬೆಂಕಿಯಿಂದ ಸ್ಥಳಾಂತರಗೊಂಡಿದ್ದಾರೆ. ಗ್ರೀಸ್‌ನಲ್ಲಿ 35,000 ಹೆಕ್ಟೇರ್ (86,500 ಎಕರೆ) ಅರಣ್ಯ ಮತ್ತು ಇತರ ಭೂಮಿ ಬೆಂಕಿಯಿಂದ ಸುಟ್ಟು ಕರಕಲಾಗಿವೆ.
ರಾಜಧಾನಿ ಅಥೆನ್ಸ್‌ನಲ್ಲಿ ಶಾಖವು 41 ಡಿಗ್ರಿ ಸೆಲ್ಸಿಯಸ್ (106 ಡಿಗ್ರಿ ಫ್ಯಾರನ್‌ಹೀಟ್) ತಲುಪುವ ನಿರೀಕ್ಷೆಯಿದೆ ಮತ್ತು ಮಧ್ಯ ಗ್ರೀಸ್‌ನಲ್ಲಿ 44C ವರೆಗೆ ಮುಟ್ಟುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೋಮವಾರ ಸುಮಾರು 2,500 ಜನರನ್ನು ಗ್ರೀಕ್ ದ್ವೀಪವಾದ ಕಾರ್ಫುದಿಂದ ಸ್ಥಳಾಂತರಿಸಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ