ಜಗತ್ತನ್ನೇ ಕಂಗೆಡಿಸಿರುವ ಕೊವಿಡ್ ಈ ದೇಶಗಳಿಗೆ ಮಾತ್ರ ಒಮ್ಮೆಯೂ ಎಂಟ್ರಿ ಕೊಟ್ಟಿಲ್ಲ; ಅಚ್ಚರಿಯಾದರೂ ಸತ್ಯ
ಈ ದೇಶಗಳಲ್ಲಿ ಒಂದೇ ಒಂದು ಕೊರೊನಾ ಕೇಸುಗಳು ದಾಖಲಾಗಿಲ್ಲ. ಈ ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಹೆಚ್ಚಿನವು ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿನ ದ್ವೀಪಗಳಾಗಿವೆ.
ನವದೆಹಲಿ: ಇಡೀ ವಿಶ್ವವೇ ಕೊರೊನಾದಿಂದ ಕಂಗೆಟ್ಟಿದೆ. ಜಗತ್ತಿನಲ್ಲಿ ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಕೊವಿಡ್ ಸಾಂಕ್ರಾಮಿಕ ಜನರನ್ನು ಕಂಗೆಡಿಸಿದೆ. ಅನೇಕ ದೇಶಗಳು ಪ್ರತಿದಿನ ಹೊಸ ದಾಖಲೆಗಳನ್ನು ಮುರಿದು ಕೊರೊನಾವೈರಸ್ ಕೇಸುಗಳು ತಾರಕಕ್ಕೇರುತ್ತಲೇ ಇವೆ. ಈಗಾಗಲೇ ಲಕ್ಷಾಂತರ ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿದಂತೆ ಅಮೆರಿಕ ಮತ್ತು ಯುರೋಪ್ನಲ್ಲಿ ಪರಿಸ್ಥಿತಿ ವಿಶೇಷವಾಗಿ ಕೆಟ್ಟದಾಗಿದೆ. ಆದರೆ, ಇನ್ನೂ ಕೆಲವು ದೇಶಗಳು ಸಾಂಕ್ರಾಮಿಕ ರೋಗದಿಂದ ದೂರವೇ ಉಳಿದಿವೆ. ಆದರೆ, ಕೊವಿಡ್ ಸೋಂಕು ಎಂಟ್ರಿ ಕೊಡದಿರುವ ದೇಶಗಳ ಪಟ್ಟಿಯನ್ನು WHO ಸಿದ್ಧಪಡಿಸಿದೆ. ಹೌದು, ಈ ದೇಶಗಳಲ್ಲಿ ಒಂದೇ ಒಂದು ಕೊರೊನಾ ಕೇಸುಗಳು ದಾಖಲಾಗಿಲ್ಲ. ಈ ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಹೆಚ್ಚಿನವು ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿನ ದ್ವೀಪಗಳಾಗಿವೆ. ಕೆಲವು ತಿಂಗಳ ಹಿಂದೆ ಈ ಪಟ್ಟಿ ದೊಡ್ಡದಾಗಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಟೊಂಗಾದಲ್ಲಿ ಇತ್ತೀಚೆಗೆ ಕೊರೊನಾ ಜ್ವಾಲಾಮುಖಿ ಸ್ಫೋಟಗೊಂಡಿತು. ಹಾಗೇ, ಕುಕ್ ದ್ವೀಪಗಳಲ್ಲಿ ಕೂಡ ಕಳೆದ ವಾರ ಮೊದಲ ಕೊವಿಡ್ ಪ್ರಕರಣ ದಾಖಲಾಗಿದೆ.
WHO ಪಟ್ಟಿ ಮಾಡಿರುವಂತೆ ಒಂದೂ ಕೋವಿಡ್-19 ಪ್ರಕರಣಗಳು ದಾಖಲಾಗದ ದೇಶಗಳ ಪಟ್ಟಿ ಇಲ್ಲಿದೆ:
ಟುವಾಲು:
ಇದು ಕಾಮನ್‌ವೆಲ್ತ್‌ನ ಸದಸ್ಯ ರಾಷ್ಟ್ರವಾಗಿದ್ದರೂ, ಟುವಾಲು ತನ್ನ ಗಡಿಗಳನ್ನು ಮುಚ್ಚುವ ಮೂಲಕ ಮತ್ತು ಕಡ್ಡಾಯ ಸಂಪರ್ಕ ತಡೆಯನ್ನು ಮಾಡುವ ಮೂಲಕ ತನ್ನ ದೇಶದೊಳಗೆ ಕೋವಿಡ್-19 ಪ್ರವೇಶಿಸದಂತೆ ತಡೆದಿತ್ತು. WHO ಪ್ರಕಾರ, ಇಲ್ಲಿ 100ರಲ್ಲಿ 50 ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ.
ಟೊಕೆಲಾವ್:
ದಕ್ಷಿಣ ಪೆಸಿಫಿಕ್‌ನಲ್ಲಿರುವ ಅಟಾಲ್‌ಗಳ ಸಣ್ಣ ಗುಂಪಾಗಿರುವ ಟೊಕೆಲಾವ್ ಕೂಡ ಕೊರೊನಾದಿಂದ ಸಂಪೂರ್ಣ ಮುಕ್ತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿದೆ. ಈ ದ್ವೀಪವು ನ್ಯೂಜಿಲೆಂಡ್‌ನ ಸಮೀಪದಲ್ಲಿದೆ ಮತ್ತು 1,500 ಜನಸಂಖ್ಯೆಯನ್ನು ಹೊಂದಿದೆ. ಹಾಗೂ ಒಂದೇ ಒಂದು ವಿಮಾನ ನಿಲ್ದಾಣವನ್ನು ಹೊಂದಿದೆ.
ಸೇಂಟ್ ಹೆಲೆನಾ:
ಇದು ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿದೆ. ಇದು ಬ್ರಿಟಿಷ್ ಸಾಗರೋತ್ತರ ಪ್ರದೇಶವಾಗಿದೆ. WHO ಪ್ರಕಾರ, ಸೇಂಟ್ ಹೆಲೆನಾದಲ್ಲಿ 100ಕ್ಕೆ 58.16 ಜನರು ಸಂಪೂರ್ಣವಾಗಿ ಕೊರೊನಾ ಲಸಿಕೆಯನ್ನು ಹೊಂದಿದ್ದಾರೆ.
ಪಿಟ್ಕೈರ್ನ್ ದ್ವೀಪಗಳು:
ಇವು ಪೆಸಿಫಿಕ್ ಸಾಗರದಲ್ಲಿರುವ ದ್ವೀಪಗಳಾಗಿವೆ. ಪಾಲಿನೇಷ್ಯನ್ನರು ಪಿಟ್‌ಕೈರ್ನ್ ದ್ವೀಪಗಳ ಮೊದಲ ನಿವಾಸಿಗಳಾಗಿದ್ದು, 1606ರಲ್ಲಿ ಇದನ್ನು ಯುರೋಪಿಯನ್ನರು ಕಂಡುಹಿಡಿದ ಸಮಯದಲ್ಲಿ ದ್ವೀಪಗಳಲ್ಲಿ ಜನವಸತಿ ಇರಲಿಲ್ಲ. WHO ಪ್ರಕಾರ, ಇಲ್ಲಿ ಪ್ರತಿ 100ಕ್ಕೆ 74 ಜನರು ಇಲ್ಲಿ ಸಂಪೂರ್ಣವಾಗಿ ಕೋವಿಡ್ -19 ಲಸಿಕೆ ಪಡೆದಿದ್ದಾರೆ.
ನಿಯು:
ಇದು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ಮತ್ತೊಂದು ದ್ವೀಪ ರಾಷ್ಟ್ರವಾಗಿದೆ. ಇದು ಕಲ್ಲಿದ್ದಲು-ರೀಫ್ ಡೈವ್ ಸೈಟ್‌ಗಳಿಗೆ ಹೆಸರುವಾಸಿಯಾಗಿದೆ. WHO ಪಟ್ಟಿಯ ಪ್ರಕಾರ, ಈ ರಾಷ್ಟ್ರದಲ್ಲಿ ಪ್ರತಿ 100ಕ್ಕೆ 70 ಜನರು ಇಲ್ಲಿ ಎರಡೂ ಡೋಸ್ ಕೋವಿಡ್ -19 ಲಸಿಕೆಯನ್ನು ಹೊಂದಿದ್ದಾರೆ.
ನೌರು:
ಈ ಪುಟ್ಟ ದೇಶವು ಆಸ್ಟ್ರೇಲಿಯಾದ ಈಶಾನ್ಯದಲ್ಲಿದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಇದು ಜಪಾನಿನ ಔಟ್ಪೋಸ್ಟ್ ಆಗಿತ್ತು. WHO ಪಟ್ಟಿಯ ಪ್ರಕಾರ ಇಲ್ಲಿ ಪ್ರತಿ 100ಕ್ಕೆ ಸುಮಾರು 68 ಜನರು ಇಲ್ಲಿ ಸಂಪೂರ್ಣವಾಗಿ ಕೋವಿಡ್ -19 ಲಸಿಕೆ ಪಡೆದಿದ್ದಾರೆ.
ಮೈಕ್ರೋನೇಷ್ಯಾ:
ಇದು ನಾಲ್ಕು ರಾಜ್ಯಗಳನ್ನು ಒಳಗೊಂಡಿರುವ ರಾಷ್ಟ್ರವಾಗಿದೆ. ಚುಕ್, ಕೊಸ್ರೇ, ಪೋನ್‌ಪೇ ಮತ್ತು ಯಾಪ್ ಎಂಬ ರಾಜ್ಯಗಳು ಸೇರಿ ಮೈಕ್ರೋನೇಷ್ಯಾ ಆಗಿದೆ. WHO ಪ್ರಕಾರ, ಮೈಕ್ರೋನೇಷಿಯಾದಲ್ಲಿ ಪ್ರತಿ 100 ಜನರಿಗೆ ಶೇ. 38.37ರಷ್ಟು ಜನರು ಕೊರೊನಾ ಲಸಿಕೆಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: Corbevax: ಭಾರತಕ್ಕೆ ಇಂದೇ ಕಾರ್ಬ್ವ್ಯಾಕ್ಸ್ ಪೂರೈಕೆ ಸಾಧ್ಯತೆ; ಸದ್ಯದಲ್ಲೇ ಕಡಿಮೆ ಬೆಲೆಯ ಕೊವಿಡ್ ಲಸಿಕೆ ಲಭ್ಯ
Sputnik Vaccine: ಭಾರತದಲ್ಲಿ ಸ್ಪುಟ್ನಿಕ್ ಸಿಂಗಲ್ ಡೋಸ್ ಕೊವಿಡ್ ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ
Published On - 4:18 pm, Fri, 18 February 22