Video Viral: ಮನುಷ್ಯನ ರುಂಡವನ್ನು ಕಚ್ಚಿಕೊಂಡು ಬೀದಿ ಬೀದಿ ಸುತ್ತಿದ ಶ್ವಾನ
ಮೆಕ್ಸಿಕೋದ ಝಕಾಟೆಕಾಸ್ ನಿವಾಸಿಗಳು, ನಾಯಿಯೊಂದು ಮನುಷ್ಯನ ಶಿರಚ್ಛೇದಿತ ತಲೆಯನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ರಾತ್ರಿಯಲ್ಲಿ ಮೆಕ್ಸಿಕೋ ಬೀದಿ ಬೀದಿಯಲ್ಲಿ ಓಡುವುದನ್ನು ನೋಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಮೆಕ್ಸಿಕೋದಲ್ಲಿ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಹೌದು ಮೆಕ್ಸಿಕೋದ ಝಕಾಟೆಕಾಸ್ ನಿವಾಸಿಗಳು, ನಾಯಿಯೊಂದು ಮನುಷ್ಯನ ಶಿರಚ್ಛೇದಿತ ತಲೆಯನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ರಾತ್ರಿಯಲ್ಲಿ ಮೆಕ್ಸಿಕೋ ಬೀದಿ ಬೀದಿಯಲ್ಲಿ ಓಡುವುದನ್ನು ನೋಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮ ವೈರಲ್ ಆಗುತ್ತಿದೆ. ಈ ಶ್ವಾನವು ಮನುಷ್ಯನನ್ನು ತಿಂದು ಈ ತಲೆಯನ್ನು ಹೊತ್ಕೊಂಡು ಹೋಗುತ್ತಿದೆ ಎಂದು ಹೇಳಲಾಗಿದೆ.
ಫಾಕ್ಸ್ ನ್ಯೂಸ್ ಪ್ರಕಾರ , ಕಳೆದ ವಾರ ಬುಧವಾರದಂದು ಈ ಘಟನೆ ನಡೆದಿದೆ. ಮೆಕ್ಸಿಕೋದ ಉತ್ತರದಲ್ಲಿರುವ ಝಕಾಟೆಕಾಸ್ನಲ್ಲಿ ಈ ನಾಯಿಯು ಮಾನವ ತಲೆಯನ್ನುಕಚ್ಚಿಕೊಂಡು ಹೋಗಿದೆ ಎಂದು ಹೇಳಲಾಗಿದೆ. ಛಿದ್ರಗೊಂಡ ತಲೆಯನ್ನು ಮಾಂಟೆ ಎಸ್ಕೊಬೆಡೊ ಪಟ್ಟಣದ ಸ್ವಯಂಚಾಲಿತ ಟೆಲ್ಲರ್ ಬೂತ್‌ನಲ್ಲಿ ಮುಂದಿನ ತಲೆ ನಿಮ್ಮದು ಎಂದು ಎಚ್ಚರಿಕೆಯ ಫಲಕವನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಯೊಬ್ಬರು ನಾಯಿಯ ಬಾಯಿಯಿಂದ ಮನುಷ್ಯನ ತಲೆಯನ್ನು ತೆಗೆದು ನೋಡುತ್ತಿದ್ದಾರೆ, ಅದರಲ್ಲಿ ಈ ಸಂದೇಶವನ್ನು ಮತ್ತೆ ಬರೆಯಲಾಗಿತ್ತು. ಈ ಡ್ರಗ್ ಕಾರ್ಟೆಲ್‌ಗಳನ್ನು ಪೊಲೀಸ್ ಅಧಿಕಾರಿಗಳನ್ನು ಬೆದರಿಸುವ ಉದ್ದೇಶದಿಂದ ಈ ರೀತಿಯ ಸಂದೇಶವನ್ನು ಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಪ್ರಪಂಚದ ಅತ್ಯಂತ ಭಯಭೀತ ಕಾರ್ಟೆಲ್‌ಗಳಲ್ಲಿ ಒಂದಾದ ಕಾರ್ಟೆಲ್ ಜಲಿಸ್ಕೋ ನ್ಯೂವಾ ಜನರೇಶನ್ (CJNG) ಈ ಕೃತ್ಯದ ಹಿಂದೆ ಇದೆ ಎಂದು ಹೇಳಲಾಗಿದೆ. ಇದು ಯಾರ ತಲೆ ಎಂದು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ, ದೇಹದ ಉಳಿದ ಭಾಗಗಳು ಸಹ ಪತ್ತೆಯಾಗಿಲ್ಲ. ಕ್ರಿಮಿನಲ್ ಗ್ಯಾಂಗ್‌ಗಳ ನಡುವಿನ ವಿವಾದ ಕಾರಣದಿಂದ ಈ ಘಟನೆ ಸಂಭವಿಸಿದೆ ಎಂದು ಮೆಕ್ಸಿಕೋದ ಉಪ ಭದ್ರತಾ ಸಚಿವ ರಿಕಾರ್ಡೊ ಮೆಜಿಯಾ ಹೇಳಿದರು, ಸಂಘಟಿತ ಅಪರಾಧ ಗುಂಪುಗಳಾದ ಲಾ ಫ್ಯಾಮಿಲಿಯಾ ಮೈಕೋಕಾನಾ ಮತ್ತು ಲಾಸ್ ಟಕಿಲೆರೋಸ್ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
Published On - 10:55 am, Tue, 1 November 22




