AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget 2022: ಕನಿಷ್ಠ ಬೆಂಬಲ ಬೆಲೆ, ವಿಮೆ ಯೋಜನೆ ಸೇರಿದಂತೆ ಕರ್ನಾಟಕ ಬಜೆಟ್​ನಿಂದ ನಿರೀಕ್ಷೆಗಳೇನು?

ಕರ್ನಾಟಕ ಬಜೆಟ್ 2022ರಿಂದ ಕೃಷಿ ವಲಯದ ನಿರೀಕ್ಷೆಗಳೇನು ಎಂಬ ಬಗ್ಗೆ ವರದಿ ಇಲ್ಲಿದೆ. ಮಾರ್ಚ್ 4, 2022ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ.

Karnataka Budget 2022: ಕನಿಷ್ಠ ಬೆಂಬಲ ಬೆಲೆ, ವಿಮೆ ಯೋಜನೆ ಸೇರಿದಂತೆ ಕರ್ನಾಟಕ ಬಜೆಟ್​ನಿಂದ ನಿರೀಕ್ಷೆಗಳೇನು?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 03, 2022 | 1:03 PM

Share

ಭಾರತದ ಆರ್ಥಿಕತೆ ಬೆನ್ನೆಲುಬು ಕೃಷಿ ಎಂಬುದು ಸಾಮಾನ್ಯವಾಗಿ ಬಳಸುವ ಮಾತು. ಕಳೆದ ಕೆಲ ವರ್ಷಗಳಿಂದ ಸೇವಾ ಕ್ಷೇತ್ರವು ಪ್ರಾಮುಖ್ಯತೆ ಪಡೆದಿದ್ದರೂ ಕೃಷಿಯ ಮಹತ್ವವನ್ನು ಎಂದಿಗೂ ತಳ್ಳಿಹಾಕಲಾಗುವುದಿಲ್ಲ. 2020-21ರಲ್ಲಿ ಭಾರತವು ಕೊರೊನಾ ಮೊದಲ ಅಲೆಯಿಂದ ತತ್ತರಿಸಿದಾಗ ಇದು ಚೆನ್ನಾಗಿ ಅರಿವಿಗೆ ಬಂತು. ಆ ಸಮಯದಲ್ಲಿ ಕೈಗಾರಿಕೆ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳು ಆರ್ಥಿಕ ಚಟುವಟಿಕೆಯಲ್ಲಿ ಗಮನಾರ್ಹ ಕುಸಿತವನ್ನು ಕಂಡಾಗ ಸಮೃದ್ಧವಾದ ಮುಂಗಾರು ಭಾರತದ ಕೃಷಿ ಕ್ಷೇತ್ರವು ಆರ್ಥಿಕ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳಲು ಸಹಾಯ ಮಾಡಿತು. ಕರ್ನಾಟಕವು ಆಹಾರ ಧಾನ್ಯಗಳ ಅತಿದೊಡ್ಡ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿದ್ದು, ತೋಟಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹಾಗಾದರೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ಬಜೆಟ್-2022 (Karnataka Budget 2022)  ಅನ್ನು ಮಂಡಿಸುವಾಗ ಕೃಷಿ ಕ್ಷೇತ್ರಕ್ಕೆ ಏನು ನೀಡಲಿದ್ದಾರೆ ಎಂಬ ಕುತೂಹಲ ಸಹಜ.

“ಬಜೆಟ್-2022 ನಿಜವಾಗಿಯೂ ರೈತ ಕೇಂದ್ರಿತ ಬಜೆಟ್ ಆಗಿರಬೇಕು. ಕೃಷಿ ಕ್ಷೇತ್ರಕ್ಕೆ ನಿರ್ಣಾಯಕ ಉಪಕ್ರಮ ಮತ್ತು ಕ್ರಮದ ಅಗತ್ಯವಿದೆ,” ಎಂದು ರೈತ ಮುಖಂಡ ವಿಕಾಸ್ ಸೊಪ್ಪಿನ್ ಹೇಳುತ್ತಾರೆ. ರಸಗೊಬ್ಬರ ಮತ್ತು ಒಳಹರಿವಿನ ಕಡೆಗೆ ಹೆಚ್ಚಿನ ಹಂಚಿಕೆ ಮಾಡುವುದರಿಂದ ಸರ್ಕಾರವು ದೂರ ಇರಬೇಕು ಎಂದು ವಿಕಾಸ್ ಸೊಪ್ಪಿನ್ ಅಭಿಪ್ರಾಯಪಟ್ಟಿದ್ದಾರೆ. ಈ ಕ್ರಮವು ರೈತರ ವೆಚ್ಚದಲ್ಲಿ ಇನ್‌ಪುಟ್ ಪೂರೈಕೆದಾರರಿಗೆ ಸಹಾಯ ಮಾಡುವ ಗುರಿಯನ್ನು ಮಾತ್ರ ಹೊಂದಿದೆ ಎಂದು ಅವರು ಹೇಳುತ್ತಾರೆ. ಕೃಷಿಯತ್ತ ಗಮನ ನೀಡಿ, 2021ರಲ್ಲಿ ರಾಜ್ಯ ಬಜೆಟ್ ಮಂಡಿಸುವಾಗ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಕೃಷಿ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಹಲವಾರು ಕ್ರಮಗಳನ್ನು ಘೋಷಿಸಿದ್ದರು. 2020-21ರಲ್ಲಿ ಈ ವಲಯವು ಮಾತ್ರ ಬೆಳವಣಿಗೆಯನ್ನು ಕಂಡಿತು. ಇದು ಶೇ 6.4ರಷ್ಟು ಬೆಳವಣಿಗೆ ಹೊಂದಿದ್ದು, ಕೈಗಾರಿಕೆ ಮತ್ತು ಸೇವಾ ವಲಯಗಳೆರಡೂ ಹಿಂದುಳಿದಿದ್ದವು.

“ದೇಶೀಯ ತಳಿಗಳ ಅಭಿವೃದ್ಧಿ, ಕುರಿ ಮತ್ತು ಮೇಕೆಗಳ ಸಾವು ಸಂಭವಿಸಿದಾಗ ರೈತರಿಗೆ ಪರಿಹಾರ, ಸಾವಯವ ಕೃಷಿಯತ್ತ ನವೀಕೃತ ಗಮನ ಮತ್ತು ರೈತರಿಗೆ ಸುಸ್ಥಿರ ಆದಾಯವನ್ನು ಪಡೆಯಲು ಸಹಾಯ ಮಾಡುವವರೆಗೆ ಹಲವಾರು ಯೋಜನೆಗಳಿದ್ದವು. ವಿವಿಧ ಯೋಜನೆಗಳ ಅಡಿಯಲ್ಲಿ ಎಷ್ಟು ಫಲಾನುಭವಿಗಳು ಇದ್ದರು ಎಂಬುದನ್ನು ನಾವು ಲೆಕ್ಕ ಮಾಡಬೇಕಾಗಿದೆ. ಯಾವುದೇ ನಿಯಮಾವಳಿ ಇಲ್ಲದೆ ನಾವು ಈ ಘೋಷಣೆಗಳಿಂದ ಬೇಸತ್ತಿದ್ದೇವೆ. ಈ ಭರವಸೆಗಳು ಟೊಳ್ಳು ಎಂಬುದಾಗಿ ತೋರುತ್ತದೆ,” ಎಂದು ಹೆಸರು ಹೇಳಲು ಇಚ್ಛಿಸದ ಒಬ್ಬ ರೈತ ನಾಯಕ ಹೇಳುತ್ತಾರೆ.

ಎಂಎಸ್‌ಪಿ ನಿಯಮಾವಳಿ ಈ ಮಧ್ಯೆ ರೈತರಿಗೆ ಕನಿಷ್ಠ ಆದಾಯವನ್ನು ಖಾತ್ರಿ ಪಡಿಸುವ ಜತೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾರ್ಯವಿಧಾನಕ್ಕೆ ಕಟ್ಟುನಿಟ್ಟಾದ ನಿಯಮಾವಳಿಯನ್ನು ಖಾತ್ರಿಪಡಿಸುವ ಬಜೆಟ್ ಅನ್ನು ಮಂಡಿಸಲು ಕರ್ನಾಟಕ ರೈತ ಸಂಘದ ಒಕ್ಕೂಟ (ಸಿಎಫ್‌ಎ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೇಳಿದೆ. ಕೇಂದ್ರ ಸರ್ಕಾರವು 2021-22ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿದ್ದರೂ ಉತ್ಪಾದನಾ ವೆಚ್ಚವು ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಾಗಿದೆ. ಆಗಿನ ಚಾಲ್ತಿಯಲ್ಲಿರುವ ಎಂಎಸ್​ಪಿ ಮತ್ತು ರಾಗಿ ಸೇರಿದಂತೆ ಇತರ ಬೇಳೆಕಾಳುಗಳ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದಾಗ ಶೇ 5ರಿಂದ 33ರಷ್ಟು ಕಡಿಮೆ ಇದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೂ ಮೆಕ್ಕೆಜೋಳ, ಭತ್ತ, ಕಾಳು ಮತ್ತು ಹತ್ತಿಯಂತಹ ಇತರ ಬೆಳೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಅನುಕ್ರಮವಾಗಿ ಶೇ 14, ಶೇ 8, ಶೇ 7 ಮತ್ತು 15ರಷ್ಟು ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಾಗಿದೆ. ಆದರೂ ಇಲ್ಲೊಂದು ಎಚ್ಚರಿಕೆ, ಚರ್ಚೆಯಲ್ಲಿರುವ ಡೇಟಾವು 2018-19ಕ್ಕೆ ಸಂಬಂಧಿಸಿದೆ. ಎಚ್ಚರಿಕೆಯ ಹೊರತಾಗಿ, ಉತ್ಪಾದನೆಯ ವೆಚ್ಚವು ಹೆಚ್ಚುತ್ತಿರುವ ಇನ್​ಪುಟ್​ಗಳಿಗೆ ವಿಶೇಷವಾಗಿ ರಸಗೊಬ್ಬರಗಳ ಬೆಲೆಗೆ ಧನ್ಯವಾದ ಹೇಳಬೇಕು. ರೈತರು ಲಾಭದಾಯಕ ಬೆಲೆಯನ್ನು ಪಡೆಯುತ್ತಾರೆ ಎಂದು ಭಾವಿಸುತ್ತಾರೆ.

ಆರೋಗ್ಯ ವಿಮೆಗೆ ಬೇಡಿಕೆ ಕರ್ನಾಟಕದ ರೈತರು ಪೂರೈಸಲು ಬಯಸುವ ಮತ್ತೊಂದು ಬೇಡಿಕೆ ಅಂದರೆ, ಅದು ಆರೋಗ್ಯ ವಿಮಾ ಯೋಜನೆಯಾಗಿದೆ. ಸಿಎಫ್‌ಎ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ರೈತರಿಗೆ ಮೀಸಲಾದ ಕಡ್ಡಾಯ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಬೇಕು ಎಂದಿದ್ದಾರೆ. ರಾಜ್ಯದಲ್ಲಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ರೈತ ಬಂಧು ಜೀವ ವಿಮಾ ಯೋಜನೆಯ ಮಾದರಿಯಲ್ಲಿ ರೈತರಿಗಾಗಿ ಜೀವ ವಿಮಾ ಯೋಜನೆಯನ್ನು ಹೊಂದಿದ್ದು, ಅದರ ಅಡಿಯಲ್ಲಿ ನೈಸರ್ಗಿಕ ಅಥವಾ ಆಕಸ್ಮಿಕ ಕಾರಣಕ್ಕೆ ರೈತ ಮೃತಪಟ್ಟರೂ ರೈತನ ಕುಟುಂಬಕ್ಕೆ ರೂ. 5 ಲಕ್ಷ ಮೊತ್ತವನ್ನು ನೀಡಲಾಗುತ್ತದೆ ಎಂದು ಕರ್ನಾಟಕದ ರೈತರಿದ್ದಾರೆ. ಕೇಂದ್ರ ಸರ್ಕಾರವು ‘ಆಯುಷ್ಮಾನ್ ಭಾರತ್’ ಯೋಜನೆಯನ್ನು ಪ್ರಾರಂಭಿಸಿದಾಗ ಕರ್ನಾಟಕ ಸರ್ಕಾರವು ನಡೆಸುತ್ತಿದ್ದ ಜನಪ್ರಿಯ ಯಶಸ್ವಿನಿ ಯೋಜನೆಯನ್ನು ವಿಲೀನಗೊಳಿಸಲಾಯಿತು. ಫಲಾನುಭವಿಗಳು ಸಹಕಾರಿ ಸಂಸ್ಥೆಯಲ್ಲಿ ಸದಸ್ಯರಾಗಬೇಕೆಂದು ಕಡ್ಡಾಯಗೊಳಿಸಿದ ಯಶಸ್ವಿನಿ ಯೋಜನೆಯು ಉಪಯುಕ್ತ ಆಗಿದೆ ಎಂದು ವಿಕಾಸ್ ಸೊಪ್ಪಿನ್ ಹೇಳುತ್ತಾರೆ ಮತ್ತು ಇದರರ್ಥ ಸುಮಾರು ಶೇ 70ರಷ್ಟು ರೈತರು ವ್ಯಾಪ್ತಿಗೆ ಒಳಪಡುತ್ತಾರೆ.

ಅದೇ ಸಮಯದಲ್ಲಿ ರೈತ ಸಮುದಾಯವು ನ್ಯಾಯಯುತವಾದ ಬೆಲೆ ಪಡೆಯಲು ಸಾಧ್ಯವಾಗಬೇಕಾದಲ್ಲಿ ರಾಜ್ಯದ ಕೃಷಿ ಮಾರುಕಟ್ಟೆ ಮೂಲಸೌಕರ್ಯವನ್ನು ಬಲಪಡಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಮಾರುಕಟ್ಟೆ ಮೂಲಸೌಕರ್ಯವನ್ನು ಬಲಪಡಿಸಿದರೆ ಸಾವಯವ ಕೃಷಿಯತ್ತ ಬದಲಾವಣೆ ಮಾಡಲು ಹೆಚ್ಚು ಹೆಚ್ಚು ರೈತರನ್ನು ಉತ್ತೇಜಿಸಬಹುದು ಎಂದು ರೈತರು ನಂಬುತ್ತಾರೆ. ಉದಾಹರಣೆಗೆ ಕೊರೊನಾ ಕರ್ನಾಟಕದ ಸಾವಯವ ಕೃಷಿ ಚಳವಳಿಯ ಪ್ರಗತಿಗೆ ತಡೆಯೊಡ್ಡಿದೆ. 2023-24ರ ವೇಳೆಗೆ ಸಾವಯವ ಕೃಷಿಯ ಪ್ರದೇಶವನ್ನು 50,000 ಹೆಕ್ಟೇರ್‌ಗೆ ವಿಸ್ತರಿಸಲು ಸರ್ಕಾರ ಉತ್ಸುಕವಾಗಿದೆ.

ಇದನ್ನೂ ಓದಿ: Karnataka Budget 2022: ಕರ್ನಾಟಕ ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ: ಕಂದಾಯ ಸಚಿವ ಆರ್ ಅಶೋಕ್ ಜೊತೆ ಸಭೆ