AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಶಾ ಭೋಸ್ಲೆ ಗಳಿಸಿದ ಆಸ್ತಿಗಳೇನು? ಅವರ ಹಾಡು, ಬ್ಯುಸಿನೆಸ್, ರಿಯಲ್ ಎಸ್ಟೇಟ್ ಆದಾಯ ಎಷ್ಟಿತ್ತು ಗೊತ್ತಾ?

Asha Bhosle's net worth: ಲತಾ ಮಂಗೇಶ್ಕರ್ ಅವರ ತಂಗಿಯಾದ ಆಶಾ ಭೋಸ್ಲೆ ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಎಂಟು ದಶಕಗಳಷ್ಟು ಸುದೀರ್ಘ ಕಾಲ ಗಾಯಕಿಯಾಗಿದ್ದ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ರೆಸ್ಟೋರೆಂಟ್​ಗಳ ಬ್ಯುಸಿನೆಸ್​ನಲ್ಲಿ ಯಶಸ್ವಿಯಾಗಿದ್ದರು. ರಿಯಲ್ ಎಸ್ಟೇಟ್ ಆಸ್ತಿಗಳನ್ನೂ ಮಾಡಿದ್ದರು. ಅವರ ಒಟ್ಟು ಆಸ್ತಿಮೌಲ್ಯ ಎಷ್ಟು?

ಆಶಾ ಭೋಸ್ಲೆ ಗಳಿಸಿದ ಆಸ್ತಿಗಳೇನು? ಅವರ ಹಾಡು, ಬ್ಯುಸಿನೆಸ್, ರಿಯಲ್ ಎಸ್ಟೇಟ್ ಆದಾಯ ಎಷ್ಟಿತ್ತು ಗೊತ್ತಾ?
ಆಶಾ ಭೋಸ್ಲೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 12, 2026 | 5:11 PM

Share

ಭಾರತ ಕಂಡ ಅತ್ಯದ್ಭುತ ಗಾಯನ ಪ್ರತಿಭೆಗಳಲ್ಲಿ ಒಬ್ಬರೆನಿಸಿರುವ ಆಶಾ ಭೋಸ್ಲೆ (Asha Bhosle) ಭಾನುವಾರ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಸಂಗೀತ ಕ್ಷೇತ್ರದಲ್ಲಿ ಒಂದು ಯುಗದ ಅಂತ್ಯವಾಗಿದೆ. 92 ವರ್ಷ ವಯಸ್ಸಾಗಿದ್ದ ಅವರು ಅಪಾರ ಮತ್ತು ಅವಿಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ. ಅವರಿಗೆ ಸಂಗೀತವೇ ಉಸಿರು ಮತ್ತು ಜೀವನವಾಗಿತ್ತು. ಲತಾ ಮಂಗೇಶ್ಕರ್, ಉಷಾ ಮಂಗೇಶ್ಕರ್, ಮೀನಾ ಮಂಗೇಶ್ಕರ್, ಹೃದಯನಾಥ್ ಮಂಗೇಶ್ಕರ್ ಅವರುಗಳ ಸೋದರಿಯಾದ ಆಶಾ ಭೋಸ್ಲೆ ಬಹಳ ಸುದೀರ್ಘ ಕಾಲ ಗಾಯನ ಕ್ಷೇತ್ರದಲ್ಲಿ ಮಿಂಚಿದವರು. ದಶಕಗಳ ಕಾಲ ಅವರ ಗಾಯನ ಇದೆ. ವಿವಿಧ ತಲೆಮಾರುಗಳ ಹಾಡುಗಳು ಅವರ ಕಂಠಸಿರಿಯಲ್ಲಿ ಬಂದಿವೆ.

ಆಶಾ ಭೋಸ್ಲೆ ಅವರು ಗಾಯನದ ಜೊತೆಗೆ ಬ್ಯುಸಿನೆಸ್, ಹೂಡಿಕೆ ವ್ಯವಹಾರಗಳನ್ನೂ ಮಾಡಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಆಶಾ ಭೋಸ್ಲೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಎಂಟು ದಶಕಗಳ ಕಾಲ ಗಾಯಕಿಯಾಗಿದ್ದ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದು 12,000ಕ್ಕೂ ಹೆಚ್ಚು ಹಾಡುಗಳು. ಶಾಸ್ತ್ರೀಯ ಸಂಗೀತ, ಘಜಲ್, ಕ್ಯಾಬರೆ, ಪಾಪ್ ಹೀಗೆ ವಿವಿಧ ಪ್ರಾಕಾರಗಳ ಹಾಡುಗಳು ಅವರ ಕಂಠದಿಂದ ಬಂದಿವೆ. 2011ರಲ್ಲಿ ಅವರಿಗೆ ಗಿನ್ನೆಸ್ ದಾಖಲೆಯ ಗೌರವವೂ ಸಿಕ್ಕಿತು.

ಇದನ್ನೂ ಓದಿ: ಚೆಲ್ಲಾ ಪಿಲ್ಲಿಯಾದ ಜೀವನ, ಕೈಹಿಡಿದ ಸಂಗೀತ: ಆಶಾ ಭೋಸ್ಲೆ ಎಂಬ ಫೀನಿಕ್ಸ್ ಹಕ್ಕಿ

250 ಕೋಟಿ ರೂ ಮೌಲ್ಯದ ಆಸ್ತಿವಂತೆಯಾಗಿದ್ದ ಆಶಾ

ಆಶಾ ಭೋಸ್ಲೆ ಅವರು ಹಾಡಿನಿಂದ ಸಾಕಷ್ಟು ಆದಾಯ ಗಳಿಸಿದ್ದಾರೆ. ಇತರ ವ್ಯವಹಾರಗಳನ್ನೂ ಸೇರಿಸಿದರೆ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 200-250 ಕೋಟಿ ರೂ ಎನ್ನಲಾಗಿದೆ.

ರೆಸ್ಟೋರೆಂಟ್ ಬ್ಯುಸಿನೆಸ್

ಆಶಾ ಭೋಸ್ಲೆ ಅವರು ಹಾಡು ಮಾತ್ರವಲ್ಲದೆ ಬ್ಯುಸಿನೆಸ್ಗೂ ಕೈಹಾಕಿದ್ದರು. ಆಶಾಸ್ ಎನ್ನುವ ಅಂತಾರಾಷ್ಟ್ರೀಯ ರೆಸ್ಟೋರೆಂಟ್ ಚೈನ್ ಅನ್ನು 2002ರಲ್ಲಿ ದುಬೈನಲ್ಲಿ ಆರಂಭಿಸಿದ್ದರು. ಯುಎಇ, ಕುವೇತ್, ಬಹರೇನ್ ಹಾಗೂ ಬ್ರಿಟನ್ ಮೊದಲಾದ ದೇಶಗಳಲ್ಲಿ ಅವರ ರೆಸ್ಟೋರೆಂಟ್​ಗಳಿವೆ.

ಇದನ್ನೂ ಓದಿ: ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ: ಪ್ರಧಾನಿ ನರೇಂದ್ರ ಮೋದಿ ಸಂತಾಪ

ರಿಯಲ್ ಎಸ್ಟೇಟ್ ಆಸ್ತಿಗಳು

ಆಶಾ ಭೋಸ್ಲೆ ಅವರು ಮುಂಬೈ, ಪುಣೆ ನಗರಗಳಲ್ಲಿ ಮನೆ ಇತ್ಯಾದಿ ಆಸ್ತಿಗಳನ್ನು ಹೊಂದಿದ್ದಾರೆ. ಅವರುಗಳ ಮೌಲ್ಯ ಸುಮಾರು 80-100 ಕೋಟಿ ರೂ ಎಂದು ಹೇಳಲಾಗುತ್ತಿದೆ.

ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟ ಆಶಾ ಭೋಸ್ಲೆ ಅವರ ಅಂತ್ಯಸಂಸ್ಕಾರ ಏಪ್ರಿಲ್ 13, ಸೋಮವರ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ನಡೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us