Tax revenue: 2020-21ರ ಹಣಕಾಸು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆಯಿಂದ ಕೇಂದ್ರಕ್ಕೆ 4.55 ಲಕ್ಷ ಕೋಟಿ ರೂ. ಆದಾಯ

2020-21ರ ಹಣಕಾಸು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ರೂ. 4.55 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ಸಂಗ್ರಹ ಮಾಡಿದೆ. ರಾಜ್ಯ ಸರ್ಕಾರಗಳು ಮಾರಾಟ ತೆರಿಗೆ 2.02 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿವೆ.

Tax revenue: 2020-21ರ ಹಣಕಾಸು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆಯಿಂದ ಕೇಂದ್ರಕ್ಕೆ 4.55 ಲಕ್ಷ ಕೋಟಿ ರೂ. ಆದಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Dec 20, 2021 | 6:27 PM

ಕಳೆದ ಹಣಕಾಸು ವರ್ಷದಲ್ಲಿ (2020-21) ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರದ ತೆರಿಗೆಯು ಸರ್ಕಾರದ ಬೊಕ್ಕಸಕ್ಕೆ 4.55 ಲಕ್ಷ ಕೋಟಿ ರೂಪಾಯಿಯ ಆದಾಯವನ್ನು ತಂದಿದೆ. ರಾಜ್ಯ ಸರ್ಕಾರಗಳು ಮಾರಾಟ ತೆರಿಗೆ/ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್ (VAT) ಮೂಲಕ 2.02 ಲಕ್ಷ ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಿವೆ. “ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ ತೆಲಿ ಸೋಮವಾರ ಪ್ರಶ್ನೆಯೊಂದಕ್ಕೆ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿ, ಕಳೆದ ಐದು ವರ್ಷಗಳಲ್ಲಿ ಪೆಟ್ರೋಲಿಯಂ ವಲಯವು ಕೇಂದ್ರದ ಆದಾಯಕ್ಕೆ ನೀಡಿದ ಕೊಡುಗೆ ಬಗ್ಗೆ ಮಾಹಿತಿ ನೀಡಿದರು,” ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಭಾರತ ಸೇರಿದಂತೆ ಪ್ರಮುಖ ತೈಲ ಗ್ರಾಹಕರು 23 ದೇಶಗಳನ್ನು ಒಳಗೊಂಡಿರುವ ಒಪೆಕ್ ಪ್ಲಸ್ ಗುಂಪನ್ನು ಮನವೊಲಿಸಲು ವಿಫಲರಾಗಿದ್ದಾರೆ. ಏರುತ್ತಿರುವ ಕಚ್ಚಾ ಬೆಲೆಗಳು ಜಾಗತಿಕ ಆರ್ಥಿಕ ಚೇತರಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಭಾರತ, ಅಮೆರಿಕ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಇತರ ಪ್ರಮುಖ ಗ್ರಾಹಕರ ಜತೆಗೆ ಸಮನ್ವಯದೊಂದಿಗೆ ತನ್ನ ಕಾರ್ಯತಂತ್ರದ ತೈಲ ನಿಕ್ಷೇಪಗಳಿಂದ 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.

ದೆಹಲಿಯಲ್ಲಿ ಸೋಮವಾರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಔಟ್‌ಲೆಟ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ ರೂ. 95.41 ಮತ್ತು ರೂ. 86.67 ಕ್ಕೆ ಮಾರಾಟ ಆಗುತ್ತಿದೆ. ಜಾಗತಿಕ ತೈಲ ಬೆಲೆಗಳು ಬ್ರೆಂಟ್‌ ಬ್ಯಾರೆಲ್‌ಗೆ 71.26 ಯುಎಸ್​ಡಿ ಮತ್ತು ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ 68.07 ಡಾಲರ್​ ಬ್ಯಾರೆಲ್‌ಗೆ ವ್ಯಾಪಾರ ಮಾಡುತ್ತಿತ್ತು. ಒಮನ್, ದುಬೈ ಮತ್ತು ಬ್ರೆಂಟ್ ಕಚ್ಚಾ ತೈಲವನ್ನು ಒಳಗೊಂಡಿರುವ ಭಾರತೀಯ ಬ್ಯಾಸ್ಕೆಟ್ ಕಚ್ಚಾ ತೈಲದ ಬೆಲೆ ಡಿಸೆಂಬರ್ 17ರಂದು ಪ್ರತಿ ಬ್ಯಾರೆಲ್‌ಗೆ 76.17 ಡಾಲರ್ ಆಗಿತ್ತು.

ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ಕಂಪೆನಿಗಳು ಅಮೆರಿಕ, ರಷ್ಯಾ, ಕೆನಡಾ, ಆಸ್ಟ್ರೇಲಿಯಾ, ಬ್ರೆಜಿಲ್, ಗಯಾನಾ, ನಾರ್ವೆ, ಈಜಿಪ್ಟ್, ಗಬಾನ್, ಘಾನಾ, ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಲಿಬಿಯಾ ಮತ್ತು ನೈಜೀರಿಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿವೆ. ಒಪೆಕ್ ಅಲ್ಲದ ಮೂಲಗಳಿಂದ ಕಚ್ಚಾ ತೈಲ ಪೂರೈಕೆಯೊಂದಿಗೆ ದೇಶದ ಎನರ್ಜಿ ಬುಟ್ಟಿಯನ್ನು ವೈವಿಧ್ಯಗೊಳಿಸಲು ಭಾರತ ಸರ್ಕಾರವು ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಭಾರತವು ಯಾವುದೇ ದೇಶದಿಂದ ಕಚ್ಚಾ ತೈಲವನ್ನು ಪಡೆಯುವುದಾಗಿ ಹೇಳಿದೆ, ಅದು ಅಗ್ಗದ ಮತ್ತು ಅನುಕೂಲಕರ ಷರತ್ತುಗಳನ್ನು ನೀಡುತ್ತದೆ.

ಭಾರತವು ತನ್ನ ತೈಲ ಬೇಡಿಕೆಯ ಶೇ 85ರಷ್ಟು ಮತ್ತು ಅದರ ನೈಸರ್ಗಿಕ ಅನಿಲದ ಅವಶ್ಯಕತೆಗಳ ಶೇ 55ರಷ್ಟನ್ನು ಪೂರೈಸಲು ಆಮದುಗಳ ಮೇಲೆ ಅವಲಂಬಿತವಾಗಿದೆ. ಒಪೆಕ್ ಭಾರತದ ಬಹುಪಾಲು ಕಚ್ಚಾ ತೈಲ ಆಮದುಗಳನ್ನು ಮತ್ತು ಜಾಗತಿಕ ಉತ್ಪಾದನೆಯ ಸುಮಾರು ಶೇ 40ರಷ್ಟಿದೆ. ಭಾರತವು 2020-21ರಲ್ಲಿ ಕಚ್ಚಾ ತೈಲ ಆಮದುಗಾಗಿ 62.71 ಶತಕೋಟಿ ಡಾಲರ್, 2019-20ರಲ್ಲಿ 101.4 ಶತಕೋಟಿ ಡಾಲರ್ ಮತ್ತು 2018-19ರಲ್ಲಿ 111.9 ಶತಕೋಟಿ ಡಾಲರ್ ಅನ್ನು ಖರ್ಚು ಮಾಡಿದೆ.

ಇದನ್ನೂ ಓದಿ: Petrol and Diesel Tax Collection: 3 ಹಣಕಾಸು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆಯ 8.02 ಲಕ್ಷ ಕೋಟಿ ರೂ. ಸಂಗ್ರಹ

Published On - 6:24 pm, Mon, 20 December 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ