ಷೇರು ಮಾರುಕಟ್ಟೆಯಲ್ಲಿ ಈ ವರ್ಷದ ವಿಶೇಷ ಮುಹೂರ್ತ ಟ್ರೇಡಿಂಗ್; ದಿನಾಂಕ, ಸಮಯ ಪ್ರಕಟಿಸಿದ ಎನ್‌ಎಸ್‌ಇ, ಬಿಎಸ್‌ಇ
2026ರ ದೀಪಾವಳಿ ಮುಹೂರ್ತ ಟ್ರೇಡಿಂಗ್ ನವೆಂಬರ್ 8ರಂದು ನಡೆಯಲಿದ್ದು, ಎನ್‌ಎಸ್‌ಇ ಮತ್ತು ಬಿಎಸ್‌ಇ ಪ್ರಕಟಿಸಿರುವ ವಿಶೇಷ ವಹಿವಾಟು ಸಮಯವನ್ನು ಪ್ರಕಟಿಸಿವೆ. ನವೆಂಬರ್ 8, ಭಾನುವಾರ ಸ್ಪೆಷಲ್ ಮುಹೂರ್ತ್ ಟ್ರೇಡಿಂಗ್ ನಡೆಯುತ್ತದೆ. ಅಂದು, ಮಧ್ಯಾಹ್ನ 2:05ರಿಂದ 15 ನಿಮಿಷಗಳ ಕಾಲ ಪ್ರೀ ಓಪನಿಂಗ್ ಸೆಷನ್ ಇರುತ್ತದೆ. ಆ ಬಳಿಕ ಒಂದು ಗಂಟೆ 10 ನಿಮಿಷ ಕಾಲ, ಅಂದರೆ ಮಧ್ಯಾಹ್ನ 3:30ರವರೆಗೆ ಸಹಜ ಟ್ರೇಡಿಂಗ್ ನಡೆಯುತ್ತದೆ.

ನವದೆಹಲಿ, ನವೆಂಬರ್ 3: ಹೊಸ ಸಂವತ್ಸರದ ಆರಂಭವನ್ನು ಸೂಚಿಸುವ ಮತ್ತು ಷೇರು ಮಾರುಕಟ್ಟೆಯಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲ್ಪಡುವ ವಾರ್ಷಿಕ ದೀಪಾವಳಿ ಮುಹೂರ್ತ ಟ್ರೇಡಿಂಗ್ (Muhurat Trading 2026) ವೇಳಾಪಟ್ಟಿಯನ್ನು ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಪ್ರಕಟಿಸಿವೆ. ಈ ವರ್ಷದ ಮುಹೂರ್ತ ಟ್ರೇಡಿಂಗ್ ನವೆಂಬರ್ 8 ರಂದು (ಭಾನುವಾರ) ನಡೆಯಲಿದೆ. ಅಂದು ರಜಾ ದಿನವಾಗಿದ್ದರೂ, ಕೆಲ ಹೊತ್ತು ವಿಶೇಷ ವಹಿವಾಟಿಗಾಗಿ ತೆರೆದಿರುತ್ತದೆ. ಲಕ್ಷ್ಮೀ ಪೂಜೆಯ ದಿನವಾದ ಅಂದು ವಿಶೇಷ ಸಮಯದಲ್ಲಿ ಟ್ರೇಡಿಂಗ್ ನಡೆಸಿದರೆ ಇಡೀ ವರ್ಷ ವ್ಯಾಪಾರ ವಹಿವಾಟು ಚೆನ್ನಾಗಿರುತ್ತದೆ ಎನ್ನುವ ನಂಬಿಕೆ ಇದೆ.
- ಪ್ರೀ-ಓಪನ್ ಸೆಷನ್ (Pre-open session): ಮಧ್ಯಾಹ್ನ 2:05 ರಿಂದ 2:20 ರವರೆಗೆ.
- ಮುಖ್ಯ ವಹಿವಾಟು ಅವಧಿ (Normal Market Session): ಮಧ್ಯಾಹ್ನ 2:20 ರಿಂದ 3:30 ರವರೆಗೆ (ಒಟ್ಟು 70 ನಿಮಿಷಗಳು).
ಇದನ್ನೂ ಓದಿ: ಟಿಕ್ಟಾಕ್ ಸ್ಥಾಪಕನನ್ನು ಮೀರಿಸಿದ ಮುಕೇಶ್ ಅಂಬಾನಿ ಈಗ ಏಷ್ಯಾದ ಅತಿದೊಡ್ಡ ಶ್ರೀಮಂತ
ವಹಿವಾಟಿನ ಮಹತ್ವ ಮತ್ತು ನಿಯಮಗಳು
ಮುಹೂರ್ತ ಟ್ರೇಡಿಂಗ್ ಕೇವಲ ಸಾಂಕೇತಿಕವಲ್ಲ, ಈ ಅವಧಿಯಲ್ಲಿ ನಡೆಯುವ ಪ್ರತಿಯೊಂದು ವಹಿವಾಟು ನೈಜವಾಗಿರುತ್ತದೆ (Real trades). ಎಂದಿನಂತೆ ಸಾಮಾನ್ಯ ಸೆಟ್ಲ್‌ಮೆಂಟ್ ನಿಯಮಗಳನ್ನು ಹೊಂದಿರುತ್ತದೆ.
ಹೂಡಿಕೆದಾರರು ತಮ್ಮ ಡೀಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳ ಮೂಲಕ ಎಂದಿನಂತೆ ಷೇರುಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.
ಇದನ್ನೂ ಓದಿ: ರಾತ್ರಿ ಹೊತ್ತು ಬೇಕೆಂದವರಿಗೆ ಸೂರ್ಯನ ಬೆಳಕು ಮಾರುವ ಯೋಜನೆ; ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯದ್ದೂ ಸಹಯೋಗ
ಹೂಡಿಕೆದಾರರಿಗೆ ಪ್ರಮುಖ ಸಲಹೆಗಳು
ಮಾರುಕಟ್ಟೆಯಲ್ಲಿ ವಹಿವಾಟಿನ ಅವಧಿ ಅತ್ಯಂತ ಕಡಿಮೆ (ಸುಮಾರು ಒಂದು ಗಂಟೆ) ಇರುವುದರಿಂದ ಹೆಚ್ಚಿನ ಏರಿಳಿತವಿರಬಹುದು.
ಮಾರುಕಟ್ಟೆ ಆದೇಶಗಳ (Market orders) ಬದಲು ಲಿಮಿಟ್ ಆರ್ಡರ್‌ಗಳನ್ನು (Limit orders) ಬಳಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡುತ್ತಾರೆ.
ಇದು ಐತಿಹಾಸಿಕ ಸಂಪ್ರದಾಯವಾಗಿದ್ದು, ಕೇವಲ ಒಂದು ದಿನದ ವಹಿವಾಟಿನಿಂದ ಖಚಿತವಾದ ಲಾಭ ಸಿಗುತ್ತದೆ ಎಂದಿಲ್ಲ. ಆದರೂ, ದೀರ್ಘಕಾಲೀನ ಆರ್ಥಿಕ ಗುರಿಗಳು ಮತ್ತು ಸ್ವಂತ ಸಂಶೋಧನೆಯ ಆಧಾರದ ಮೇಲೆ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವುದು ಒಳ್ಳೆಯದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




