AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reciprocal Tariffs: ಚೀನಾ, ಮೆಕ್ಸಿಕೋ, ಕೆನಡಾ ಆಯ್ತು, ಏ. 2ರಿಂದ ಭಾರತದ ಮೇಲೂ ಅಮೆರಿಕದಿಂದ ಪ್ರತಿ ಸುಂಕ; ಏನಿದು ಟ್ಯಾರಿಫ್ ನೀತಿ?

Explainer on USA's Reciprocal Tax: ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 2ರಿಂದ ಭಾರತವನ್ನೂ ಸೇರಿ ವಿವಿಧ ದೇಶಗಳ ಉತ್ಪನ್ನಗಳ ಮೇಲೆ ರೆಸಿಪ್ರೋಕಲ್ ಟ್ಯಾಕ್ಸ್ ಹಾಕುವುದಾಗಿ ಘೋಷಿಸಿದ್ದಾರೆ. ರೆಸಿಪ್ರೋಕಲ್ ಟ್ಯಾಕ್ಸ್ ಎಂದರೆ ಪ್ರತಿಸುಂಕ. ಅಂದರೆ, ಅಮೆರಿಕದ ಉತ್ಪನ್ನಗಳಿಗೆ ಒಂದು ದೇಶ ನಿರ್​ದಿಷ್ಟ ಸುಂಕ ವಿಧಿಸುತ್ತದೆ ಎಂದಲ್ಲಿ, ಅಷ್ಟೇ ಸುಂಕವನ್ನು ಆ ದೇಶದ ಉತ್ಪನ್ನಗಳಿಗೆ ಅಮೆರಿಕ ವಿಧಿಸುತ್ತದೆ. ಇದೇ ರೆಸಿಪ್ರೋಕಲ್ ಟ್ಯಾಕ್ಸ್. ಮುಯ್ಯಿಗೆ ಮುಯ್ಯಿ, ಮುಳ್ಳಿಗೆ ಮುಳ್ಳು ಎನ್ನಬಹುದು.

Reciprocal Tariffs: ಚೀನಾ, ಮೆಕ್ಸಿಕೋ, ಕೆನಡಾ ಆಯ್ತು, ಏ. 2ರಿಂದ ಭಾರತದ ಮೇಲೂ ಅಮೆರಿಕದಿಂದ ಪ್ರತಿ ಸುಂಕ; ಏನಿದು ಟ್ಯಾರಿಫ್ ನೀತಿ?
ಡೊನಾಲ್ಡ್ ಟ್ರಂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 05, 2025 | 4:06 PM

Share

ವಾಷಿಂಗ್ಟನ್, ಮಾರ್ಚ್ 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ತಮ್ಮ ಟ್ಯಾರಿಫ್ ನೀತಿಯನ್ನು ಶತಾಯಗತಾಯ ಜಾರಿಗೆ ತರಲು ಸಂಕಲ್ಪ ತೊಟ್ಟಂತಿದ್ದಾರೆ. ಈವರೆಗೂ ಅವರು ತಾವು ಹೇಳಿದಂತೆಯೇ ಮಾಡುತ್ತಿದ್ದಾರೆ. ಕೆನಡಾ, ಮೆಕ್ಸಿಕೋ ಮತ್ತು ಚೀನಾ ಮೇಲೆ ಸುಂಕ ವಿಧಿಸಿದ್ದಾರೆ. ಭಾರತ, ಐರೋಪ್ಯ ಒಕ್ಕೂಟ ಹಾಗೂ ಇತರ ದೇಶಗಳ ಮೇಲೂ ಟ್ಯಾರಿಫ್ ಹಾಕುವುದಾಗಿ ಹೇಳಿದ್ದಾರೆ. ಭಾರತ ಹಾಗೂ ಇತರ ದೇಶಗಳ ಮೇಲೆ ಏಪ್ರಿಲ್ 2ರಿಂದ ರೆಸಿಪ್ರೋಕಲ್ ಟ್ಯಾಕ್ಸ್ ಅಥವಾ ಪ್ರತಿ ಸುಂಕ (Reciprocal Tariffs) ವಿಧಿಸುವುದಾಗಿ ಅವರು ಘೋಷಿಸಿಬಿಟ್ಟಿದ್ದಾರೆ. ಏಪ್ರಿಲ್ 1ರಂದೇ ಈ ಕ್ರಮ ಜಾರಿಯಾಗಬೇಕಿತ್ತು. ಆದರೆ, ಅಂದು ಮೂರ್ಖರ ದಿನವಾದ್ದರಿಂದ ಏಪ್ರಿಲ್ 2ಕ್ಕೆ ಅದು ಆರಂಭವಾಗುತ್ತದೆ.

ಟ್ರಂಪ್ ಯಾಕಿಷ್ಟು ನಿಷ್ಠುರ?

ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಮತ್ತು ವಿದೇಶಾಂಗ ನೀತಿ ನೇರಾ ನೇರ ತೋರುತ್ತದೆ. ‘ನಮ್ಮ ಸರಕುಗಳಿಗೆ ಅವರೆಷ್ಟು ಟ್ಯಾಕ್ಸ್ ಹಾಕುತ್ತಾರೋ, ನಾವೂ ಕೂಡ ಅಷ್ಟೇ ಟ್ಯಾಕ್ಸ್ ಅನ್ನು ಅವರ ಸರಕುಗಳಿಗೆ ಹಾಕುತ್ತೇವೆ’ ಎಂದು ಡೊನಾಲ್ಡ್ ಟ್ರಂಪ್ ಏಪ್ರಿಲ್ 2ರಿಂದ ಜಾರಿಗೆ ಬರುವ ಹೊಸ ಟ್ಯಾರಿಫ್ ಕ್ರಮದ ಬಗ್ಗೆ ನೀಡಿದ ಚುಟುಕು ವಿವರಣೆ.

‘ಟ್ರಂಪ್ ಆಡಳಿತದಲ್ಲಿ ನಿಮ್ಮ ಉತ್ಪನ್ನವನ್ನು ಅಮೆರಿಕದಲ್ಲಿ ತಯಾರಿಸದೇ ಹೋದಲ್ಲಿ ಸುಂಕ ತೆರಬೇಕಾಗುತ್ತದೆ. ಕೆಲ ಪ್ರಕರಣಗಳಲ್ಲಿ ಹೆಚ್ಚು ಸುಂಕ ಕಟ್ಟಬೇಕಾಗುತ್ತದೆ. ದಶಕಗಳ ಕಾಲ ಬೇರೆ ದೇಶಗಳು ನಮ್ಮ ಮೇಲೆ ಸುಂಕ ಹೇರಿವೆ. ಅಂಥ ದೇಶಗಳ ವಿರುದ್ಧ ಸುಂಕ ವಿಧಿಸುವ ಸರದಿ ಈಗ ನಮ್ಮದು’ ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ
Image
ಕೆಲಸ ಬಿಟ್ಟರೆ 43 ಲಕ್ಷ ರು; ಎಸ್​ಇಸಿ ಆಫರ್
Image
ನಿಮ್ಮ ಇಮೇಲ್​ ನೋಡಲು ಐಟಿ ಇಲಾಖೆಗೆ ಇರಲಿದೆ ಅಧಿಕಾರ
Image
ಭಾರತ, ಚೀನಾ ಬಗ್ಗೆ ಭರವಸೆ ವ್ಯಕ್ತಪಡಿಸಿದ ಕ್ರಿಸ್ಟೋಫರ್ ವುಡ್
Image
ಟ್ರಂಪ್ ಟ್ಯಾಕ್ಸನ್ನು ಯುದ್ಧ ಕ್ರಮ ಎಂದ ವಾರನ್ ಬಫೆಟ್

ಇದನ್ನೂ ಓದಿ: ಸಾಲ ವಿಪರೀತವಾಯ್ತು; ಅಮೆರಿಕಕ್ಕೆ ‘ಹಾರ್ಟ್ ಅಟ್ಯಾಕ್’ ಆಗೋ ಮುನ್ನ ಸರಿಮಾಡಿ: ರೇ ಡೇಲಿಯೋ

‘ಹಲವು ಅಧ್ಯಕ್ಷರು 4ರಿಂದ 8 ವರ್ಷ ಕಾಲ ಮಾಡಲು ಸಾಧ್ಯವಾಗದಿದ್ದನ್ನು ನಾನು ಕೇವಲ 43 ದಿನಗಳಲ್ಲಿ ಸಾಧಿಸಿದ್ದೇನೆ. ಅಷ್ಟೇ ಅಲ್ಲ, ಇದು ಇನ್ನೂ ಆರಂಭ ಮಾತ್ರವೇ’ ಎಂದು ಡೊನಾಲ್ಡ್ ಟ್ರಂಪ್ ಮುಂಬರುವ ದಿನಗಳಲ್ಲಿ ತಮ್ಮ ಆಡಳಿತದಲ್ಲಿ ಇನ್ನಷ್ಟು ನಿಷ್ಠುರ ನೀತಿಗಳು ಬರಲಿರುವ ಸುಳಿವನ್ನು ನೀಡಿದ್ದಾರೆ.

ಅಮೆರಿಕ ಎಷ್ಟು ಸುಂಕ ವಿಧಿಸುತ್ತದೆ…?

ಅಮೆರಿಕ ರೆಸಿಪ್ರೋಕಲ್ ಟ್ಯಾರಿಫ್ ಅಥವಾ ಪ್ರತಿ ಸುಂಕ ನೀತಿ ಅನುಸರಿಸುವ ಉದ್ದೇಶ ಅಮೆರಿಕದ ಉತ್ಪನ್ನಗಳಿಗೆ ಮಾರುಕಟ್ಟೆ ಹೆಚ್ಚಿಸುವುದು. ಹೆಚ್ಚಿನ ದೇಶಗಳು ಹೆಚ್ಚಿನ ಮಟ್ಟದ ಆಮದು ಸುಂಕ ವಿಧಿಸುತ್ತವೆ. ಆದರೆ, ಅಮೆರಿಕ ಸರ್ಕಾರ ಕಡಿಮೆ ಸುಂಕ ವಿಧಿಸುತ್ತದೆ. ಈ ಕಾರಣಕ್ಕೆ ಅಮೆರಿಕದ ರಫ್ತಿಗಿಂತ ಆಮದು ಹೆಚ್ಚಿದೆ. ಅಮೆರಿಕದಲ್ಲಿ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ಸಾಲದಾಗಿದೆ. ಅಮೆರಿಕದ ಕಂಪನಿಗಳು ಬೇರೆ ದೇಶಕ್ಕೆ ಹೋಗಿ ಅಲ್ಲಿ ತಯಾರಿಕೆ ಮಾಡಿ ಉತ್ಪನ್ನಗಳನ್ನು ಮಾರಬೇಕಾಗುತ್ತಿದೆ. ಇದರಿಂದ ತನಗೆ ನಿರೀಕ್ಷಿತ ಆದಾಯ ಬರುವುದಿಲ್ಲ. ಉದ್ಯೋಗಸೃಷ್ಟಿ ಆಗುವುದಿಲ್ಲ ಎನ್ನುವುದು ಅಮೆರಿಕದ ವಾದ.

ಇದನ್ನೂ ಓದಿ: 43 ಲಕ್ಷ ರೂ ಕೊಡ್ತೇವೆ, ಏ. 4ರೊಳಗೆ ಕೆಲಸ ಬಿಟ್ಟು ಹೋಗಿ: ಉದ್ಯೋಗಿಗಳಿಗೆ ಅಮೆರಿಕದ ಎಸ್​ಇಸಿ ಆಫರ್

ಈ ಮುಂಚೆ ಅಮೆರಿಕ ದೇಶವು ಕೆನಡಾ ಮತ್ತು ಮೆಕ್ಸಿಕೋದ ಬಹುತೇಕ ಉತ್ಪನ್ನಗಳಿಗೆ ತೆರಿಗೆಯನ್ನೇ ವಿಧಿಸುತ್ತಿರಲಿಲ್ಲ. ಈಗ ಶೇ. 25ರಷ್ಟು ತೆರಿಗೆ ಹಾಕಲು ನಿರ್ಧರಿಸಿದೆ. ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 5ರಿಂದ 10ರಷ್ಟು ತೆರಿಗೆ ಹಾಕುತ್ತದೆ. ಆದರೆ, ಭಾರತವು ಅಮೆರಿಕದ ಉತ್ಪನ್ನಗಳಿಗೆ ಹಾಕುವ ಸುಂಕವು ಶೇ. 20ರಿಂದ 40ರ ಶ್ರೇಣಿಯಲ್ಲಿದೆ. ಕೆಲ ಉತ್ಪನ್ನಗಳಿಗೆ ನೂರಕ್ಕೆ ನೂರು ಸುಂಕ ಹಾಕಲಾಗುತ್ತಿದೆ. ಚೀನಾ ಕೂಡ ದೊಡ್ಡ ಪ್ರಮಾಣದಲ್ಲಿ ಅಮೆರಿಕದ ಉತ್ಪನ್ನಗಳಿಗೆ ಸುಂಕ ವಿಧಿಸುತ್ತದೆ. ಹೀಗಾಗಿಯೇ, ಡೊನಾಲ್ಡ್ ಟ್ರಂಪ್ ಅವರು ಭಾರತ, ಚೀನಾದ ಸುಂಕದ ಬಗ್ಗೆ ಬಹಳ ನಿಷ್ಠುರವಾಗಿ ಮಾತನಾಡುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Wed, 5 March 25

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ