ಕೆಲಸ ಬದಲಿಸಿದಾಗ ಹಳೆಯ ಇಪಿಎಫ್ ಹಣ ಹೊಸ ಖಾತೆಗೆ ವರ್ಗಾಯಿಸುವ ಕ್ರಮ

EPFO account updates: ಇಪಿಎಫ್ ಸೌಲಭ್ಯ ಇರುವ ಒಬ್ಬ ಉದ್ಯೋಗಿ ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಸರ್ಕಾರದಿಂದ ವಾರ್ಷಿಕವಾಗಿ ನೀಡಲಾಗುವ ಬಡ್ಡಿಯು ಹೊಸ ಇಪಿಎಫ್ ಖಾತೆಗೆ ಸಲ್ಲಿಕೆ ಆಗುತ್ತದೆ. ಹೀಗಾಗಿ, ಬಹು ಖಾತೆಗಳಿದ್ದರೆ ಅದನ್ನು ಹೊಸ ಖಾತೆಗೆ ವಿಲೀನಗೊಳಿಸಬೇಕು. ಈಗ ಯುಎಎನ್ ನಂಬರ್ ವ್ಯವಸ್ಥೆಯಲ್ಲಿ ಹಳೆಯ ಖಾತೆಗಳು ಹೊಸ ಖಾತೆಗೆ ತನ್ನಂತಾನೆ ವಿಲೀನಗೊಳ್ಳುತ್ತದೆ.

ಕೆಲಸ ಬದಲಿಸಿದಾಗ ಹಳೆಯ ಇಪಿಎಫ್ ಹಣ ಹೊಸ ಖಾತೆಗೆ ವರ್ಗಾಯಿಸುವ ಕ್ರಮ
ಇಪಿಎಫ್​ಒ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 19, 2025 | 2:04 PM

ಇಪಿಎಫ್ ಸೌಲಭ್ಯ ಪಡೆಯುತ್ತಿರುವವರು ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಹಿಂದೆಲ್ಲಾ ಕೆಲಸ ಬದಲಿಸಿದಾಗ ಹಿಂದಿನ ಇಪಿಎಫ್ ಅಕೌಂಟ್​ಗಳು ಪ್ರತ್ಯೇಕವಾಗಿ ಉಳಿಯುತ್ತಿದ್ದವು. ಅವುಗಳನ್ನು ಮ್ಯಾನುಯಲ್ ಆಗಿ ವಿಲೀನಗೊಳಿಸಬೇಕಿತ್ತು. ಆದರೆ, ಯುಎಎನ್ ವ್ಯವಸ್ಥೆ ಬಂದ ಮೇಲೆ ಇಪಿಎಫ್ ನಿರ್ವಹಣೆ ಸುಲಭಗೊಂಡಿದೆ. ಈಗ ಮತ್ತಷ್ಟು ಸುಧಾರಣೆ ಆಗಿದ್ದು, ಕೆಲಸ ಬದಲಿಸಿ ಹೊಸ ಖಾತೆ ಸೃಷ್ಟಿಯಾದಾಗ ಹಳೆಯ ಖಾತೆ ತನ್ನಂತಾನೆ ಹೊಸ ಖಾತೆಯೊಂದಿಗೆ ವಿಲೀನಗೊಳ್ಳುತ್ತದೆ. ಅರ್ಜಿ ಸಲ್ಲಿಸುವ, ದಾಖಲೆ ಸಲ್ಲಿಸುವ ತಲೆನೋವು ಇರುವುದಿಲ್ಲ.

ಇಪಿಎಫ್ ಆಟೊಮ್ಯಾಟಿಕ್ ಟ್ರಾನ್ಸ್​ಫರ್ ಎನ್ನುವ ಹೊಸ ಫೀಚರ್…

ಯುಎಎನ್ ಅಥವಾ ಯೂನಿವರ್ಸಲ್ ಅಕೌಂಟ್ ನಂಬರ್ ಎನ್ನುವುದು ಹೂಹಾರದಲ್ಲಿನ ದಾರವಿದ್ದಂತೆ. ಒಬ್ಬ ವ್ಯಕ್ತಿಯ ವಿವಿಧ ಇಪಿಎಫ್ ಅಕೌಂಟ್​ಗಳು ಒಂದೇ ಯುಎಎನ್ ಅಡಿ ಬರುತ್ತವೆ. ಇಪಿಎಫ್ ಖಾತೆಗಳು ಬದಲಾದರೂ ಯುಎಎನ್ ಒಂದೇ ಇರುತ್ತದೆ. ನೀವು ಕೆಲಸ ಬದಲಿಸಿ ಹೊಸ ಕೆಲಸಕ್ಕೆ ಸೇರಿದಾಗ ಹಳೆಯ ಇಪಿಎಫ್ ಅಕೌಂಟ್ ಬದಲು ಯುಎಎನ್ ನಂಬರ್ ಕೊಟ್ಟರೆ ಸಾಕು.

ಇದನ್ನೂ ಓದಿ: ಮೊಬೈಲ್ ನಂಬರ್ ರೀತಿ ನಿಮ್ಮ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನೂ ಪೋರ್ಟ್ ಮಾಡಬಹುದಾ? ಇಲ್ಲಿದೆ ಡೀಟೇಲ್ಸ್

ಹೊಸ ಕಂಪನಿಯವರು ನಿಮ್ಮ ಯುಎಎನ್ ನಂಬರ್ ಅನ್ನು ಇಪಿಎಫ್​ಒದಲ್ಲಿ ನೊಂದಾಯಿಸುತ್ತಾರೆ. ಅದರೊಂದಿಗೆ ಹಳೆಯ ಇಪಿಎಫ್ ಖಾತೆ ಮತ್ತು ಹೊಸ ಖಾತೆ ಎರಡೂ ಕೂಡ ಯುಎಎನ್ ಅಡಿಗೆ ಬರುತ್ತವೆ. ಹಳೆಯ ಇಪಿಎಫ್ ಖಾತೆಯಲ್ಲಿನ ಹಣವು ಹೊಸ ಖಾತೆಗೆ ತನ್ನಂತಾನೆ ರವಾನೆಯಾಗುತ್ತದೆ.

ಹಣ ರವಾನೆಯಾಗುತ್ತಿರುವ ಮಾಹಿತಿಯನ್ನು ಇಪಿಎಫ್​ಒ ಸಂಸ್ಥೆಯು ನಿಮ್ಮ ನೊಂದಾಯಿತ ಇಮೇಲ್ ಮತ್ತು ಮೊಬೈಲ್ ನಂಬರ್​ಗೆ ಕಳುಹಿಸುತ್ತದೆ. ನೀವು ಮ್ಯಾನುಯಲ್ ಆಗಿ ಹೋಗಿ ಖಾತೆಯ ಹಣ ಟ್ರಾನ್ಸ್​ಫರ್ ಮಾಡುವ ಅವಶ್ಯಕತೆ ಇರುವುದಿಲ್ಲ.

ಯುಎಎನ್ ಸಕ್ರಿಯವಾಗಿರಬೇಕು….

ಇಪಿಎಫ್ ಖಾತೆಯಲ್ಲಿನ ಹಣ ಹೊಸ ಖಾತೆಗೆ ರವಾನೆಯಾಗಬೇಕೆಂದರೆ ನಿಮ್ಮ ಯುಎಎನ್ ನಂಬರ್ ಸಕ್ರಿಯವಾಗಿರಬೇಕು. ಹಳೆಯ ಇಪಿಎಫ್ ಖಾತೆ ಮತ್ತು ಹೊಸ ಖಾತೆಗೆ ಅದೇ ಯುಎಎನ್ ನಂಬರ್ ಇದ್ದಿರಬೇಕು.

ಇದನ್ನೂ ಓದಿ: ಎಷ್ಟು ಅವಧಿ ವಹಿವಾಟು ನಡೆಯದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ? ಅಕೌಂಟ್ ರೀಆ್ಯಕ್ಟಿವೇಟ್ ಮಾಡುವ ಕ್ರಮ

ಹಾಗೆಯೇ, ನಿಮ್ಮ ಯುಎಎನ್ ನಂಬರ್​ಗೆ ಇಮೇಲ್ ಮತ್ತು ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ ಮಾತ್ರ ಖಾತೆಯ ಅಪ್​ಡೇಟ್​ಗಳು ನಿಮಗೆ ಬರುತ್ತಿರುತ್ತದೆ.

ಒಂದು ವೇಳೆ ಇಪಿಎಫ್ ಹಣ ತನ್ನಂತಾನೆ ಹೊಸ ಖಾತೆಗೆ ರವಾನೆಯಾಗದೇ ಹೋದರೆ ಇಪಿಎಫ್​ಒ ಪೋರ್ಟಲ್​ಗೆ ಹೋಗಿ ಮ್ಯಾನುಯಲ್ ಆಗಿ ಟ್ರಾನ್ಸ್​ಫರ್ ರಿಕ್ವೆಸ್ಟ್ ಸಲ್ಲಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್