India Debt: ಭಾರತದ ಸಾಲ ಜಿಡಿಪಿಯ ಶೇ. 80ಕ್ಕಿಂತಲೂ ಹೆಚ್ಚು; ಇದು ಕಳವಳ ಸ್ಥಿತಿಯಾ? ಮಾಜಿ ಆರ್​ಬಿಐ ಗವರ್ನರ್ ಸುಬ್ಬಾರಾವ್ ಹೇಳೋದೇನು?

Ex RBI Governor Subbarao: ಭಾರತದ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 81ರಷ್ಟು ಇದೆ. ಇದು ಹೆಚ್ಚಾಯಿತು ಎಂದು ಮಾಜಿ ಆರ್​ಬಿಐ ಗವರ್ನರ್ ಸುಬ್ಬಾರಾವ್ ಹೇಳಿದ್ದಾರೆ. ಜಿಡಿಪಿ ಮತ್ತು ಸಾಲದ ಅನುಪಾತ ಶೇ. 40ಕ್ಕಿಂತಲೂ ಕಡಿಮೆ ಇದ್ದರೆ ಸುರಕ್ಷಿತ ಎನ್ನುವುದು ಅವರ ಅನಿಸಿಕೆ. ಭಾರತದ ಜಿಡಿಪಿ ಮತ್ತು ಆದಾಯದ ಅನುಪಾತ ಕಡಿಮೆ ಇರುವ ಕಾರಣ ಸ್ವಲ್ಪ ಸಾಲವೂ ಅಪಾಯ ತರಬಹುದು ಎಂದು ಸುಬ್ಬಾರಾವ್ ಎಚ್ಚರಿಸಿದ್ದಾರೆ.

India Debt: ಭಾರತದ ಸಾಲ ಜಿಡಿಪಿಯ ಶೇ. 80ಕ್ಕಿಂತಲೂ ಹೆಚ್ಚು; ಇದು ಕಳವಳ ಸ್ಥಿತಿಯಾ? ಮಾಜಿ ಆರ್​ಬಿಐ ಗವರ್ನರ್ ಸುಬ್ಬಾರಾವ್ ಹೇಳೋದೇನು?
ಸುಬ್ಬಾರಾವ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 15, 2024 | 6:13 PM

ಮುಂಬೈ, ಜನವರಿ 15: ಭಾರತದ ಸಾಲ, ಅಂದರೆ ಸರ್ಕಾರದ ಸಾಲವು ಜಿಡಿಪಿಯ ಶೇ. 81ರಷ್ಟಿದೆ. ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಯೋಜನೆಗಳಿಗೆ ಸರ್ಕಾರ ಸಾಕಷ್ಟು ಬಂಡವಾಳ ಹಾಕುತ್ತಿದೆ. ಪರಿಣಾಮವಾಗಿ ಸಾಲದ ಪ್ರಮಾಣ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ದೇಶದ ಸಾಲದ ಪ್ರಮಾಣವು ಜಿಡಿಪಿಯ ಶೇ. 81ರಷ್ಟಾಗಿದೆ. ಐಎಂಎಫ್​ನ ಇತ್ತೀಚಿನ ವರದಿಯಲ್ಲಿ, ಭಾರತದ ಸಾಲ ಜಿಡಿಪಿಯ (Debt-to-GDP ratio) ಶೇ. 100ರ ಗಡಿಯನ್ನು ದಾಟಬಹುದು ಎಂದು ಎಚ್ಚರಿಸಿದೆ. ಈ ವಿಚಾರದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್​ನ ಮಾಜಿ ಗವರ್ನರ್ ರಘುರಾಮ್ ರಾಜನ್ ಮಾತನಾಡಿದ್ದು, ಸಾಲದ ಬಗ್ಗೆ ಸರ್ಕಾರ ಎಚ್ಚರ ವಹಿಸುವ ಅವಶ್ಯಕತೆ ಎಂದೂ ಸಲಹೆ ನೀಡಿದ್ದಾರೆ.

‘ನಾನು ಐಎಂಎಫ್ ವರದಿ ನೋಡಿದೆ. ಭಾರತದ ಜಿಡಿಪಿ ಮತ್ತು ಸಾಲದ ಅನುಪಾತ (debt to gdp ratio) ಶೇ. 100ರವರೆಗೆ ಹೋಗಬಹುದು ಎಂದಿರುವುದು ಹೌದು. ಆದರೆ, ತೀರಾ ಪ್ರತಿಕೂಲ ಸಂದರ್ಭದಲ್ಲಿ ಆ ಸ್ಥಿತಿ ಬರಬಹುದು ಎಂದಿದೆ. ಅಷ್ಟು ಸಾಲ ಹೆಚ್ಚುತ್ತದೆ ಎಂದು ವರದಿಯಲ್ಲಿ ಹೇಳಿಲ್ಲ. ಆದಾಗ್ಯೂ ನಾವು ಸಾಲದ ಅನುಪಾತದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ,’ ಎಂದು ಸುಬ್ಬಾರಾವ್ ಹೇಳಿದ್ದಾರೆ.

ಸಾಲದ ಅನುಪಾತ ಶೇ. 40ಕ್ಕಿಂತ ಕಡಿಮೆ ಇದ್ದರೆ ಸುರಕ್ಷಿತ

ಮಾಜಿ ಆರ್​ಬಿಐ ಗವರ್ನರ್ ಪ್ರಕಾರ ಭಾರತದ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 60ಕ್ಕಿಂತ ಕಡಿಮೆ ಇದ್ದರೆ ಸುರಕ್ಷಿತ. ಕೇಂದ್ರ ಸರ್ಕಾರದ ಸಾಲದ ಅನುಪಾತ ಶೇ. 40 ಮತ್ತು ರಾಜ್ಯ ಸರ್ಕಾರಗಳದ್ದು ಶೇ 20ರಷ್ಟು ಮಿತಿ ಇರಬೇಕು ಎನ್ನುವುದು ಅವರ ಅನಿಸಿಕೆ.

ಇದನ್ನೂ ಓದಿ: AI Effect: ಎಐ ಟೆಕ್ನಾಲಜಿಯಿಂದ ಉದ್ಯೋಗನಷ್ಟ; ಮುಂದುವರಿದ ದೇಶಗಳಿಗೆ ಹೆಚ್ಚು ಬಾಧೆ ಎಂದ ಐಎಂಎಫ್ ಮುಖ್ಯಸ್ಥೆ

ಭಾರತದ ಸಾಲದ ಬಗ್ಗೆ ಐಎಂಎಫ್ ವ್ಯಕ್ತಪಡಿಸಿರುವ ಆತಂಕವನ್ನು ಭಾರತ ಸರ್ಕಾರ ತಳ್ಳಿಹಾಕಿದೆ. ಸಾಲದ ಪ್ರಮಾಣವು ಜಿಡಿಪಿಯ ಶೇ. 100ರಷ್ಟರ ಮಟ್ಟಕ್ಕೆ ಹೋಗುವ ಸಾಧ್ಯತೆ ಇಲ್ಲ. ಸ್ಥಳೀಯ ಕರೆನ್ಸಿಯಲ್ಲಿ ಸಾಲ ಮಾಡುವುದರಿಂದ ಹೆಚ್ಚು ರಿಸ್ಕ್ ಇಲ್ಲ ಎನ್ನುವುದು ಸರ್ಕಾರದ ಸಮರ್ಥನೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಬ್ಬಾರಾವ್, ಸ್ಥಳೀಯ ಕರೆನ್ಸಿಯಲ್ಲಿ ಸಾಲ ಮಾಡುವುದು ಸುರಕ್ಷಿತವೆಂಬುದು ಹೌದಾದರೂ ತೀರಾ ಸುರಕ್ಷಿತವೂ ಅಲ್ಲ ಎಂದು ಒಂದಷ್ಟು ವಿವರಣೆ ನೀಡಿದ್ದಾರೆ.

ಸರ್ಕಾರ ಸ್ಥಳೀಯ ಕರೆನ್ಸಿಯಲ್ಲಿ ಸಾಲ ಪಡೆಯುತ್ತದಾದರೂ ಆರ್ಥಿಕತೆಗೆ ಸಾಕಷ್ಟು ಬಂಡವಾಳ ಹರಿದುಬರಬೇಕಾಗುತ್ತದೆ. ವಿದೇಶೀ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಬೇಕಾಗುತ್ತದೆ. ಅದಕ್ಕೆ ದೇಶದ ಆರ್ಥಿಕತೆ ಬಗ್ಗೆ ಅವರಿಗೆ ವಿಶ್ವಾಸ ಬರಬೇಕು. ಸಾಲದ ಪ್ರಮಾಣ ಹೆಚ್ಚಿದ್ದರೆ ಅವರು ಹಿಂದೇಟು ಹಾಕಬಹುದು ಎಂದು ಸಂಭಾವ್ಯ ಅಪಾಯದ ಬಗ್ಗೆ ಸುಬ್ಬಾ ರಾವ್ ಬೆಳಕು ಚೆಲ್ಲಿದ್ದಾರೆ.

ಕಡಿಮೆ ಸಾಲವೂ ಭಾರತಕ್ಕೆ ಅಪಾಯ ತರಬಹುದು

ಇನ್ನು, ಅಮೆರಿಕ, ಜಪಾನ್ ಮೊದಲಾದ ಹಲವು ಮುಂದುವರಿದ ದೇಶಗಳಲ್ಲಿ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 100, ಶೇ. 200ಕ್ಕಿಂತಲೂ ಹೆಚ್ಚು ಇದೆ, ಭಾರತದಕ್ಕಿಂತಲೂ ಹೆಚ್ಚು ಇದೆ ಎನ್ನುವ ವಾದವನ್ನು ಮಾಜಿ ಆರ್​ಬಿಐ ಗವರ್ನರ್ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: 40% EMI Rule: ನಿಮ್ಮ ಆದಾಯದಲ್ಲಿ ಸಾಲಕ್ಕೆ ಮಿತಿ ಎಷ್ಟಿರಬೇಕು? ನೆನಪಿರಲಿ 40 ಪರ್ಸೆಂಟ್ ರೂಲ್; ಈ ಗಡಿ ದಾಟದಿರಿ ಜೋಕೆ..!

ಆ ದೇಶಗಳೊಂದಿಗೆ ಭಾರತವನ್ನು ಹೋಲಿಕೆ ಮಾಡುವುದು ಸರಿಹೋಗದು. ಅಮೆರಿಕ, ಬ್ರಿಟನ್ ಮೊದಲಾದ ದೇಶಗಳಿಗೆ ಹೋಲಿಸಿದರೆ ಭಾರತದ ಜಿಡಿಪಿ ಮತ್ತು ಆದಾಯದ ಅನುಪಾತ ಬಹಳ ಕಡಿಮೆ ಇದೆ. ಹೀಗಾಗಿ, ಭಾರತವು ಸಾಲದ ಸುಳಿಗೆ ಅಥವಾ ಒತ್ತಡಕ್ಕೆ ಸಿಲುಕಿಬಿಡುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಸಾಲದ ಪ್ರಮಾಣವನ್ನು ಸರ್ಕಾರ ತಗ್ಗಿಸಲು ಯತ್ನಿಸಬೇಕು ಎಂದು ಸುಬ್ಬಾರಾವ್ ಸಲಹೆ ನೀಡಿದ್ದಾರೆ.

ಸುಬ್ಬಾರಾವ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ 2008ರಿಂದ 2013ರವರೆಗೆ ಆರ್​ಬಿಐ ಗವರ್ನರ್ ಆಗಿದ್ದರು. ಅಂದಿನ ಸರ್ಕಾರ ಮತ್ತು ಹಣಕಾಸು ಸಚಿವಾಲಯದೊಂದಿಗೆ ಸುಬ್ಬಾರಾವ್ ನಡೆಸಿದ ಜಟಾಪಟಿ ಬಹಳ ಕುತೂಹಲ ಹುಟ್ಟಿಸುತ್ತಿತ್ತು. ಒಂದು ರೀತಿಯಲ್ಲಿ ರೆಬೆಲ್ ಎನಿಸಿದ್ದವರು ಅವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್