AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways Ticket Rules: ಅಕ್ಟೋಬರ್ ತಿಂಗಳಲ್ಲಿ ಹೊಸ ರೈಲ್ವೆ ಟಿಕೆಟ್ ನಿಯಮಗಳು; ಅಸಲಿ ಗುರುತಿನ ಚೀಟಿ ಕಡ್ಡಾಯ

ಭಾರತೀಯ ರೈಲ್ವೆ ಅಕ್ಟೋಬರ್ 2026 ರಿಂದ ಟಿಕೆಟ್ ಮತ್ತು ಪ್ರಯಾಣದ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ರಿಯಾಯಿತಿ, ರಿಸರ್ವೇಶನ್ ಕೋಟಾ ಮತ್ತು ರೈಲ್ವೆ ಪಾಸ್​ಗಳನ್ನು ಪಡೆದು ಪ್ರಯಾಣಿಸುವವರು ತಮ್ಮ ಅಸಲಿ ಗುರುತಿನ ಚೀಟಿ ಕಡ್ಡಾಯವಾಗಿ ತೋರಿಸಬೇಕು. ಈ ಹೊಸ ಗುರುತಿನ ಚೀಟಿ ನಿಯಮಗಳು, ದಂಡದ ವಿವರ ಮತ್ತು ಪ್ರಯಾಣಿಕರು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿಯ ಸಂಪೂರ್ಣ ವಿವರ ಇಲ್ಲಿದೆ.

Indian Railways Ticket Rules: ಅಕ್ಟೋಬರ್ ತಿಂಗಳಲ್ಲಿ ಹೊಸ ರೈಲ್ವೆ ಟಿಕೆಟ್ ನಿಯಮಗಳು; ಅಸಲಿ ಗುರುತಿನ ಚೀಟಿ ಕಡ್ಡಾಯ
ರೈಲು ಪ್ರಯಾಣಿಕರುImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2026 | 3:10 PM

Share

ನವದೆಹಲಿ, ಸೆಪ್ಟೆಂಬರ್ 29: ಪ್ರಯಾಣ ದಟ್ಟಣೆ ಇರುವ ಅಕ್ಟೋಬರ್ ತಿಂಗಳಲ್ಲಿ ರೈಲು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಟಿಕೆಟ್ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಭಾರತೀಯ ರೈಲ್ವೆ ಸ್ಪೆಷಲ್ ಡ್ರೈವ್ ನಡೆಸುತ್ತಿದೆ. ಪ್ರಯಾಣಿಕರ ಟಿಕೆಟ್ ಹಾಗೂ ಅವರ ಗುರುತಿನ ಐಡಿ ಪರಿಶೀಲಿಸುವ ಕಾರ್ಯ ಮಾಡಲಾಗುತ್ತದೆ. 2026ರ ಅಕ್ಟೋಬರ್ 1ರಿಂದ 31ರವರೆಗೆ ಟಿಕೆಟ್ ಪರಿಶೀಲನೆಯ ಕಾರ್ಯವನ್ನು ರೈಲ್ವೆ ಕೈಗೆತ್ತಿಕೊಂಡಿದೆ. ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಿಯಾಯಿತಿ, ನಿರ್ದಿಷ್ಟಪಡಿಸಿದ ರಿಸರ್ವೇಶನ್ ಕೋಟಾ ಮತ್ತು ರೈಲ್ವೆ ಪಾಸ್​ಗಳನ್ನು ಹೊಂದಿರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತದೆ. ಈ ಹೊಸ ನಿಯಮಗಳ ಪ್ರಕಾರ, ಪ್ರಯಾಣಿಕರು ಅನುಸರಿಸಬೇಕಾದ ಪ್ರಮುಖ ಅಂಶಗಳ ವಿವರ ಇಲ್ಲಿದೆ:

ಕಡ್ಡಾಯ ಅಸಲಿ ಗುರುತಿನ ಚೀಟಿ: ರೈಲಿನಲ್ಲಿ ರಿಯಾಯಿತಿ ಅಥವಾ ರಿಸರ್ವೇಶನ್ ಕೋಟಾದಲ್ಲಿ ಪ್ರಯಾಣಿಸುವಾಗ ಪ್ರತಿಯೊಬ್ಬ ಪ್ರಯಾಣಿಕರು ಅಸಲಿ ಗುರುತಿನ ಚೀಟಿಯನ್ನು (ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪಾನ್ ಕಾರ್ಡ್, ಇತ್ಯಾದಿ) ಕಡ್ಡಾಯವಾಗಿ ಕೊಂಡೊಯ್ಯಬೇಕು. ಫೋಟೋ ಕಾಪಿ ಅಥವಾ ಮಾನ್ಯವಲ್ಲದ ಡಿಜಿಟಲ್ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಒಬ್ಬರಿಗಿಂತ ಹೆಚ್ಚು ಮಂದಿ ಸೇರಿ ಒಂದೇ ಟಿಕೆಟ್ ಪಡೆದಿದ್ದರೆ ಆಗ ಆ ಗುಂಪಿನಲ್ಲಿ ಎಲ್ಲರ ಗುರುತಿನ ಐಡಿ ಬೇಕಾಗುವುದಿಲ್ಲ. ಒಬ್ಬರ ಬಳಿ ಅಸಲಿ ಗುರುತಿನ ಚೀಟಿ ಇದ್ದರೆ ಸಾಕು.

ಇದನ್ನೂ ಓದಿ: ಲಂಗು ಲಗಾಮು ತಪ್ಪಿದ ಎಐ ಏಜೆಂಟ್​ಗಳು; ಸರ್ಕಾರಿ ವೆಬ್​ಸೈಟ್​ಗಳ ಮೇಲೆಯೇ ದಾಳಿ; ಕಂಗೆಟ್ಟ ಓಪನ್​ಎಐ

ಟಿಕೆಟ್ ಕಾಯ್ದಿರಿಸಿದ ಹೆಸರಿಗೆ ಸೂಕ್ತ ಮತ್ತು ಮಾನ್ಯವಾದ ಗುರುತಿನ ಚೀಟಿಯನ್ನು ತೋರಿಸಲು ವಿಫಲವಾದರೆ, ಆ ಪ್ರಯಾಣಿಕನನ್ನು ಟಿಕೆಟ್ ಇಲ್ಲದ ಪ್ರಯಾಣ (Without Ticket) ಎಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ರೈಲ್ವೆ ನಿಯಮಾವಳಿಗಳ ಪ್ರಕಾರ ಪೂರ್ಣ ಪ್ರಯಾಣ ದರ ಹಾಗೂ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ.

ಇಲ್ಲಿ ಟಿಟಿಇಗಳು ರೈಲ್ವೆ ಪಾಸ್, ರಿಸರ್ವೇಶನ್ ಕೋಟಾ ಬಳಸಿದ ಪ್ರಯಾಣಿಕರ ಟಿಕೆಟ್ ವಿವರ ತಪಾಸಿಸಲು ಆದ್ಯತೆ ಕೊಡುತ್ತಾರಾದರೂ, ಅಗತ್ಯಬಿದ್ದರೆ ಎಲ್ಲಾ ಪ್ರಯಾಣಿಕರಿಗೂ ಇದು ಅನ್ವಯ ಆಗುತ್ತದೆ. ಅಂದರೆ, ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಕೂಡ ತಮ್ಮ ಮೂಲ ಗುರುತಿನ ದಾಖಲೆಯನ್ನೂ ಜೊತೆಯಲ್ಲಿ ಕೊಂಡೊಯ್ಯುವುದು ಅವಶ್ಯಕವಾಗುತ್ತದೆ.

ತಟಿಟಿಇ (TTE) ತಪಾಸಣೆ ಪ್ರಕ್ರಿಯೆಯನ್ನು ಮತ್ತಷ್ಟು ಕಟ್ಟುನಿಟ್ಟಗೊಳಿಸಲಾಗಿದ್ದು, ಡಿಜಿಟಲ್ ಪರಿಶೀಲನಾ ಸಾಧನಗಳ ಮೂಲಕ ಪ್ರಯಾಣಿಕರ ವಿವರಗಳನ್ನು ಕ್ಷಣಾರ್ಧದಲ್ಲಿ ತಾಳೆ ನೋಡಲಾಗುತ್ತದೆ.

ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಸ್ಟೀಲ್ ಫ್ಯಾಕ್ಟರಿ; ಇದು ನಿರ್ಮಿಸುತ್ತಿರೋದು ಭಾರತೀಯ ಕಂಪನಿ

ಏಜೆಂಟ್ ಟಿಕೆಟ್ ದುರ್ಬಳಕೆಗೆ ತಡೆ: ಅನಧಿಕೃತ ಏಜೆಂಟ್‌ಗಳು ಅಥವಾ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬಳಸಿ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಪ್ರಯಾಣಿಕರು ಯಾವುದೇ ಕಿರಿಕಿರಿ ಅಥವಾ ದಂಡದ ತೊಂದರೆಯಿಂದ ಪಾರಾಗಲು ಪ್ರಯಾಣದ ಸಮಯದಲ್ಲಿ ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ಜೊತೆಯಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.

ಹೊಸ ರೈಲ್ವೆ ಟಿಕೆಟ್ ನಿಯಮಗಳ ಬಗ್ಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQs)

ಭಾರತೀಯ ರೈಲ್ವೆ ಹೊಸ ಟಿಕೆಟ್ ನಿಯಮಗಳನ್ನು ರೂಪಿಸಿದೆಯಾ?

ಹೌದು, ಹಬ್ಬದ ಸೀಸನ್ ಎನ್ನಲಾದ ಅಕ್ಟೋಬರ್ ತಿಂಗಳಲ್ಲಿ ಟಿಕೆಟ್ ಚೆಕಿಂಗ್ ಅಭಿಯಾನ ಕೈಗೊಳ್ಳಲಾಗಿದೆ. ಪ್ರಯಾಣಿಕರ ಟಿಕೆಟ್​ನ ಅಸಲಿಯತ್ತು ತಿಳಿಯಲು ಈ ಅಭಿಯಾನ ನಡೆಯುತ್ತಿದೆ.

ರೈಲ್ವೇಸ್ ಯಾವ ಟಿಕೆಟ್ ನಿಯಮಗಳನ್ನು ರೂಪಿಸಿದೆ?

ಪ್ರಯಾಣಿಕರು ಟಿಕೆಟ್ ಜೊತೆಗೆ ತಮ್ಮ ಆಧಾರ್ ಇತ್ಯಾದಿ ಯಾವುದಾದರೂ ಒಂದು ಅಸಲಿ ಗುರುತಿನ ಐಡಿ ಹೊಂದಿರಬೇಕು. ಅದರಲ್ಲೂ ರಿಯಾಯಿತಿ, ರಿಸರ್ವೇಶನ್ ಕೋಟಾ ಮತ್ತು ರೈಲ್ವೆ ಪಾಸ್​ನಲ್ಲಿ ಪ್ರಯಾಣಿಸುವವರಿಗೆ ಇದು ಕಡ್ಡಾಯ.

ರೈಲ್ವೇಸ್​ನ ಈ ನಿಯಮಗಳು ಯಾವಾಗ ಜಾರಿ?

ಅಕ್ಟೋಬರ್ 1ರಿಂದ 31ರವರೆಗೆ ಸ್ಪೆಷಲ್ ಡ್ರೈವ್ ಇರುತ್ತದೆ. ಅದಾದ ಬಳಿಕವೂ ನಿಯಮ ಮುಂದುವರಿಯುವ ಸಾಧ್ಯತೆ ಇಲ್ಲದಿಲ್ಲ.

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More