AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kia Sorento: ಬಹುನಿರೀಕ್ಷಿತ ಕಿಯಾ ಸೊರೆಂಟೊ ಭಾರತದಲ್ಲಿ ಬಿಡುಗಡೆ; ಈ ಆಕರ್ಷಕ ಕಾರಿನ ಬೆಲೆ 27.99 ಲಕ್ಷ

ಕಿಯಾ ಸೊರೆಂಟೊ ಭಾರತದಲ್ಲಿ ₹27.99 ಲಕ್ಷ ಆರಂಭಿಕ ಎಕ್ಸ್‌ ಶೋರೂಂ ಬೆಲೆಯೊಂದಿಗೆ ಬಿಡುಗಡೆಯಾಗಿದೆ. 6 ಮತ್ತು 7 ಸೀಟರ್ ಆಯ್ಕೆಗಳಲ್ಲಿ ಲಭ್ಯವಿರುವ ಈ ಪ್ರೀಮಿಯಂ ಎಸ್‌ಯುವಿ ಹೈಬ್ರಿಡ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. 12.3 ಇಂಚಿನ ಡಿಸ್‌ಪ್ಲೇಗಳು, ಬೋಸ್ ಸೌಂಡ್ ಸಿಸ್ಟಂ, 10 ಏರ್‌ಬ್ಯಾಗ್‌ಗಳು ಮತ್ತು ADAS ಸೇರಿದಂತೆ ಹಲವು ಆಧುನಿಕ ಫೀಚರ್‌ಗಳು ಇದರಲ್ಲಿವೆ.

Kia Sorento: ಬಹುನಿರೀಕ್ಷಿತ ಕಿಯಾ ಸೊರೆಂಟೊ ಭಾರತದಲ್ಲಿ ಬಿಡುಗಡೆ; ಈ ಆಕರ್ಷಕ ಕಾರಿನ ಬೆಲೆ 27.99 ಲಕ್ಷ
Kia Sorento
ಮಾಲಾಶ್ರೀ ಅಂಚನ್​
| Edited By: |

Updated on: Sep 06, 2026 | 9:39 AM

Share

ಮುಖ್ಯಾಂಶಗಳು

  • ₹27.99 ಲಕ್ಷಕ್ಕೆ ಕಿಯಾ ಸೊರೆಂಟೊ ಬಿಡುಗಡೆ
  • ಹೈಬ್ರಿಡ್ ಎಂಜಿನ್‌ನೊಂದಿಗೆ ಕಿಯಾ ಸೊರೆಂಟೊ ಎಂಟ್ರಿ
  • ಕಿಯಾ ಸೊರೆಂಟೊದಲ್ಲಿ 10 ಏರ್‌ಬ್ಯಾಗ್; ಬೆಲೆ ಎಷ್ಟು?

ಕಿಯಾ ಇಂಡಿಯಾ (Kia India) ತನ್ನ ಹೊಸ 3-ರೋ ಪ್ರೀಮಿಯಂ SUV ಕಿಯಾ ಸೊರೆಂಟೊವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಎಸ್‌ಯುವಿಯ ಆರಂಭಿಕ ಎಕ್ಸ್‌ ಶೋರೂಂ ಬೆಲೆ ₹27.99 ಲಕ್ಷ. ಆಕರ್ಷಕ ವಿನ್ಯಾಸದ ಜೊತೆಗೆ ಹಲವು ಹೈಟೆಕ್ ಫೀಚರ್‌ಗಳನ್ನು ಹೊಂದಿರುವ ಈ ಎಸ್​ಯುವಿಯನ್ನು HTE, HTE(O), HTK, HTK(A), HTX ಮತ್ತು HTX(A) ಎಂಬ ಆರು ಪ್ರಮುಖ ವೇರಿಯಂಟ್‌ಗಳಲ್ಲಿ ಪರಿಚಯಿಸಲಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊರೆಂಟೊ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದರಲ್ಲಿ 1.6 ಲೀಟರ್ ಟರ್ಬೊ-ಪೆಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿವೆ. ವಿಶೇಷವೆಂದರೆ ಟರ್ಬೊ-ಪೆಟ್ರೋಲ್ ಎಂಜಿನ್, ಸ್ಟ್ರಾಂಗ್ ಹೈಬ್ರಿಡ್ ಆಯ್ಕೆಯೊಂದಿಗೆ ಬರುವ ವಿಶೇಷ ಮಾದರಿಯಾಗಿ ಇದು ಗುರುತಿಸಿಕೊಂಡಿದೆ. FWD ಹಾಗೂ AWD ಎರಡೂ ಡ್ರೈವ್ ಆಯ್ಕೆಗಳೂ ಲಭ್ಯವಿವೆ.

ಕಿಯಾ ಸೊರೆಂಟೊ ಬೆಲೆ ₹27.99 ಲಕ್ಷದಿಂದ ಆರಂಭವಾಗುತ್ತದೆ. ವಿವಿಧ ವೇರಿಯಂಟ್‌ಗಳ ಪ್ರಕಾರ ಇದರ ಬೆಲೆ ₹40.19 ಲಕ್ಷದವರೆಗೆ ಇದೆ. ಇವು ಆರಂಭಿಕ ಎಕ್ಸ್‌ ಶೋರೂಂ ಬೆಲೆಗಳಾಗಿವೆ. HTK(A), HTX ಮತ್ತು HTX(A) ವೇರಿಯಂಟ್‌ಗಳಿಗೆ ಹೆಚ್ಚುವರಿಯಾಗಿ ₹20,000 ಪಾವತಿಸಿ ಬ್ಲಾಕ್ ಲೈನ್ ಪ್ಯಾಕ್ ಆಯ್ಕೆ ಮಾಡಬಹುದು. ಇದರಲ್ಲಿ ಕಾರಿನ ಹಲವು ಹೊರಭಾಗದ ವಿನ್ಯಾಸ ಅಂಶಗಳನ್ನು ಕಪ್ಪು ಬಣ್ಣದಲ್ಲಿ ನೀಡಲಾಗುತ್ತದೆ. ‘A’ ಹೆಸರಿನ ವೇರಿಯಂಟ್‌ಗಳಲ್ಲಿ ADAS ಫೀಚರ್‌ಗಳು ಲಭ್ಯವಿವೆ.

ಹೈಬ್ರಿಡ್ ಮತ್ತು ಡೀಸೆಲ್ ಎಂಜಿನ್

1.6 ಲೀಟರ್ ಟರ್ಬೊ-ಪೆಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ 180hp ಪವರ್ ಮತ್ತು 265Nm ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 65hp ಮತ್ತು 264Nm ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್ ಕೂಡ ಇದೆ. ಈ ಎಂಜಿನ್‌ಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.

ಇನ್ನು 2.2 ಲೀಟರ್ ಡೀಸೆಲ್ ಎಂಜಿನ್ 193hp ಪವರ್ ಮತ್ತು 442Nm ಟಾರ್ಕ್ ಉತ್ಪಾದಿಸುತ್ತದೆ. ಇದಕ್ಕೆ 8-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಕಾರಿನಲ್ಲಿ ನಾರ್ಮಲ್, ಎಕೋ, ಸ್ಪೋರ್ಟ್ ಮತ್ತು ಸ್ಮಾರ್ಟ್ ಎಂಬ ನಾಲ್ಕು ಡ್ರೈವ್ ಮೋಡ್‌ಗಳಿವೆ. AWD ವೇರಿಯಂಟ್‌ಗಳಲ್ಲಿ ಸ್ನೋ, ಸ್ಯಾಂಡ್ ಮತ್ತು ಮಡ್ ಎಂಬ ಮೂರು ಟೆರೆನ್ ಮೋಡ್‌ಗಳೂ ಸಿಗುತ್ತವೆ.

Tata Nexon 2027: ಡಿಸೈನ್​ನಿಂದ ಪವರ್‌ಟ್ರೇನ್‌ವರೆಗೆ: ಹೊಸ ಟಾಟಾ ನೆಕ್ಸಾನ್​ನಲ್ಲಿ ದೊಡ್ಡ ಬದಲಾವಣೆ

ದೊಡ್ಡ SUV, ಆಕರ್ಷಕ ವಿನ್ಯಾಸ

ಕಿಯಾ ಸೊರೆಂಟೊ ಮುಂಭಾಗದಲ್ಲಿ ಕಂಪನಿಯ ಸಿಗ್ನೇಚರ್ Tiger-Nose ಗ್ರಿಲ್, ಲಂಬವಾಗಿ ಜೋಡಿಸಲಾದ LED ಹೆಡ್‌ಲೈಟ್‌ಗಳು ಮತ್ತು Y-ಆಕಾರದ LED DRLಗಳನ್ನು ಹೊಂದಿದೆ. 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು, ರೂಫ್ ರೈಲ್ಸ್ ಮತ್ತು L-ಆಕಾರದ LED ಟೈಲ್‌ಲೈಟ್‌ಗಳು ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಆಕರ್ಷಣೆ ನೀಡುತ್ತವೆ. ಭಾರತೀಯ ಮಾದರಿಯ ಸೊರೆಂಟೊ 4,815mm ಉದ್ದ, 1,900mm ಅಗಲ ಮತ್ತು 1,785mm ಎತ್ತರ ಹೊಂದಿದೆ. ಇದರ ವೀಲ್‌ಬೇಸ್ 2,815mm ಇದೆ.

6 ಮತ್ತು 7 ಸೀಟರ್ ಆಯ್ಕೆ

ಸೊರೆಂಟೊನ ಪ್ರಮುಖ ವಿಶೇಷತೆಗಳಲ್ಲಿ ಸೀಟಿಂಗ್ ಆಯ್ಕೆಯೂ ಒಂದು. ಗ್ರಾಹಕರು 6-ಸೀಟರ್ ಮತ್ತು 7-ಸೀಟರ್ ಮಾದರಿಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. 6-ಸೀಟರ್ ಮಾದರಿಯಲ್ಲಿ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳನ್ನು ನೀಡಲಾಗಿದೆ. 7-ಸೀಟರ್ ಮಾದರಿಯಲ್ಲಿ ಎರಡನೇ ಸಾಲಿನಲ್ಲಿ ಬೆಂಚ್ ಸೀಟ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ