AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಇಂಟರ್ನ್​ಸಿಪ್ ಸ್ಕೀಮ್ ಪರಿಷ್ಕೃತ ಮಾರ್ಗಸೂಚಿ; ವಯೋಮಿತಿಯಲ್ಲಿ ಬದಲಾವಣೆ, ಭತ್ಯೆ ಹೆಚ್ಚಳ, ಇಂಟರ್ನ್ ಅವಧಿ ಕಿರಿದು

PM Internship Scheme, revised guidelines from March 12th: ಪಿಎಂ ಇಂಟರ್ನ್​ಶಿಪ್ ಸ್ಕೀಮ್​ನ ಮಾರ್ಗಸೂಚಿಗಳನ್ನು ಸರ್ಕಾರ ಪರಿಷ್ಕರಿಸಿದೆ. ಈ ಪ್ರಾಯೋಗಿಕ ಸ್ಕೀಮ್​ನಲ್ಲಿ ಮೊದಲೆರಡು ಸುತ್ತಿನಲ್ಲಿ ಅಭ್ಯರ್ಥಿಗಳಿಂದ ನೀರಸ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಸುಧಾರಣೆ ತಂದಿದೆ. ಇಂಟರ್ನ್​ಶಿಪ್​ಗೆ ವಯೋಮಿತಿಯಲ್ಲಿ ಬದಲಾವಣೆ ಮಾಡಿದೆ, ಭತ್ಯೆ ಹೆಚ್ಚಿಸಿದೆ. ಇಂಟರ್ನ್ ಅವಧಿಯನ್ನೂ ಕಡಿಮೆಗೊಳಿಸಿದೆ.

ಪಿಎಂ ಇಂಟರ್ನ್​ಸಿಪ್ ಸ್ಕೀಮ್ ಪರಿಷ್ಕೃತ ಮಾರ್ಗಸೂಚಿ; ವಯೋಮಿತಿಯಲ್ಲಿ ಬದಲಾವಣೆ, ಭತ್ಯೆ ಹೆಚ್ಚಳ, ಇಂಟರ್ನ್ ಅವಧಿ ಕಿರಿದು
ಇಂಟರ್ನ್​ಶಿಪ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 25, 2026 | 6:39 PM

Share

ನವದೆಹಲಿ, ಮಾರ್ಚ್ 25: ಯುವಜನರ ಕೌಶಲ್ಯಾಭಿವೃದ್ಧಿ ಉದ್ದೇಶದಿಂದ ಸರ್ಕಾರ ಪ್ರಾಯೋಗಿಕವಾಗಿ ನಡೆಸುತ್ತಿರುವ ಪ್ರಧಾನಮಂತ್ರಿ ಇಂಟರ್ನ್​ಶಿಪ್ ಸ್ಕೀಮ್​ಗೆ (PM Internship Scheme) ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಒಂದು ವರ್ಷ ಇದ್ದ ಇಂಟರ್ನ್​ಶಿಪ್ ಅವಧಿಯನ್ನು 6-9 ತಿಂಗಳಿಗೆ ಇಳಿಸಲಾಗಿದೆ. ಸ್ಕೀಮ್​ಗೆ ಅರ್ಹತಾ ವಯೋಮಿತಿಯನ್ನು 21-24 ವರ್ಷ ಬದಲು 18-25 ವರ್ಷ ವಯೋಮಾನಕ್ಕೆ ಬದಲಾಯಿಸಲಾಗಿದೆ. ಕೇಂದ್ರ ಸಚಿವರು ಈ ಕುರಿತು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಪರಿಷ್ಕೃತ ಮಾರ್ಗಸೂಚಿ ಮಾರ್ಚ್ 12ರಿಂದ ಜಾರಿಗೆ ಬಂದಿದೆ. ಸ್ನಾತಕೋತ್ತರ ಪದವಿ ಮಾಡಿರುವ ಅಭ್ಯರ್ಥಿಗಳು ಮತ್ತು ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್​ಗಳನ್ನು ಉಡುಗೊರೆಯಾಗಿ ನೀಡಬೇಕಾ? ಸೆಬಿ ಮುಂದಿದೆ ಹೊಸ ಪ್ಲಾನ್

ಮಾಸಿಕ ಭತ್ಯೆಯಲ್ಲಿ ಹೆಚ್ಚಳ

ಪಿಎಂ ಇಂಟರ್ನ್​ಶಿಪ್ ಸ್ಕೀಮ್​ನಲ್ಲಿ ಮಾಸಿಕ ಭತ್ಯೆ 5,000 ರೂ ಇತ್ತು. ಅದನ್ನು 9,000 ರೂಗೆ ಏರಿಸಲಾಗಿದೆ. ಸ್ಕೀಮ್​ನಲ್ಲಿ ರಾಲಿಂಗ್ ಇಂಟರ್ನ್​ಶಿಪ್ ಸೈಕಲ್ ವಿಧಾನ ಅಳವಡಿಸಲಾಗಿದೆ. ಇದರಿಂದ ನಿರಂತರವಾಗಿ ಪೋಸ್ಟಿಂಗ್, ಆಯ್ಕೆಗೆ ಅವಕಾಶ ಇರುತ್ತದೆ. ಮತ್ತೊಂದು ಮಾರ್ಗಸೂಚಿ ಬದಲಾವಣೆ ಎಂದರೆ, ಈ ಸ್ಕೀಮ್​ನಲ್ಲಿ ಭಾಗಿಯಾಗುವ ಕಂಪನಿಗಳ ಸಂಖ್ಯೆಯನ್ನು ಮತ್ತು ವಿಸ್ತಾರವನ್ನು ಹೆಚ್ಚಿಸಲಾಗಿದೆ.

ಇಂಟರ್ನ್​ಸಿಪ್ ಸ್ಕೀಮ್​ನ ಮೊದಲ ಸುತ್ತಿನ ಪ್ರಾಜೆಕ್ಟ್​ನಲ್ಲಿ ಪಾರ್ಟ್ನರ್ ಕಂಪನಿಗಳು 1.27 ಲಕ್ಷ ಇಂಟರ್ನ್​ಶಿಪ್ ಅವಕಾಶ ನೀಡಿದ್ದವು. ಈ ಪೈಕಿ 60,000 ಅಭ್ಯರ್ಥಿಗಳಿಗೆ 82,000 ಆಫರ್ ಕೊಡಲಾಗಿತ್ತು. ಅವರಲ್ಲಿ 8,760 ಮಂದಿ ಇಂಟರ್ನ್​ಶಿಪ್​ಗೆ ಸೇರ್ಪಡೆಯಾಗಿದ್ದರು.

ಇನ್ನು ಎರಡನೇ ಸುತ್ತಿನಲ್ಲಿ ಪಾರ್ಟ್ನರ್ ಕಂಪನಿಗಳು 1.18 ಲಕ್ಷ ಇಂಟರ್ನ್​ಶಿಪ್ ಅವಕಾಶ ನೀಡಿದ್ದವು. 71,000 ಅಭ್ಯರ್ಥಿಗಳಿಗೆ 83,000 ಆಫರ್ ಕೊಡಲಾಗಿತ್ತು. ಈ ಪೈಕಿ 7,300 ಮಂದಿ ಇಂಟರ್ನ್​ಶಿಪ್ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ಸರ್ಕಾರದ ಸುಕನ್ಯಾ ಸಮೃದ್ದಿ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್ಸ್?

ಈ ಸ್ಕೀಮ್​ನ ಮೊದಲ ಎರಡು ಸುತ್ತಿನಲ್ಲಿ ಅಭ್ಯರ್ಥಿಗಳಿಂದ ನೀರಸ ಪ್ರತಿಕ್ರಿಯೆ ಬರಲು ಕೆಲ ಕಾರಣಗಳನ್ನು ಪತ್ತೆ ಮಾಡಲಾಗಿದೆ. ಇಂಟರ್ನ್​ಶಿಪ್ ಮಾಡಲು ಅಭ್ಯರ್ಥಿಗಳಿಗೆ 5ರಿಂದ 10 ಕಿಮೀ ದೂರ ಪ್ರಯಾಣ ಉತ್ತಮ ಆಯ್ಕೆ ಎಂಬುದು ಇತ್ತೀಚಿನ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹಾಗೆಯೇ, 12 ತಿಂಗಳ ಇಂಟರ್ನ್​ ಅವಧಿ ತೀರಾ ಹೆಚ್ಚಾಯಿತು ಎನ್ನುವ ಅಭಿಪ್ರಾಯಗಳೂ ಬಂದಿದ್ದವು. ಈ ಕಾರಣಕ್ಕೆ ಸರ್ಕಾರ ಸ್ಕೀಮ್​ನ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More