Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ಪ್ರೀತಿ ನಿರಾಕರಿಸಿದ್ದಕ್ಕೆ ಎರಡು ತಿಂಗಳ ಹಸುಗೂಸನ್ನು ಕೊಂದ ಅಪ್ರಾಪ್ತೆ

ಯಾದಗಿರಿ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಎರಡು ತಿಂಗಳ ಹಸುಗೂಸನ್ನು ಅಪ್ರಾಪ್ತೆ ಬಾವಿಯೊಳಗೆ ಎಸೆದು ಕೊಲೆ ಮಾಡಿದ್ದಾಳೆ. ಯಾದಗಿರ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಯಾದಗಿರಿ: ಪ್ರೀತಿ ನಿರಾಕರಿಸಿದ್ದಕ್ಕೆ ಎರಡು ತಿಂಗಳ ಹಸುಗೂಸನ್ನು ಕೊಂದ ಅಪ್ರಾಪ್ತೆ
ಮೃತ ಮೀನಾಕ್ಷಿ, ಯಾದಗಿರಿ ನಗರ ಪೊಲೀಸ್​ ಠಾಣೆ
Follow us
ಅಮೀನ್​ ಸಾಬ್​
| Updated By: ಡಾ. ಭಾಸ್ಕರ ಹೆಗಡೆ

Updated on:Jul 08, 2024 | 10:19 AM

ಯಾದಗಿರಿ, ಜುಲೈ 08: ಎರಡು ತಿಂಗಳ ಹಸುಗೂಸನ್ನು (2 Months Baby) ಕೊಲೆ ಮಾಡಿದ ಅಪ್ರಾಪ್ತೆಯನ್ನು ಯಾದಗಿರಿ ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಯಾದಗಿರಿ (Yadgiri) ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಾಗೇಶ್​, ಚಟ್ಟೆಮ್ಮ ಎಂಬ ದಂಪತಿ ವಾಸವಾಗಿದ್ದಾರೆ. ದಂಪತಿಯ ಮಗು ಮೀನಾಕ್ಷಿ ಮೃತ ಹಸುಗೂಸು. ಕೊಲೆ ಮಾಡಿದ ಅಪ್ರಾಪ್ತೆ ಪಕ್ಕದ ಮನೆಯಲ್ಲೇ ವಾಸವಾಗಿದ್ದಳು. ಅಪ್ರಾಪ್ತೆ ಮೀನಾಕ್ಷಿಯು ಚಿಕ್ಕಪ್ಪ ನಾಗೇಶ್​ನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವನ್ನು ಅಪ್ರಾಪ್ತೆ ಆತನಿಗೆ ಹೇಳಿದ್ದಳು. ಆದರೆ, ಮೀನಾಕ್ಷಿಯ ಚಿಕ್ಕಪ್ಪ ಅಪ್ರಾಪ್ತೆಯ ಪ್ರೀತಿಯನ್ನು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಅಪ್ರಾಪ್ತೆ ನಾಗೇಶ್​, ಚಟ್ಟೆಮ್ಮ ದಂಪತಿಯ ಎರಡು ತಿಂಗಳ ಮಗು ಮೀನಾಕ್ಷಿಯನ್ನು ಬಾವಿಯೊಳಗೆ ಹಾಕಿದ್ದಾಳೆ.

ಬಳಿಕ ಮೀನಾಕ್ಷಿಯನ್ನು ಆತನ ಚಿಕ್ಕಪ್ಪನೇ ಕೊಲೆ ಮಾಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾಳೆ. ಮಗು ಕಾಣದಿದ್ದಾಗ ಪೋಷಕರು ಮಗುವನ್ನು ಹುಡುಕಲು ಆರಂಭಿಸಿದ್ದಾರೆ. ಅವರೊಂದಿಗೆ, ಆರೋಪಿ ಕೂಡ ಮಗುವನ್ನು ಹುಡುಕುವ ನಾಟಕವಾಡಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಬಾವಿಯಲ್ಲಿ ನೋಡೋಣ ಎಂದು ಪೋಷಕರಿಗೆ ಹೇಳಿದ್ದಾಳೆ. ಆಗ ಮಗುವಿನ ಪೋಷಕರು ಬಾವಿಯಲ್ಲಿ ನೋಡಿದಾಗ ಮಗುವಿನ ಶವ ಕಂಡಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಬೇರೊಬ್ಬಳ ಜೊತೆ ಸಂಬಂಧ, ಸ್ನೇಹಿತರಿಗೆ ಮದ್ಯ ಸರ್ವ್​ ಮಾಡುವಂತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪತಿ ವಿರುದ್ಧ ದೂರು

ಈ ವಿಚಾರ ತಿಳಿದ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನಿಜಾಂಶ ಬಯಲಾಗಿದೆ. ಅಪ್ರಾಪ್ತೆಯನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ವಿಚಾರಣೆ ನಡೆಸಿದಾಗ, “ಮೀನಾಕ್ಷಿ ಚಿಕ್ಕಪ್ಪ ನನ್ನ ಪ್ರೀತಿ ನಿರಾಕರಿಸಿದರು. ಈ ಸಿಟ್ಟಿನಲ್ಲಿ ಕೊಲೆ ಪ್ರಕರಣದಲ್ಲಿ ಮೀನಾಕ್ಷಿ ಚಿಕ್ಕಪ್ಪ ಜೈಲಿಗೆ ಹೋಗಲಿ ಅಂತ ಈ ಕೃತ್ಯ ಎಸಗಿದ್ದೇನೆ” ಎಂದು ಪೊಲೀಸರ ಎದುರು ಅಪ್ರಾಪ್ತೆ ಬಾಯಿ ಬಿಟ್ಟಿದ್ದಾಳೆ.” ಯಾದಗಿರಿ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿಪಟೂರು: ಮೂರು ತಿಂಗಳ ಹೆಣ್ಣು ಮಗು ಪತ್ತೆ

ತುಮಕೂರು: ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ಹೆಡಗರಹಳ್ಳಿ ಗ್ರಾಮದಲ್ಲಿ ಮೂರು ತಿಂಗಳ ಹೆಣ್ಣು ಮಗು ಪತ್ತೆಯಾಗಿದೆ. ಆಶಾ ಕಾರ್ಯಕರ್ತೆಯೊಬ್ಬರು ವಾಕಿಂಗ್ ಮಾಡುವ ವೇಳೆ ಮಗುವಿನ ಅಳುವ ಶಬ್ಧ ಕೇಳಿಸಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಇತ್ತು.

ಆಶಾ ಕಾರ್ಯಕರ್ತೆ ಕಲಾವತಿ ತಕ್ಷಣ ನೊಣವಿನಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆಂಬುಲೆನ್ಸ್ ಮೂಲಕ ಮಗುವನ್ನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆರೋಗ್ಯವಾಗಿದೆ. ಮಕ್ಕಳ ತಜ್ಞೆ ಡಾ.ಶೀರಿಷ ಅವರಿಂದ ಮಗುವಿನ ಆರೋಗ್ಯ ತಪಾಸಣೆ ಮಾಡಲಾಗಿದೆ. ನೊಣವಿನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:46 am, Mon, 8 July 24

ಲಂಡನ್‌ನ ಟರ್ಕಿಶ್ ಕಾನ್ಸುಲೇಟ್ ಹೊರಗೆ ಕುರಾನ್ ಸುಟ್ಟ ವ್ಯಕ್ತಿ
ಲಂಡನ್‌ನ ಟರ್ಕಿಶ್ ಕಾನ್ಸುಲೇಟ್ ಹೊರಗೆ ಕುರಾನ್ ಸುಟ್ಟ ವ್ಯಕ್ತಿ
ಮುಂದಿನ ಸಲ ಮಾತಾಡ್ತೀನಿ: ಪ್ರತಿಕ್ರಿಯೆ ನೀಡದೇ ಹೊರಟ ಪವಿತ್ರಾ ಗೌಡ
ಮುಂದಿನ ಸಲ ಮಾತಾಡ್ತೀನಿ: ಪ್ರತಿಕ್ರಿಯೆ ನೀಡದೇ ಹೊರಟ ಪವಿತ್ರಾ ಗೌಡ
ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ರಷ್ಯಾದ ಡ್ರೋನ್‌ ದಾಳಿ
ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ರಷ್ಯಾದ ಡ್ರೋನ್‌ ದಾಳಿ
ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ
ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ
ಯತ್ನಾಳ್​​ಗೆ ನೋಟೀಸ್ ಕೊಟ್ಟಿದ್ದು ನಾನಲ್ಲ, ಶಿಸ್ತು ಸಮಿತಿ: ವಿಜಯೇಂದ್ರ
ಯತ್ನಾಳ್​​ಗೆ ನೋಟೀಸ್ ಕೊಟ್ಟಿದ್ದು ನಾನಲ್ಲ, ಶಿಸ್ತು ಸಮಿತಿ: ವಿಜಯೇಂದ್ರ
‘ನಮ್ಮ ಪ್ರೀತಿಯ ರಾಮು’ ಸಿನಿಮಾ ನೋಡಿ ಖುಷಿಪಟ್ಟ ದರ್ಶನ್ ಅಭಿಮಾನಿಗಳು
‘ನಮ್ಮ ಪ್ರೀತಿಯ ರಾಮು’ ಸಿನಿಮಾ ನೋಡಿ ಖುಷಿಪಟ್ಟ ದರ್ಶನ್ ಅಭಿಮಾನಿಗಳು
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ