BEL Recruitment 2022: ಬಿಇಎಲ್ನಲ್ಲಿ ಉದ್ಯೋಗಾವಕಾಶ: ತಿಂಗಳ ವೇತನ 40 ಸಾವಿರ ರೂ.
BEL Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 32 ವರ್ಷಗಳು ದಾಟಿರಬಾರದು. ಹಾಗೆಯೇ ಇತರೆ ಹುದ್ದೆಗಳಿಗೆ ಗರಿಷ್ಠ ವಯಸ್ಸು 28 ವರ್ಷ.
BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರಾಜೆಕ್ಟ್ ಇಂಜಿನಿಯರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಜನವರಿ 27 ರಿಂದ ಆರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್ ವೆಬ್‌ಸೈಟ್ https://bel-india.in/ ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಸೂಚನೆಯ ಪ್ರಕಾರ, ಒಟ್ಟು 247 ಖಾಲಿ ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 4 ಫೆಬ್ರವರಿ 2022. ಈ ಹುದ್ದೆಗಳ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ಸಂಖ್ಯೆ ಮತ್ತು ವಿವರ: ಪ್ರಾಜೆಕ್ಟ್ ಇಂಜಿನಿಯರ್ – 67 ಹುದ್ದೆಗಳು ಟ್ರೈನಿ ಇಂಜಿನಿಯರ್ – 169 ಹುದ್ದೆಗಳು ಟ್ರೈನಿ ಆಫೀಸರ್ – 11 ಹುದ್ದೆಗಳು
ವೇತನ: ಪ್ರಾಜೆಕ್ಟ್ ಇಂಜಿನಿಯರ್ – ತಿಂಗಳಿಗೆ 40,000 ರೂ. ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ – ತಿಂಗಳಿಗೆ 30,000 ರೂ.
ವಿದ್ಯಾರ್ಹತೆ: ಪ್ರಾಜೆಕ್ಟ್ ಇಂಜಿನಿಯರ್/ಟ್ರೇನಿ ಇಂಜಿನಿಯರ್- ಅಭ್ಯರ್ಥಿಯು ಕನಿಷ್ಟ 55% ಅಂಕಗಳೊಂದಿಗೆ B.Tech/ BE ಅಥವಾ B.Sc ಪದವಿ ಪಡೆದಿರಬೇಕು. ಟ್ರೈನಿ ಆಫೀಸರ್- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು MBA ಪದವಿಯನ್ನು ಹೊಂದಿರಬೇಕು.
ವಯೋಮಿತಿ: ಪ್ರಾಜೆಕ್ಟ್ ಇಂಜಿನಿಯರ್- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 32 ವರ್ಷಗಳು ದಾಟಿರಬಾರದು. ಹಾಗೆಯೇ ಇತರೆ ಹುದ್ದೆಗಳಿಗೆ ಗರಿಷ್ಠ ವಯಸ್ಸು 28 ವರ್ಷ. ಇನ್ನು ಮೀಸಲಾತಿ ವರ್ಗದ ಅಭ್ಯರ್ಥಿಗಳು ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ: ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳ ಅರ್ಜಿ ಶುಲ್ಕ 500 ರೂ. ಇತರೆ ಹುದ್ದೆಗಳ ಅರ್ಜಿ ಶುಲ್ಕ 200 ರೂ.
ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(BEL Recruitment 2022: Apply online for 247 Project)