Anushka Shetty: ಭಕ್ತಿಯಿಂದ ಭೂತಕೋಲ ವೀಕ್ಷಿಸಿದ ಅನುಷ್ಕಾ ಶೆಟ್ಟಿ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
Anushka Shetty | Buta Kola: ಭೂತಕೋಲ ನಡೆಯುವ ವೇಳೆ ಅನುಷ್ಕಾ ಶೆಟ್ಟಿ ಅವರು ಭಕ್ತಿ ಭಾವದಿಂದ ವೀಕ್ಷಿಸಿದ್ದಾರೆ. ದೈವ ನರ್ತನವನ್ನು ತಮ್ಮ ಮೊಬೈಲ್ನಲ್ಲಿ ಚಿತ್ರಿಸಿಕೊಂಡಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ದೇಶಾದ್ಯಂತ ಪ್ರಸಿದ್ಧಿ ಹೊಂದಿದ್ದಾರೆ. ಟಾಲಿವುಡ್ ಸಿನಿಮಾಗಳ ಮೂಲಕ ಅವರು ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಎಷ್ಟೇ ಜನಪ್ರಿಯತೆ, ಯಶಸ್ಸು ಸಿಕ್ಕರೂ ಅವರು ತಮ್ಮ ಮೂಲ ಸಂಸ್ಕೃತಿಯನ್ನು ಮರೆತಿಲ್ಲ. ಕನ್ನಡದ ಬಗ್ಗೆ, ಕರುನಾಡಿನ ಆಚಾರ ವಿಚಾರಗಳ ಬಗ್ಗೆ ಅವರಿಗೆ ಗೌರವ ಇದೆ. ಮೂಲತಃ ತುಳುನಾಡಿನವರಾದ ಅನುಷ್ಕಾ ಶೆಟ್ಟಿ ಅವರು ಪ್ರತಿ ವರ್ಷ ತಮ್ಮ ಕುಟುಂಬದವರ ಜೊತೆ ಸೇರಿ ಭೂತಕೋಲದಲ್ಲಿ (Bhoota Kola) ಭಾಗಿ ಆಗುತ್ತಾರೆ. ಈ ಬಾರಿ ಕೂಡ ಅವರು ಭೂತಕೋಲದಲ್ಲಿ ಪಾಲ್ಗೊಂಡಿದ್ದಾರೆ. ಅದರ ವಿಡಿಯೋ ವೈರಲ್ (Anushka Shetty Viral Video) ಆಗಿದೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿ ಭೂತಕೋಲದ ಬಗ್ಗೆ ವಿವರವಾಗಿ ತೋರಿಸಲಾಗಿದೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಈ ಚಿತ್ರ ಸೂಪರ್ ಹಿಟ್ ಆಗಿದೆ. ಆ ಮೂಲಕ ಇಡೀ ದೇಶದ ಜನರಿಗೆ ಭೂತಕೋಲ ಪರಿಚಯ ಆದಂತಾಗಿದೆ. ಈ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಜನರಲ್ಲಿ ಕುತೂಹಲ ಹೆಚ್ಚಿದೆ. ತುಳುನಾಡಿನ ಮಂದಿಗೆ ದೈವಾರಾಧನೆಯಲ್ಲಿ ಅಪಾರ ಶ್ರದ್ಧೆ ಇದೆ. ಅನುಷ್ಕಾ ಶೆಟ್ಟಿ ಕೂಡ ಇದರಲ್ಲಿ ನಂಬಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್ ಬಗ್ಗೆ ಸ್ಪೆಷಲ್ ಮಾತುಗಳನ್ನು ಹೇಳಿದ ಸ್ಟಾರ್ ನಟಿ
ಭೂತಕೋಲ ನಡೆಯುವ ವೇಳೆ ಅನುಷ್ಕಾ ಶೆಟ್ಟಿ ಅವರು ಭಕ್ತಿ ಭಾವದಿಂದ ವೀಕ್ಷಿಸಿದ್ದಾರೆ. ದೈವ ನರ್ತನವನ್ನು ತಮ್ಮ ಮೊಬೈಲ್ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಈ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನುಷ್ಕಾ ಶೆಟ್ಟಿಗೆ ದೇವರು ಒಳ್ಳೆಯದು ಮಾಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈ ಸ್ಟಾರ್ ಕಲಾವಿದೆಯ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: Anushka Shetty: ಚಿತ್ರರಂಗದಲ್ಲಿ 17 ವರ್ಷ ಪೂರೈಸಿದ ಅನುಷ್ಕಾ ಶೆಟ್ಟಿ; ಕನ್ನಡತಿಯ ಸಾಧನೆಗೆ ಪರಭಾಷೆ ಮಂದಿ ಸೆಲೆಬ್ರೇಷನ್
‘ಬಾಹುಬಲಿ’ ಸಿನಿಮಾದ ನಂತರ ಅನುಷ್ಕಾ ಶೆಟ್ಟಿ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಮಾಧವನ್ ಜೊತೆ ಅಭಿನಯಿಸಿದ ‘ನಿಶಬ್ದಂ’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಜನಮನ ಗೆಲ್ಲಲಿಲ್ಲ. ಈಗ ಅವರು ನವೀನ್ ಪೊಲಿಶೆಟ್ಟಿ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷ ಅವರ ಬರ್ತ್ಡೇ ಪ್ರಯುಕ್ತ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರು ಮಾಸ್ಟರ್ ಶೆಫ್ ಪಾತ್ರ ಮಾಡುತ್ತಿದ್ದಾರೆ.
Another glimpse of Sweety attending Boothakola Festival in her home town ❤️❤️✨✨#AnushkaShetty #Sweety #Anushka48 pic.twitter.com/XvwIXTnjha
— PRANUSHKA FANCLUB ?❤️ (@pranushka_fan) December 18, 2022
Glimpse of Lady SuperStar #AnushkaShetty today from her hometown in Mangalore. Looking beautiful in a Saree?❤️✨
Queen is back!!! pic.twitter.com/G12KxoyBtx
— AnushkaShettyPlanet✨ (@Sweety_ShettyFc) December 18, 2022
ಅನುಷ್ಕಾ ಶೆಟ್ಟಿ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿದೆ. ಅದಕ್ಕೆ ಸದ್ಯಕ್ಕಂತೂ ಉತ್ತರ ಸಿಕ್ಕಿಲ್ಲ. ಈ ಕುರಿತು ಆಗಾಗ ಗಾಸಿಪ್ ಹಬ್ಬುತ್ತಲೇ ಇರುತ್ತದೆ. ಆದರೆ ಅದರ ಬಗ್ಗೆ ಅನುಷ್ಕಾ ತಲೆ ಕೆಡಿಸಿಕೊಂಡಿಲ್ಲ. ಸದ್ಯ ಅವರು ಸಿನಿಮಾ ಕೆಲಸಗಳತ್ತ ಗಮನ ಹರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:48 pm, Mon, 19 December 22