AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾರ್ಥದ ಆಟ ಆಡಿದ ಗಾನವಿ, ನಂಬಿದ ಸಹ ಸ್ಪರ್ಧಿಗಳಿಗೆ ಮೋಸ?

Bigg Boss Kannada 13: ಗೆಲುವಿಗಾಗಿ ಯತ್ನಿಸುತ್ತಿದ್ದಾರೆ. ಆದರೆ ಮನೆಯಲ್ಲಿ ಕೆಲ ಸ್ಪರ್ಧಿಗಳು ಗೆಲುವಿಗಾಗಿ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದರೆ. ಕೆಲವು ಬಾರಿಯಂತೆ ಗೆಲುವಿಗಾಗಿ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡು ಮೋಸದಿಂದ ಆಟ ಆಡುತ್ತಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಇತ್ತೀಚೆಗೆ ನಡೆದ ಪವರ್ ಕಾಯಿನ್‌ಗಳ ಹಂಚಿಕೆಯ ಪ್ರಕ್ರಿಯೆಯು ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಸ್ಪರ್ಧಿ ಗಾನವಿ ತಮ್ಮದೇ ಸ್ವಂತ ತಂಡಕ್ಕೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸ್ವಾರ್ಥದ ಆಟ ಆಡಿದ ಗಾನವಿ, ನಂಬಿದ ಸಹ ಸ್ಪರ್ಧಿಗಳಿಗೆ ಮೋಸ?
Ganavi Bigg Boss 13
ಮಂಜುನಾಥ ಸಿ.
|

Updated on: Oct 16, 2026 | 11:51 AM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13
  • ನಂಬಿದವರಿಗೆ ಮೋಸ ಮಾಡಿದ ಗಾನವಿ
  • ಪವರ್ ಕಾಯಿನ್ ಟಾಸ್ಕ್​​ನಲ್ಲಿ ಮೋಸ ಮಾಡಿದ ಗಾನವಿ

ಬಿಗ್​​ಬಾಸ್ ಮನೆಯಲ್ಲಿ ಪ್ರತಿ ವಾರದಂತೆ ಈ ವಾರವೂ ಟಾಸ್ಕ್ ಜೋರಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ಆಟಗಳನ್ನು ಆಡುತ್ತಿದ್ದಾರೆ. ಗೆಲುವಿಗಾಗಿ ಯತ್ನಿಸುತ್ತಿದ್ದಾರೆ. ಆದರೆ ಮನೆಯಲ್ಲಿ ಕೆಲ ಸ್ಪರ್ಧಿಗಳು ಗೆಲುವಿಗಾಗಿ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದರೆ. ಕೆಲವು ಬಾರಿಯಂತೆ ಗೆಲುವಿಗಾಗಿ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡು ಮೋಸದಿಂದ ಆಟ ಆಡುತ್ತಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಇತ್ತೀಚೆಗೆ ನಡೆದ ಪವರ್ ಕಾಯಿನ್‌ಗಳ ಹಂಚಿಕೆಯ ಪ್ರಕ್ರಿಯೆಯು ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಸ್ಪರ್ಧಿ ಗಾನವಿ ತಮ್ಮದೇ ಸ್ವಂತ ತಂಡಕ್ಕೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಟಾಸ್ಕ್‌ನಲ್ಲಿ ‘ಒಂಟಿ ಪಂಟರ್ಸ್’ ತಂಡವು ಅತ್ಯಂತ ಶ್ರಮಪಟ್ಟು ಒಟ್ಟು 30 ಪವರ್ ಕಾಯಿನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈ ರೀತಿ ಕಷ್ಟಪಟ್ಟು ಗೆದ್ದುಕೊಂಡ ಕಾಯಿನ್‌ಗಳನ್ನು ತಂಡದ ಸದಸ್ಯರ ನಡುವೆ ಹೇಗೆ ಹಂಚಿಕೊಳ್ಳಬೇಕು ಎಂಬ ಸವಾಲು ಎದುರಾಗಿತ್ತು. ಎಲ್ಲರ ಒಮ್ಮತದ ಹಾಗೂ ಬಹುಮತದ ಆಧಾರದ ಮೇಲೆ ಒಬ್ಬರನ್ನು ಆಯ್ಕೆ ಮಾಡಿ ಕನ್ಫೆಷನ್ ರೂಮ್‌ಗೆ ಕಳುಹಿಸಲು ನಿರ್ಧರಿಸಲಾಗಿತ್ತು.

ತಂಡದ ಸದಸ್ಯರೆಲ್ಲರೂ ಗಾನವಿ ಅವರ ಮೇಲೆ ಪೂರ್ಣ ನಂಬಿಕೆ ಇಟ್ಟು, “ನಾವು ನಿನ್ನನ್ನು ನಂಬುತ್ತೇವೆ, ಎಲ್ಲರಿಗೂ ನ್ಯಾಯಯುತವಾಗಿ ಕಾಯಿನ್‌ಗಳನ್ನು ಹಂಚು” ಎಂದು ಹೇಳಿ ಅವರನ್ನು ಕನ್ಫೆಷನ್ ರೂಮ್‌ಗೆ ಕಳುಹಿಸಿದ್ದರು. ಆದರೆ ಒಳಗೆ ಹೋದ ನಂತರ ಗಾನವಿ ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿದರು. ತಂಡದ ಒಮ್ಮತದ ನಿರ್ಧಾರವನ್ನು ಮೀರಿ ಅವರು ಸಂಪೂರ್ಣ ಸ್ವಾರ್ಥದ ಆಟವಾಡಿದ್ದಾರೆ. ಒಟ್ಟು 30 ಪವರ್ ಕಾಯಿನ್‌ಗಳಲ್ಲಿ ಬರೋಬ್ಬರಿ 15 ಕಾಯಿನ್‌ಗಳನ್ನು (ಅರ್ಧದಷ್ಟು) ತನಗೆ ತಾನೇ ಇಟ್ಟುಕೊಳ್ಳುವ ಮೂಲಕ ರಹಸ್ಯ ತಂತ್ರ ರೂಪಿಸಿದರು.

ಇದನ್ನೂ ಓದಿ:ಬಿಗ್​​ಬಾಸ್: ಎಷ್ಟು ಚಂದ ಹಾಡು ಹಾಡ್ತಾರೆ ತಾಂಡವ್, ವಿಡಿಯೋ ನೋಡಿ

ಗಾನವಿ ಅವರ ಈ ಮಾಸ್ಟರ್ ಪ್ಲ್ಯಾನ್‌ನಿಂದಾಗಿ ಉಳಿದ ಸ್ಪರ್ಧಿಗಳಿಗೆ ಅನ್ಯಾಯವಾಯಿತು. ಗಾನವಿ ನಂತರ ಒಳಗೆ ಹೋದ ಲಕ್ಷ್ಮಿ ಅವರಿಗೆ 8 ಕಾಯಿನ್‌ಗಳು ಸಿಕ್ಕರೆ, ಗಗನ್ ಚಿನ್ನಪ್ಪ ಅವರಿಗೆ 6 ಕಾಯಿನ್‌ಗಳು ಮಾತ್ರ ಲಭಿಸಿದವು. ಹಾಗೆಯೇ ಸೋನಿಕಾ ಕೇವಲ ಒಂದು ಕಾಯಿನ್ ಪಡೆದರೆ, ಧನುಷ್‌ಗೆ ಯಾವುದೇ ಕಾಯಿನ್ ಸಿಗದೆ ಬರಿಗೈಯಲ್ಲಿ ಹೊರಬರಬೇಕಾಯಿತು. ತಂಡದ ಎಲ್ಲರ ಶ್ರಮದಿಂದ ಬಂದ ಕಾಯಿನ್‌ಗಳನ್ನು ಸಮಾನವಾಗಿ ಹಂಚಿಕೊಳ್ಳುವ ಮಾತುಕೊಟ್ಟು, ಕೊನೆಗೆ ತಾನೊಬ್ಬಳೇ ಹೆಚ್ಚಿನ ಕಾಯಿನ್‌ಗಳನ್ನು ಬಾಚಿಕೊಂಡ ಗಾನವಿಯ ಈ ನಡವಳಿಕೆ ಸಹಸ್ಪರ್ಧಿಗಳಲ್ಲಿ ಆಘಾತ ತಂದಿತು.

ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರೊಮೋ ಹಾಗೂ ಎಪಿಸೋಡ್ ಬಿಡುಗಡೆಯಾದ ಬೆನ್ನಲ್ಲೇ ವೀಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಟದಲ್ಲಿ ಗೆಲ್ಲಲು ತಂತ್ರ ಹೂಡುವುದು ಬೇರೆ, ಆದರೆ ನಂಬಿಕೆ ಇಟ್ಟು ಜವಾಬ್ದಾರಿ ಕೊಟ್ಟ ಸ್ವಂತ ತಂಡಕ್ಕೆ ಬೆನ್ನಿಗೆ ಇರಿದು ಮೋಸ ಮಾಡುವುದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಗಾನವಿ ಅವರ ಈ ಸ್ವಾರ್ಥಿ ಧೋರಣೆಯನ್ನು ಖಂಡಿಸಿರುವ ಅಭಿಮಾನಿಗಳು ಅವರಿಗೆ ‘ಕನ್ನಿಂಗ್’ (ಕುತಂತ್ರಿ) ಎಂಬ ಪಟ್ಟ ಕಟ್ಟಿದ್ದಾರೆ.

ಮನೆಯೊಳಗೂ ಕೂಡ ಗಾನವಿ ಅವರ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಗಗನ್ ಚಿನ್ನಪ್ಪ ಸೇರಿದಂತೆ ಇತರ ಸದಸ್ಯರು ಇದನ್ನು ಗೋಗಿ ಪ್ರಶ್ನಿಸಿದ್ದಾರೆ. ನಂಬಿದ ತಂಡಕ್ಕೆ ಕೈಕೊಟ್ಟು ಗಾನವಿ ಆಡಿದ ಈ ಕಾಸಿನ ಗೇಮ್‌ ಮುಂದಿನ ದಿನಗಳಲ್ಲಿ ದೊಡ್ಮನೆಯಲ್ಲಿ ಯಾವ ರೀತಿಯ ದೊಡ್ಡ ಜಗಳ ಹಾಗೂ ವಾಗ್ವಾದಕ್ಕೆ ದಾರಿ ಮಾಡಿಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More