ಆಲಿಯಾ ಬಗ್ಗೆ ರಣಬೀರ್ಗೆ ಇಲ್ಲ ಕಾಳಜಿ? ಟ್ರೋಲ್ ಆದ ಹೀರೋ
ರಾಜ್ ಕಪೂರ್ ಅವರ ಶತಮಾನೋತ್ಸವದ ಸಮಾರಂಭದಲ್ಲಿ ರಣಬೀರ್ ಕಪೂರ್ ಅವರ ವರ್ತನೆಯ ಬಗ್ಗೆ ಟೀಕೆಗಳು ವ್ಯಾಪಕವಾಗಿ ಹರಡಿವೆ. ರಣಬೀರ್ ಅವರನ್ನು ಅನೇಕರು ಟ್ರೋಲ್ ಮಾಡಿದ್ದಾರೆ. ಈ ಟೀಕೆಗಳಿಗೆ ಆಲಿಯಾ ಭಟ್ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ. ಈ ದಂಪತಿಯು ಮೊದಲು "ಬ್ರಹ್ಮಾಸ್ತ್ರ" ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡರು ಮತ್ತು ಅವರ ಸಂಬಂಧ ಸಿನಿಮಾದ ಸೆಟ್‌ನಲ್ಲಿ ಆರಂಭವಾಯಿತು.
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಬಾಲಿವುಡ್ನ ಸಾಕಷ್ಟು ಚರ್ಚೆಗೆ ಒಳಗಾಗುವ ಸೆಲೆಬ್ರಿಟಿಗಳು. ಈ ದಂಪತಿ ಭರ್ಜರಿ ಮೆಚ್ಚುಗೆ ಪಡೆಯುತ್ತಾರೆ. ಆನ್ಸ್ಕ್ರೀನ್ ಮೇಲೆ ಗಮನ ಸೆಳೆಯುವ ಈ ಜೋಡಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗ ಇದೆ. ಇತ್ತೀಚೆಗೆ ರಣಬೀರ್ ಕಪೂರ್ ಅವರನ್ನು ಅನೇಕರು ಟೀಕೆ ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ರಾಜ್ ಕಪೂರ್ ಅವರ 100ನೇ ವರ್ಷದ ಜನ್ಮ ದಿನಾಚರಣೆ. ಈ ಬಗ್ಗೆ ಆಲಿಯಾ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ರಾಜ್ ಕಪೂರ್ ಅವರ 100ನೇ ವರ್ಷದ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ವೇಳೆ ರಣಬೀರ್ ಕಪೂರ್ ಅವರು ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎಂದು ಅನೇಕರು ಟೀಕೆ ಮಾಡಿದ್ದರು. ಅಲ್ಲದೆ, ಆಲಿಯಾ ಬಗ್ಗೆ ಗಮನ ನೀಡಿಲ್ಲ ಎಂದು ಕೂಡ ಹೇಳಲಾಯಿತು. ಈ ವಿಡಿಯೋದಲ್ಲಿ ಅವರು ಖುಷಿ ಖುಷಿಯಿಂದ ಓಡಾಡುತ್ತಿರುವುದು ಇದೆ. ಅಲ್ಲದೆ, ರಣಬೀರ್ ಅವರು ಆಲಿಯಾ ಭಟ್ ಅವರ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ. ‘ರಣಬೀರ್ ಕಪೂರ್ ಅವರ ಈ ಮುಖವನ್ನು ಸೋಶಿಯಲ್ ಮೀಡಿಯಾದಲ್ಲಿ ಎಂದಿಗೂ ತೋರಿಸುವುದಿಲ್ಲ’ ಎಂದು ಕ್ಯಾಪ್ಶನ್ ನೀಡಲಾಗಿದೆ. ಈ ವಿಡಿಯೋನ ಆಲಿಯಾ ಲೈಕ್ ಮಾಡಿದ್ದಾರೆ.
ರಣಬೀರ್ ಕಪೂರ್ ಅವರು ಟ್ರೋಲ್ಗಳನ್ನು ಎದುರಿಸುತ್ತಿರುವುದು ಈಗಿನಿಂದ ಅಲ್ಲ. ಅನೇಕ ಹುಡುಗಿಯರ ಜೊತೆ ಸುತ್ತಾಡಿದ್ದಕ್ಕೆ ಅವರು ಟೀಕೆ ಎದುರಿಸಬೇಕಾಯಿತು. ಅವರನ್ನು ಅನೇಕರು ನಾನಾ ರೀತಿ ಕರೆದಿದ್ದರು. ಈ ಕಾರಣಕ್ಕೆ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಯಿತು.
ಇದನ್ನೂ ಓದಿ:ತಾತನ ಸಿನಿಮಾ ಉತ್ಸವದಲ್ಲಿ ಪತ್ನಿ ಜೊತೆ ರಣ್ಬೀರ್ ಕಪೂರ್ ಸೆಲ್ಫಿ
ಆಲಿಯಾ ಭಟ್ ಆಗಲಿ ರಣಬೀರ್ ಕಪೂರ್ ಆಗಲಿ ಟ್ರೋಲ್ಗಳಿಗೆ ಉತ್ತರಿಸಿದ್ದು ಕಡಿಮೆ. ಅವರು ಕೆಲವು ಸಂದರ್ಶನಗಳಲ್ಲಿ ಈ ಬಗ್ಗೆ ಮಾತನಾಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇವರು ಮೌನ ವಹಿಸುತ್ತಾರೆ. ಈಗ ರಣಬೀರ್ ಬಗ್ಗೆ ಕೇಳಿ ಬಂದ ಆರೋಪಕ್ಕೆ ಆಲಿಯಾ ಉತ್ತರಿಸಿದ್ದಾರೆ.
ಆಲಿಯಾ ಹಾಗೂ ರಣಬೀರ್ಗೆ ರಹಾ ಹೆಸರಿನ ಮಗು ಜನಿಸಿದೆ. ಈ ದಂಪತಿ ಕುಟುಂಬದ ಜೊತೆ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಆಲಿಯಾ ಹಾಗೂ ರಣಬೀರ್ ಮೊದಲ ಬಾರಿಗೆ ನಟಿಸಿದ್ದು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ. ಸೆಟ್ನಲ್ಲೇ ಇವರಿಗೆ ಪ್ರೀತಿ ಮೂಡಿತು. ಸಿನಿಮಾ ಕೆಲಸಗಳು ಮುಗಿಯುವುದರೊಳಗೆ ಇವರು ಮದುವೆ ಆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ