ಹಾರ್ದಿಕ್ ಪಾಂಡ್ಯ ಜತೆ ಡೇಟಿಂಗ್ ವದಂತಿ: ಖಡಕ್ ತಿರುಗೇಟು ನೀಡಿದ ನಟಿ ಅಮೀಷಾ ಪಟೇಲ್
ಖ್ಯಾತ ನಟಿ ಅಮೀಷಾ ಪಟೇಲ್ ಅವರು ಇಂದಿಗೂ ಸಿಂಗಲ್ ಆಗಿಯೇ ಇದ್ದಾರೆ. ಈಗ ಅವರಿಗೆ 51 ವರ್ಷ ವಯಸ್ಸು. ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಜೊತೆ ಅಮೀಷಾ ಪಟೇಲ್ ಅವರು ಆಪ್ತವಾಗಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಅದನ್ನು ನೋಡಿದ ಕೆಲವರು ಟ್ರೋಲ್ ಮಾಡಿದ್ದಾರೆ. ಅಂಥವರಿಗೆ ಅಮೀಷಾ ತಿರುಗೇಟು ನೀಡಿದ್ದಾರೆ.

ಬಾಲಿವುಡ್ ನಟಿ ಅಮೀಷಾ ಪಟೇಲ್ ಹಾಗೂ ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ನಡುವೆ ಪ್ರೇಮಾಂಕುರವಾಗಿದೆ ಎಂಬ ವದಂತಿಗಳಿಗೆ ಸ್ವತಃ ನಟಿಯೇ ಪೂರ್ಣವಿರಾಮ ಇಟ್ಟಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಗಳಲ್ಲಿ ಹರಿದಾಡುತ್ತಿದ್ದ ವಿಡಿಯೋ ಒಂದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುವ ಮೂಲಕ ವದಂತಿ ಹಬ್ಬಿಸಿದ ವ್ಯಕ್ತಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀಷಾ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಭೇಟಿಯಾಗಿದ್ದರು. ಆ ಬಗ್ಗೆ ಜನರು ಟ್ರೋಲ್ ಮಾಡಿದ್ದರು.
ವೇಳೆಯ ವೇಳೆ ಅಮೀಷಾ ಅವರು ತಮ್ಮ ಸ್ನೇಹಿತರಿಗೆ ಹಾರ್ದಿಕ್ ಅವರನ್ನು ಪರಿಚಯಿಸುವಾಗ ಅವರ ಹೆಗಲ ಮೇಲೆ ಕೈ ಇಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಎಕ್ಸ್ ಬಳಕೆದಾರನೊಬ್ಬ ‘ಹೋಟೆಲ್ ಪಾರ್ಟಿಯಲ್ಲಿ ಹಾರ್ದಿಕ್ ಹೆಗಲ ಮೇಲೆ ಅಮೀಷಾ ಕೈ ಇಟ್ಟ ರೀತಿಯನ್ನು ನೋಡಿದರೆ ಅವರ ಬಗ್ಗೆ ಹರಿದಾಡುತ್ತಿದ್ದ ವದಂತಿಗಳು ನಿಜ ಎನಿಸುತ್ತಿವೆ’ ಎಂದು ಬರೆದುಕೊಂಡಿದ್ದ.
ಅಮೀಷಾ ಪಟೇಲ್-ಹಾರ್ದಿಕ್ ಪಾಂಡ್ಯ ವೈರಲ್ ವಿಡಿಯೋ:
The way Ameesha Patel put her hand on Hardik Pandya’s shoulder during the party at a hotel in Bengaluru. 👀
All the Reddit rumours seem to be coming true. pic.twitter.com/VJ7945fHus
— Sonu (@Cricket_live247) September 5, 2026
ಇನ್‌ಸ್ಟಾಗ್ರಾಮ್‌ನಲ್ಲಿ ನಟಿಯ ತಿರುಗೇಟು
ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ತೆಗೆದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಅಮೀಷಾ ಪಟೇಲ್, ‘ಹೌದು, ನೀವು ಹೇಳಿದ್ದು ತೀರಾ ನಿಜ. ನಾನು ಅವರ ಮೇಲೆ ಕೈ ಇಟ್ಟ ರೀತಿ ನಿಜಕ್ಕೂ ರೊಮ್ಯಾಂಟಿಕ್ ಆಗಿತ್ತು. ನನಗೆ ನಿಮ್ಮ ಬಗ್ಗೆ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ನಿಮಗೆ ಒಬ್ಬ ಹುಡುಗಿಯೂ ಸ್ನೇಹಿತೆಯಾಗಿರಲು ಸಾಧ್ಯವಿಲ್ಲ. ಇಂತಹ ಪೋಸ್ಟ್ ಹಾಕುವ ಮುನ್ನ ಕನಿಷ್ಠ ಒಬ್ಬಳನ್ನಾದರೂ ಸ್ನೇಹಿತೆಯನ್ನಾಗಿ ಮಾಡಿಕೊಳ್ಳಿ’ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

Ameesha Patel Instagram Story
ಪ್ರೀತಿಯಲ್ಲಿರುವ ಹಾರ್ದಿಕ್ ಪಾಂಡ್ಯ
ಪ್ರಸ್ತುತ ಹಾರ್ದಿಕ್ ಪಾಂಡ್ಯ ಮಾಡೆಲ್ ಮಾಹಿಕಾ ಶರ್ಮಾ ಅವರೊಂದಿಗೆ ಪ್ರೀತಿಯಲ್ಲಿದ್ದಾರೆ. 2025ರ ಅಕ್ಟೋಬರ್‌ನಲ್ಲಿ ಇಬ್ಬರ ಲಿಂಕ್-ಅಪ್ ಸುದ್ದಿಗಳು ಹರಿದಾಡಿದ್ದವು. ನಂತರ ಹಾರ್ದಿಕ್ ಪಾಂಡ್ಯ ಅವರು ತಮ್ಮ ಹುಟ್ಟುಹಬ್ಬದಂದು ಮಾಹಿಕಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಅದಕ್ಕೂ ಮುನ್ನ ಹಾರ್ದಿಕ್ ಅವರು ನತಾಶಾ ಜೊತೆ ಮದುವೆಯಾಗಿದ್ದರು. ಬಳಿಕ ವಿಚ್ಛೇದನ ಪಡೆದರು.
ಇದನ್ನೂ ಓದಿ: ಮ್ಯಾನೇಜರ್ ವರ್ತನೆಯಿಂದ ದೊಡ್ಡ ಸಿನಿಮಾಗಳ ಆಫರ್ ಕಳೆದುಕೊಂಡಿದ್ದ ‘ಗದರ್ 2’ ನಟಿ ಅಮೀಷಾ ಪಟೇಲ್
ಮದುವೆ ಬಗ್ಗೆ ಅಮೀಷಾ ಅನಿಸಿಕೆ
51ರ ಹರೆಯದಲ್ಲೂ ಅವಿವಾಹಿತೆಯಾಗಿಯೇ ಉಳಿದಿರುವ ಅಮೀಷಾ ಪಟೇಲ್, ಇತ್ತೀಚೆಗೆ ರಣವೀರ್ ಅಲಹಾಬಾದಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿ, ‘ನನಗೆ ಸೂಕ್ತ ಸಂಗಾತಿ ಸಿಕ್ಕರೆ ಮದುವೆಯಾಗಲು ಅಭ್ಯಂತರವಿಲ್ಲ. ನನ್ನ ವೃತ್ತಿಜೀವನವನ್ನು ಗೌರವಿಸುವ ಮತ್ತು ಮಾನಸಿಕವಾಗಿ ಪ್ರಬುದ್ಧರಾಗಿರುವ ವ್ಯಕ್ತಿಯನ್ನು ನಾನು ಕಾಯುತ್ತಿದ್ದೇನೆ’ ಎಂದು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




