AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಂತಾಪ ಸೂಚಿಸಿದ ಜಾನ್ ಸೀನಾ, ಬ್ರೆಟ್ ಲೀ

ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ತಮ್ಮ ಛಾಪು ಮೂಡಿಸಿದ್ದರು. ಅವರ ನಿಧನದಿಂದ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಜಾನ್ ಸೀನಾ, ಬ್ರೆಟ್ ಲೀ ಮುಂತಾದ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಕೂಡ ಆಶಾ ಭೋಸ್ಲೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಂತಾಪ ಸೂಚಿಸಿದ ಜಾನ್ ಸೀನಾ, ಬ್ರೆಟ್ ಲೀ
Brett Lee, Asha BhosleImage Credit source: gettyentertainment
ಮದನ್​ ಕುಮಾರ್​
|

Updated on: Apr 14, 2026 | 5:13 PM

Share

ಭಾರತೀಯ ಸಂಗೀತ ಲೋಕದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ಏಪ್ರಿಲ್ 12ರಂದು ವಿಧಿವಶರಾದರು. ಅವರ ನಿಧನಕ್ಕೆ ಚಿತ್ರರಂಗ, ಕ್ರೀಡಾಲೋಕ ಸೇರಿದಂತೆ ವಿಶ್ವದಾದ್ಯಂತ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಆಶಾ ಭೋಸ್ಲೆ ಅವರ ಅಗಲಿಕೆ ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವದ ಸಂಗೀತ ಪ್ರೇಮಿಗಳಿಗೆ ತುಂಬಲಾರದ ನಷ್ಟವಾಗಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದ ಸೆಲೆಬ್ರಿಟಿಗಳು ಕೂಡ ಆಶಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. WWE ರಸ್ಲರ್ ಜಾನ್ ಸೀನಾ (John Cena) ಮತ್ತು ಮಾಜಿ ಕ್ರಿಕೆಟಿಗ ಬ್ರೆಟ್ ಲೀ (Brett Lee) ಕೂಡ ಗೌರವ ಸಲ್ಲಿಸಿದ್ದಾರೆ.

WWE ಖ್ಯಾತಿಯ ಜಾನ್ ಸೀನಾ ಅವರು ಆಶಾ ಭೋಸ್ಲೆ ಅವರಿಗೆ ಅತ್ಯಂತ ಸರಳ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಯಾವುದೇ ಶೀರ್ಷಿಕೆ ಇಲ್ಲದೇ, ಆಶಾ ಅವರ ಭಾವಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ, ಅವರ ಸಾಧನೆಗೆ ಮೌನವಾಗಿಯೇ ನಮನ ಸಲ್ಲಿಸಿದ್ದಾರೆ. ಈ ನಡೆಯು ಭಾಷೆಗಳ ಗಡಿ ಮೀರಿ ಆಶಾ ಅವರ ಕೀರ್ತಿ ಹರಡಿದ್ದನ್ನು ತೋರಿಸಿಕೊಟ್ಟಿದೆ.

View this post on Instagram

A post shared by John Cena (@johncena)

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರು ಆಶಾ ಅವರೊಂದಿಗಿನ ತಮ್ಮ ಹಳೆಯ ಒಡನಾಟವನ್ನು ಸ್ಮರಿಸಿದ್ದಾರೆ. 2006ರಲ್ಲಿ ಅವರಿಬ್ಬರೂ ಸೇರಿ ಹಾಡಿದ್ದ ‘You’re the One for Me’ ಹಾಡಿನ ಫೋಟೋ ಅವರು ಹಂಚಿಕೊಂಡಿದ್ದಾರೆ. ‘ಆಶಾ ಅವರಂತಹ ದಂತಕಥೆಯೊಂದಿಗೆ ಹಾಡು ರೆಕಾರ್ಡ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ’ ಎಂದು ಬ್ರೆಟ್ ಲೀ ಹೇಳಿದ್ದಾರೆ.

View this post on Instagram

A post shared by Brett Lee (@brettlee_58)

‘ಆಶಾ ಭೋಸ್ಲೆ ಅವರ ಪ್ರತಿಭೆಗಿಂತ ಅವರಲ್ಲಿದ್ದ ವಿನಯ ಮತ್ತು ನಗುಮುಖ ನನ್ನನ್ನು ಹೆಚ್ಚು ಪ್ರಭಾವಿಸಿತ್ತು. ಇಷ್ಟು ದೊಡ್ಡ ಸಾಧನೆ ಮಾಡಿದ್ದರೂ ಅವರು ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಅಂಥ ವ್ಯಕ್ತಿ ಜೊತೆ ಸ್ವಲ್ಪ ಸಮಯ ಕಳೆಯಲು ಸಿಕ್ಕಿದ್ದು ನನ್ನ ಪುಣ್ಯ. ಅವರ ಪರಂಪರೆ ಮುಂದುವರಿಯಲಿದೆ ಅವರ ಕುಟುಂಬದವರಿಗೆ ಮತ್ತು ಆಪ್ತರಿಗೆ ಸಂತಾಪಗಳು’ ಎಂದು ಬ್ರೆಟ್​ ಲೀ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಕಡಿಮೆ ಸಂಭಾವನೆ ಕೊಟ್ಟರೂ ಕನ್ನಡದ ಗೀತೆಗೆ ಧ್ವನಿ ಆಗಿದ್ದ ಆಶಾ ಭೋಸ್ಲೆ

ಏಪ್ರಿಲ್ 13ರಂದು ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯು ನೆರವೇರಿತು. ಸರ್ಕಾರದ ಉನ್ನತ ಅಧಿಕಾರಿಗಳು, ರಾಜಕೀಯ ಗಣ್ಯರು, ಕ್ರೀಡಾಪಟುಗಳು ಮತ್ತು ಚಿತ್ರರಂಗದ ನೂರಾರು ಕಲಾವಿದರು ಭಾಗವಹಿಸಿ ತಮ್ಮ ನೆಚ್ಚಿನ ಗಾಯಕಿಗೆ ಅಂತಿಮ ವಿದಾಯ ಹೇಳಿದರು. ವಿಶ್ವಾದ್ಯಂತ ಇರುವ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us