AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾತ್ಮ ಗಾಂಧಿ ಪಾತ್ರದಲ್ಲಿ ನಟ ಮನೋಜ್ ಬಾಜಪೇಯಿ: ವೈರಲ್ ಆಗಿದೆ ವಿಶೇಷ ಗೆಟಪ್

ಸಿನಿಮಾ, ವೆಬ್ ಸಿರೀಸ್​ಗಳ ಮೂಲಕ ಮನೆಮಾತಾಗಿರುವ ನಟ ಮನೋಜ್ ಬಾಜಪೇಯಿ ಅವರ ಹೊಸ ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸಿನಿಮಾದಲ್ಲಿ ಅವರು ಮಹಾತ್ಮ ಗಾಂಧಿಯ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಅವರ ಗೆಟಪ್ ವೈರಲ್ ಆಗಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಮಹಾತ್ಮ ಗಾಂಧಿ ಪಾತ್ರದಲ್ಲಿ ನಟ ಮನೋಜ್ ಬಾಜಪೇಯಿ: ವೈರಲ್ ಆಗಿದೆ ವಿಶೇಷ ಗೆಟಪ್
Manoj BajpayeeImage Credit source: Instagram/bajpayee.manoj
ಮದನ್​ ಕುಮಾರ್​
|

Updated on: Sep 06, 2026 | 2:42 PM

Share

ಪ್ರತಿಭಾವಂತ ನಟ ಮನೋಜ್ ಬಾಜಪೇಯಿ ಅವರು ತಮ್ಮ ಅಭಿನಯದ ಮೂಲಕ ಈಗಾಗಲೇ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಇದೀಗ ಅವರು ತಮ್ಮ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಖ್ಯಾತ ನಿರ್ದೇಶಕ ಸುಧೀರ್ ಮಿಶ್ರಾ ನಿರ್ದೇಶಿಸುತ್ತಿರುವ ಮುಂಬರುವ ಸಿನಿಮಾದಲ್ಲಿ ಮನೋಜ್ ಬಾಜಪೇಯಿ ಈ ಐತಿಹಾಸಿಕ ಪಾತ್ರವನ್ನು ಪೋಷಿಸುತ್ತಿದ್ದಾರೆ. ಇದು ಒಂದು ರೀತಿಯ ಸವಾಲಿನ ಪಾತ್ರ ಆಗಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ.

ಈ ಸಿನಿಮಾದಲ್ಲಿ ಮನೋಜ್ ಬಾಜಪೇಯಿ ಅವರ ಗಾಂಧೀಜಿ ಲುಕ್‌ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಒಂದು ಫೋಟೋ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ಗಾಂಧೀಜಿಯವರ ರೀತಿಯೇ ಸಿಂಪಲ್ ಗೆಟಪ್​​ನಲ್ಲಿ ಮನೋಜ್ ಮಾಡಿಕೊಂಡಿರುವ ಮೇಕ್ಓವರ್ ಹಾಗೂ ಬದಲಾವಣೆ ನೆಟ್ಟಿಗರ ಗಮನ ಸೆಳೆದಿದೆ.

ಇದು 21 ದಿನಗಳ ಅಪರೂಪದ ಕಥೆ:

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಹೆಚ್ಚು ಪ್ರಚಾರಕ್ಕೆ ಬಾರದ 21 ದಿನಗಳ ಪ್ರಮುಖ ಘಟನಾವಳಿಗಳ ಆಧಾರದ ಮೇಲೆ ಈ ಚಿತ್ರದ ಕಥೆ ಹೆಣೆಯಲಾಗಿದೆ. ಈ ಸಿನಿಮಾದಲ್ಲಿ ಮನೋಜ್ ಬಾಜಪೇಯಿ ಜೊತೆಗೆ ಹಿರಿಯ ನಟ ಸೌರಭ್ ಶುಕ್ಲಾ ಕೂಡ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಮನೋಜ್ ಬಾಜಪೇಯಿ ಅವರ ಲುಕ್ ವೈರಲ್ ಆದ ಬಳಿಕ ಹೈಪ್ ಹೆಚ್ಚಿದೆ.

‘ಹಜಾರೋ ಖ್ವಾಹಿಶೇ ಐಸಿ’ ಮತ್ತು ‘ಧಾರಾವಿ’ ಮುಂತಾದ ಗಮನಾರ್ಹ ಚಿತ್ರಗಳನ್ನು ನೀಡಿದ ಸುಧೀರ್ ಮಿಶ್ರಾ ನಿರ್ದೇಶನದಲ್ಲಿ ಮನೋಜ್ ಬಾಜಪೇಯಿ ಅವರ ಈ ಹೊಸ ಸಿನಿಮಾ ಮೂಡಿಬರಲಿದೆ. ‘ಬನಾರಸ್ ಮೀಡಿಯಾವರ್ಕ್ಸ್’ ಬ್ಯಾನರ್ ಮೂಲಕ ಅನುಭವ್ ಸಿನ್ಹಾ ಹಾಗೂ ನರೇಂದ್ರ ಹಿರಾಜಾವತ್ ಅವರು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’, ‘ವಾರಣಾಸಿ’ ಚಿತ್ರಗಳ ಬಜೆಟ್ ಒಂದು ಗಿಮಿಕ್ ಎಂದ ಮನೋಜ್ ಬಾಜಪೇಯಿ

ಮನೋಜ್ ಬಾಜಪೇಯಿ ಅವರಿಗೆ ಈ ಪಾತ್ರವು ಅತ್ಯಂತ ವಿಭಿನ್ನವಾಗಿದ್ದು, ಭಾರತೀಯ ಇತಿಹಾಸದ ಮಹಾನ್ ನಾಯಕನ ಪಾತ್ರಕ್ಕೆ ಜೀವ ತುಂಬುತ್ತಿರುವುದು ವಿಶೇಷವಾಗಿದೆ. ಈ ಸಿನಿಮಾದ ಚಿತ್ರದ ಶೀರ್ಷಿಕೆ ಮತ್ತು ಬಿಡುಗಡೆ ದಿನಾಂಕದ ಅಧಿಕೃತ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ. ಅದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us