AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಬಾಕ್ಸ್ ಆಫೀಸ್​​ನಲ್ಲಿ ‘ಹನುಮಾನ್ ಅಂಶ್’ ನೀರಸ ಪ್ರದರ್ಶನ: ಕಾರಣವೇನು?

‘ಹನುಮಾನ್ ಅಂಶ್’ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಆದರೆ ದಕ್ಷಿಣ ಭಾರತದಲ್ಲಿ ಅದೇ ಮಾದರಿಯ ದೊಡ್ಡ ಯಶಸ್ಸು ಕಂಡಿಲ್ಲ. ಇತ್ತೀಚೆಗಷ್ಟೆ ‘ಹನುಮಾನ್ ಅಂಶ್’ ಸಿನಿಮಾದ ತೆಲುಗು ಆವೃತ್ತಿ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಬಿಡುಗಡೆ ಆಯ್ತು. ಭಾರಿ ನಿರೀಕ್ಷೆಯೊಂದಿಗೆ ಸಿನಿಮಾ ಅನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಲಾಯ್ತು. ಆದರೆ ಸಿನಿಮಾ ನೀರಸ ಪ್ರದರ್ಶನವನ್ನು ನೀಡಿದೆ.

ತೆಲುಗು ಬಾಕ್ಸ್ ಆಫೀಸ್​​ನಲ್ಲಿ ‘ಹನುಮಾನ್ ಅಂಶ್’ ನೀರಸ ಪ್ರದರ್ಶನ: ಕಾರಣವೇನು?
Hanuman Ansh
ಮಂಜುನಾಥ ಸಿ.
|

Updated on:Oct 14, 2026 | 2:33 PM

Share

ಮುಖ್ಯಾಂಶಗಳು

  • ಬಾಕ್ಸ್ ಆಫೀಸ್​​ನಲ್ಲಿ ಇತಿಹಾಸ ಬರೆದಿರುವ ‘ಹನುಮಾನ್ ಅಂಶ್’ ಸಿನಿಮಾ
  • ಆದರೆ ದಕ್ಷಿಣ ಭಾರತದಲ್ಲಿ ನಿರೀಕ್ಷಿತ ಪ್ರದರ್ಶನ ಕಾಣುತ್ತಿಲ್ಲ
  • ತೆಲುಗು ಹನುಮಾನ್ ಅಂಶ್ ನೀರಸ ಪ್ರದರ್ಶನ ನೀಡಿದೆ

ಬಾಕ್ಸ್ ಆಫೀಸ್​​ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ‘ಹನುಮಾನ್ ಅಂಶ್’ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಆದರೆ ದಕ್ಷಿಣ ಭಾರತದಲ್ಲಿ ಅದೇ ಮಾದರಿಯ ದೊಡ್ಡ ಯಶಸ್ಸು ಕಂಡಿಲ್ಲ. ಇತ್ತೀಚೆಗಷ್ಟೆ ‘ಹನುಮಾನ್ ಅಂಶ್’ ಸಿನಿಮಾದ ತೆಲುಗು ಆವೃತ್ತಿ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಬಿಡುಗಡೆ ಆಯ್ತು. ಭಾರಿ ನಿರೀಕ್ಷೆಯೊಂದಿಗೆ ಸಿನಿಮಾ ಅನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಲಾಯ್ತು. ಆದರೆ ಸಿನಿಮಾ ನೀರಸ ಪ್ರದರ್ಶನವನ್ನು ನೀಡಿದೆ.

ಹಿಂದಿ ಭಾಷೆಯಲ್ಲಿ ಬ್ಲಾಕ್‌ಬಸ್ಟರ್ ಯಶಸ್ಸು ಗಳಿಸಿ ವಿಶ್ವದಾದ್ಯಂತ 400 ಕೋಟಿ ರೂ.ಗಳಿಗೂ ಅಧಿಕ ಹಣ ಬಾಚಿಕೊಂಡಿದ್ದ ಜನಪ್ರಿಯ ಸಿನಿಮಾ ‘ಹನುಮಾನ್ ಅನ್ಶ್’ (Hanuman Ansh), ತೆಲುಗು ಬಾಕ್ಸ್‌ ಆಫೀಸ್‌ನಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಕಾಣುವಲ್ಲಿ ವಿಫಲವಾಗಿದೆ. ಅಕ್ಟೋಬರ್ 9ರಂದು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು 700 ಸ್ಕ್ರೀನ್‌ಗಳಲ್ಲಿ ಮೈತ್ರಿ ಮೂವಿ ಮೇಕರ್ಸ್ ವಿತರಣೆ ಮಾಡಿದ್ದ ಈ ಚಿತ್ರದ ತೆಲುಗು ಡಬ್‌ ಆವೃತ್ತಿಯು ಮೊದಲ ದಿನ ಕೇವಲ 60 ರಿಂದ 70 ಲಕ್ಷ ರೂ.ಗಳನ್ನು ಮಾತ್ರ ಸಂಗ್ರಹಿದೆ. ಆ ನಂತರದ ದಿನಗಳಲ್ಲಿ ಸಹ ಸಿನಿಮಾದ ಗಳಿಕೆ ಮೇಲೆದ್ದೇ ಇಲ್ಲ. ಇದೀಗ ಈ ವಾರ ‘ಜೈಲರ್ 2’ ಮತ್ತು ‘ರಣಬಾಲಿ’ ಸಿನಿಮಾಗಳು ರಿಲೀಸ್ ಆಗುತ್ತಿರುವ ಕಾರಣ ಆ ಸಿನಿಮಾಗಳಿಗೆ ದಾರಿ ಬಿಟ್ಟುಕೊಟ್ಟು, ಚಿತ್ರಮಂದಿರಗಳಿಂದ ಹೊರಗೆ ಬರುತ್ತಿದೆ ‘ಹನುಮಾನ್ ಅಂಶ್’.

ಹಿಂದಿ ಆವೃತ್ತಿಯು ಥೇಟರ್‌ಗಳಲ್ಲಿ ಬರೋಬ್ಬರಿ 50 ದಿನಗಳ ಯಶಸ್ವಿ ಪ್ರದರ್ಶನ ಕಂಡ ಬಳಿಕ ತೆಲುಗಿಗೆ ಬಿಡುಗಡೆಗೊಂಡಿದ್ದು, ಅಷ್ಟೊಂದು ಸುದೀರ್ಘ ವಿಳಂಬದ ನಡುವೆ ತೆಲುಗು ಪ್ರೇಕ್ಷಕರು ಚಿತ್ರವನ್ನು ಈಗಾಗಲೇ ಹಿಂದಿಯಲ್ಲೇ ವೀಕ್ಷಿಸಿದ್ದರೆ, ಇನ್ನೂ ಕೆಲವರು ಈ ಸಿನಿಮಾದ ಮೇಲಿನ ಆರಂಭಿಕ ಕ್ರೇಜ್ ಮತ್ತು ಕುತೂಹಲವನ್ನು ಕಳೆದುಕೊಂಡಿದ್ದರ ಪರಿಣಾಮವಾಗಿ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ ಎನ್ನಲಾಗುತ್ತಿದೆ. ಜೊತೆಗೆ ಕೆಲವು ವೆಬ್​​ ಸೈಟುಗಳಲ್ಲಿ ಈಗಾಗಲೇ ‘ಹನುಮಾನ್ ಅಂಶ್’ ಸಿನಿಮಾದ ಪೈರಸಿ ಕಾಪಿಗಳು ಅಪ್​​ಲೋಡ್ ಆಗಿದ್ದು, ಹಲವಾರು ಮಂದಿ ಪೈರಸಿ ಕಾಪಿಗಳನ್ನು ವೀಕ್ಷಿಸಿದ್ದಾರೆ. ಇದು ಸಹ ಜನ ಚಿತ್ರಮಂದಿರಕ್ಕೆ ಹೋಗದೇ ಇರಲು ಮುಖ್ಯ ಕಾರಣ ಆಗಿದ್ದಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಕಾಂತಾರ’ ರೆಕಾರ್ಡ್ ಮುರಿದ ‘ಹನುಮಾನ್ ಅಂಶ್’: 9ನೇ ವಾರದಲ್ಲಿ ಹೊಸ ದಾಖಲೆ

ಈ ಚಿತ್ರದ ತೆಲುಗು ಮಾರುಕಟ್ಟೆ ಪ್ರಚಾರ ಹಾಗೂ ಪ್ರಚಾರ ಕಾರ್ಯಗಳಲ್ಲಿ ಹಲವು ತೊಡಕುಗಳು ಎದುರಾಗಿದ್ದವು. ನಿರ್ದೇಶಕತ್ರಿವಿಕ್ರಮ್ ಶ್ರೀನಿವಾಸ್ ಅವರು ಈ ಸಿನಿಮಾ ಅನ್ನು ಪ್ರೆಸೆಂಟ್ ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಕೈತಪ್ಪಿದ್ದರಿಂದ, ಚಿತ್ರತಂಡವು ಸರಿಯಾದ ಸ್ಥಳೀಯ ಪ್ರಚಾರವಿಲ್ಲದೆ ಕೇವಲ ಹಿಂದಿ ಯಶಸ್ಸಿನ ಮೇಲೆಯೇ ಹೆಚ್ಚು ನಂಬಿಕೆ ಇಡಬೇಕಾಯಿತು. ಇದರ ಜೊತೆಗೆ, ಶ್ರೀ ವಿಷ್ಣು ಅಭಿನಯದ ‘ಕಾಮ್ರೇಡ್ ಕಲ್ಯಾಣ್’ ಸೇರಿದಂತೆ ಕೆಲ ಸ್ಥಳೀಯ ತೆಲುಗು ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆಯಾಗಿ ಚಿತ್ರಮಂದಿರಗಳ ಕೊರತೆಯ ಜೊತೆಗೆ ಪ್ರೇಕ್ಷಕರನ್ನು ಸಹ ವಿಭಜಿಸಿದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:21 pm, Wed, 14 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More