AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಹೀರೋ ಜೊತೆ ಸಿನಿಮಾ ಮಾಡಿ 2 ಸಾವಿರ ಕೋಟಿ ನಷ್ಟ ಅನುಭವಿಸಿದ ನಿರ್ಮಾಣ ಸಂಸ್ಥೆ

ಹಾಲಿವುಡ್ ನಟ ಟಾಮ್ ಕ್ರೂಸ್ ಅಭಿನಯದ 'ಡಿಗ್ಗರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಕಳಪೆ ವಿಮರ್ಶೆಗಳಿಂದಾಗಿ ಈ ಕಾಮಿಡಿ ಡ್ರಾಮಾ ಸಿನಿಮಾ ಅಂದಾಜು 2,300 ಕೋಟಿ ರೂಪಾಯಿಗಳ ಭಾರಿ ನಷ್ಟದತ್ತ ಸಾಗಿದೆ. ಚಿತ್ರದ ಕಥೆ ಹಾಗೂ ಮೇಕಿಂಗ್ ವೀಕ್ಷಕರ ನಿರೀಕ್ಷೆ ತಲುಪಲು ವಿಫಲವಾಗಿದೆ.

ಖ್ಯಾತ ಹೀರೋ ಜೊತೆ ಸಿನಿಮಾ ಮಾಡಿ 2 ಸಾವಿರ ಕೋಟಿ ನಷ್ಟ ಅನುಭವಿಸಿದ ನಿರ್ಮಾಣ ಸಂಸ್ಥೆ
ಟಾಮ್ ಕ್ರ್ಯೂಸ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 09, 2026 | 9:00 AM

Share

ಮುಖ್ಯಾಂಶಗಳು

  • ಟಾಮ್ ಕ್ರೂಸ್ 'ಡಿಗ್ಗರ್' ಸಿನಿಮಾ ಭಾರಿ ಸೋಲು
  • 2,300 ಕೋಟಿ ನಷ್ಟದ ಭೀತಿ
  • ಆಕ್ಷನ್ ಬದಲು ಕಾಮಿಡಿ ಡ್ರಾಮಾ 

ಹಾಲಿವುಡ್‌ ಸಾಹಸ ಸಿಂಹ ಟಾಮ್ ಕ್ರೂಸ್ ಅಭಿನಯದ ಬಹುನಿರೀಕ್ಷಿತ ‘ಡಿಗ್ಗರ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ತೀವ್ರ ಹಿನ್ನಡೆ ಅನುಭವಿಸಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದಾಗಿ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ಭಾರಿ ಪ್ರಮಾಣದ ಬಾಕ್ಸ್ ಆಫೀಸ್ ನಷ್ಟ ಉಂಟಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ಈ ಸಿನಿಮಾ ಸುಮಾರು 250 ಮಿಲಿಯನ್ ಡಾಲರ್ ಅಂದರೆ ಅಂದಾಜು 2,300 ಕೋಟಿ ರೂಪಾಯಿಗಳಿಗಿಂತ ಹೆಚ್ಚು ನಷ್ಟ ಅನುಭವಿಸುವ ಹಂತದಲ್ಲಿದೆ. ಈ ದೊಡ್ಡ ಸೋಲಿನಿಂದಾಗಿ ನಿರ್ಮಾಣ ಸಂಸ್ಥೆಯು ಮುಂದಿನ ದಿನಗಳಲ್ಲಿ ಇಂತಹ ಹೊಸ ಪ್ರಯೋಗದ ಸಿನಿಮಾಗಳನ್ನು ಮಾಡಲು ಹಿಂಜರಿಯುವಂತಾಗಿದೆ. ಟಾಮ್ ಕ್ರೂಸ್ ಅವರ ಹೆಸರು ಇದ್ದರೂ ಕೂಡ ಚಿತ್ರವನ್ನು ನಷ್ಟದಿಂದ ಪಾರು ಮಾಡಲು ಸಾಧ್ಯವಾಗಿಲ್ಲ.

ಆರಂಭದಿಂದಲೂ ಈ ಸಿನಿಮಾದ ಮೇಲೆ ಹೂಡಿಕೆ ಮಾಡುವುದು ದೊಡ್ಡ ಸಾಹಸ ಎಂದೇ ವಿಶ್ಲೇಷಕರು ಭಾವಿಸಿದ್ದರು. ಸಾಮಾನ್ಯವಾಗಿ ಕಾಮಿಡಿ ಡ್ರಾಮಾ ಮಾದರಿಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡುವುದಿಲ್ಲ. ಅದಲ್ಲದೆ ಸಿನಿಮಾದ ಟ್ರೇಲರ್ ಕೂಡ ಪ್ರೇಕ್ಷಕರಲ್ಲಿ ಯಾವುದೇ ಕುತೂಹಲ ಮೂಡಿಸಿರಲಿಲ್ಲ. ಜೊತೆಗೆ ಇದು ಯಾವುದೇ ಯಶಸ್ವಿ ಸಿನಿಮಾದ ಭಾಗ 2 ಅಥವಾ ಸೀಕ್ವೆಲ್ ಕೂಡ ಆಗಿರಲಿಲ್ಲ.

ಈ ಸಿನಿಮಾದ ಕಥಾಹಂದರವು ತೀರ ಶುಷ್ಕವಾಗಿತ್ತು. ಪ್ರಪಂಚದ ಅತ್ಯಂತ ಪ್ರಭಾವಿ ವ್ಯಕ್ತಿಯೊಬ್ಬ ತಾನೇ ತಂದೊಡ್ಡಿದ ಸಂಕಷ್ಟದಿಂದ ಜಗತ್ತನ್ನು ರಕ್ಷಿಸಲು ಹೊರಡುವ ಕಥೆ ಇದಾಗಿತ್ತು. ಆದರೆ ಈ ಕಥೆಯನ್ನು ಬೆಳ್ಳಿಪರದೆಯ ಮೇಲೆ ಸರಿಯಾಗಿ ತರಲು ನಿರ್ದೇಶಕರಿಗೆ ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ ಸಿನಿಮಾದ ಮೇಕಿಂಗ್ ವೆಚ್ಚಕ್ಕೆ ತಕ್ಕಂತೆ ಪ್ರೇಕ್ಷಕರು ಬಾರದೆ ಇದು ಕೇವಲ ನಷ್ಟದ ಯೋಜನೆಯಾಗಿ ಉಳಿದಿದೆ.

ಇದನ್ನೂ ಓದಿ: ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆಯಲಿದೆ ಟಾಮ್ ಕ್ರೂಸ್ ಸಿನಿಮಾ: ಕಲೆಕ್ಷನ್ ನಿರೀಕ್ಷೆ ಎಷ್ಟು?

ಸಾಮಾನ್ಯವಾಗಿ ಟಾಮ್ ಕ್ರೂಸ್ ಸಿನಿಮಾಗಳೆಂದರೆ ಭರ್ಜರಿ ಆಕ್ಷನ್ ಸೀನ್‌ಗಳನ್ನು ಜನರು ನಿರೀಕ್ಷಿಸುತ್ತಾರೆ. ಆದರೆ ಈ ಸಿನಿಮಾದಲ್ಲಿ ಕಾಮಿಡಿ ಡ್ರಾಮಾ ಶೈಲಿ ಇದ್ದಿದ್ದರಿಂದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಸಿನಿಮಾದ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಹರಿದಾಡುತ್ತಿವೆ. ಇದರಿಂದಾಗಿ ಪ್ರದರ್ಶನ ಕಾಣುತ್ತಿರುವ ಥಿಯೇಟರ್‌ಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:17 am, Fri, 9 October 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More