‘ಜನ ನಾಯಗನ್’ ಟಿಕೆಟ್ ಲೂಟಿ: ಹೊಸೂರಿನಲ್ಲಿ 180, ಬೆಂಗಳೂರಿನಲ್ಲಿ 1500
Jana Nayagan movie: ಸಿನಿಮಾದ ಟಿಕೆಟ್ಗಳ ಮುಂಗಡ ಬುಕಿಂಗ್ ಆರಂಭವಾಗಿ ಕೆಲ ದಿನಗಳಾಗಿದ್ದು, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಟಿಕೆಟ್ಗಳು ಮುಂಗಡವಾಗಿ ಸೋಲ್ಡ್ ಔಟ್ ಆಗಿವೆ. ಆದರೆ ಬೆಂಗಳೂರಿನಲ್ಲಿ ‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೆ ಅದೇ ಬೇರೆ ನಗರಗಳಲ್ಲಿ ಇದೇ ಸಿನಿಮಾದ ಟಿಕೆಟ್ ಬೆಲೆ ಅತ್ಯಂತ ಕಡಿಮೆ ಇದೆ. ‘ಜನ ನಾಯಗನ್’ ಸಿನಿಮಾವನ್ನು ಬೆಂಗಳೂರಿನ ಬದಲು ಹತ್ತಿರದ ಬೇರೆ ನಗರಗಳಲ್ಲಿ ನೋಡಿದರೆ ಅಭಿಮಾನಿಗಳಿಗೆ ಹಣ ಉಳಿತಾಯ ಆಗಲಿದೆ.

ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಾಳೆ (ಜುಲೈ 23) ಬಿಡುಗಡೆ ಆಗಲಿದೆ. ಇದು ವಿಜಯ್ ನಟನೆಯ ಕೊನೆಯ ಸಿನಿಮಾ ಎಂದೇ ಪ್ರಚಾರ ಮಾಡಲಾಗಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾದ ಟಿಕೆಟ್ಗಳ ಮುಂಗಡ ಬುಕಿಂಗ್ ಆರಂಭವಾಗಿ ಕೆಲ ದಿನಗಳಾಗಿದ್ದು, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಟಿಕೆಟ್ಗಳು ಮುಂಗಡವಾಗಿ ಸೋಲ್ಡ್ ಔಟ್ ಆಗಿವೆ. ಆದರೆ ಬೆಂಗಳೂರಿನಲ್ಲಿ ‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೆ ಅದೇ ಬೇರೆ ನಗರಗಳಲ್ಲಿ ಇದೇ ಸಿನಿಮಾದ ಟಿಕೆಟ್ ಬೆಲೆ ಅತ್ಯಂತ ಕಡಿಮೆ ಇದೆ. ‘ಜನ ನಾಯಗನ್’ ಸಿನಿಮಾವನ್ನು ಬೆಂಗಳೂರಿನ ಬದಲು ಹತ್ತಿರದ ಬೇರೆ ನಗರಗಳಲ್ಲಿ ನೋಡಿದರೆ ಅಭಿಮಾನಿಗಳಿಗೆ ಹಣ ಉಳಿತಾಯ ಆಗಲಿದೆ.
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಬೆಲೆ ಕನಿಷ್ಟ 1000 ರೂಪಾಯಿ ಇದೆ. ಗರಿಷ್ಠ ಬೆಲೆ 2500 ರೂಪಾಯಿಗಳಿದೆ. ಮಲ್ಟಿಪ್ಲೆಕ್ಸ್ನಲ್ಲಿ ಕನಿಷ್ಟ ಬೆಲೆ 1400-1500 ರೂಪಾಯಿಗಳಿವೆ. ಸಾಮಾನ್ಯ ಶೋಗಳಿಗೂ ಸಹ ಬೆಂಗಳೂರಿನ ಮಲ್ಟಿಪ್ಲೆಕ್ಸ್ನಲ್ಲಿ ಕನಿಷ್ಟ ಬೆಲೆ 450 ರಿಂದ 500 ರೂಪಾಯಿಗಳಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಸುಮಾರು 250 ರಿಂದ 350 ವರೆಗೆ ಇದೆ.
ಅದೇ ಬೆಂಗಳೂರಿನಲ್ಲಿ ಕೇವಲ 30-40 ಕಿ.ಮೀ ದೂರದಲ್ಲಿರುವ ಹೊಸೂರಿನಲ್ಲಿ ಇದೇ ಸಿನಿಮಾದ ಟಿಕೆಟ್ ಬೆಲೆ ಕೇವಲ 180 ರೂಪಾಯಿಗಳಿವೆ. ಅದೇ ಬೆಂಗಳೂರಿನಲ್ಲಿ ಕನಿಷ್ಟ ಟಿಕೆಟ್ ದರ 1000 ರೂಪಾಯಿಗಳಿವೆ. ಬೆಂಗಳೂರಿನ ಅಭಿಮಾನಿಗಳು ಅಥವಾ ಸಿನಿಮಾ ಪ್ರೇಮಿಗಳು, ಬೆಂಗಳೂರಿನಿಂದ ಬೈಕಿನಲ್ಲಿ ಹೊಸೂರಿಗೆ ಹೋಗಿ ಸಿನಿಮಾ ನೋಡಿಕೊಂಡು ಮರಳಿ ಬಂದರೂ ಸಹ ದೊಡ್ಡ ಮೊತ್ತದ ಹಣ ಉಳಿತಾಯ ಆಗಲಿದೆ. ಜೊತೆಗೆ ಪ್ರಯಾಣದ ಅನುಭವವೂ ಸಿಗಲಿದೆ.
ಇದನ್ನೂ ಓದಿ:ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ದೊಡ್ಡ ಸೀಕ್ರೆಟ್ ರಿವೀಲ್
ದೇಶದ ಹಲವು ಪ್ರಮುಖ ನಗರಗಳಲ್ಲಿ ‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋಗಳು ಆಯೋಜಿಸಲಾಗಿವೆ. ಆದರೆ ಬೆಂಗಳೂರಿನಷ್ಟು ದುಬಾರಿ ಟಿಕೆಟ್ ಬೆಲೆ ಇನ್ನೆಲ್ಲೂ ಇರಿಸಲಾಗಿಲ್ಲ. ಮುಂಬೈನಲ್ಲಿ ಸಹ ಬೆಳಿಗಿನ ಜಾವ 7 ಗಂಟೆಗೆ ‘ಜನ ನಾಯಗನ್’ ಸಿನಿಮಾದ ಶೋಗಳು ಆರಂಭವಾಗುತ್ತಿವೆ. ಆದರೆ ಅಲ್ಲಿ ಟಿಕೆಟ್ ಬೆಲೆ 350 ರಿಂದ 450 ರೂಪಾಯಿ ಮಾತ್ರವೇ ಇದೆ. ಆದರೆ ಬೆಂಗಳೂರಿನ ಸಿನಿಮಾ ಪ್ರೇಮಿಗಳನ್ನು ಮಾತ್ರ ಲೂಟಿ ಮಾಡಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Wed, 22 July 26




