ಫ್ಯಾಮಿಲಿ ಜತೆಗಿನ ವಿಡಿಯೋ ಹಂಚಿಕೊಂಡು ಟ್ರೋಲ್ ಆದ ಅತ್ಯಾಚಾರ ಆರೋಪಿ ಜಾನಿ ಮಾಸ್ಟರ್

ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರು ಅತ್ಯಾಚಾರ ಆರೋಪದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದ ನಂತರ ಅವರು ತಮ್ಮ ಕುಟುಂಬದೊಂದಿಗೆ ಭಾವನಾತ್ಮಕ ಕ್ಷಣಗಳನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗಳಿಗೆ ಕಾರಣವಾಗಿದೆ. ಕೆಲವರು ಅವರನ್ನು ಬೆಂಬಲಿಸಿದರೆ, ಇನ್ನು ಕೆಲವರು ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫ್ಯಾಮಿಲಿ ಜತೆಗಿನ ವಿಡಿಯೋ ಹಂಚಿಕೊಂಡು ಟ್ರೋಲ್ ಆದ ಅತ್ಯಾಚಾರ ಆರೋಪಿ ಜಾನಿ ಮಾಸ್ಟರ್
ಜಾನಿ ಮಾಸ್ಟರ್​ ಕುಟುಂಬ
Follow us
ಮದನ್​ ಕುಮಾರ್​
|

Updated on: Oct 27, 2024 | 8:18 PM

ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್​ ಅವರಿಗೆ ಈಗ ಸಂಕಷ್ಟದ ಕಾಲ. ಅವರ ಮೇಲೆ ಅತ್ಯಾಚಾರ ಆರೋಪ ಇದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜಾನಿ ಮಾಸ್ಟರ್​ ಜೈಲು ಸೇರಿದ್ದರು. ಈಗ ಅವರು ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಅವರು ಭೇಟಿ ಮಾಡಿದ ಎಮೋಷನಲ್ ಕ್ಷಣ ಈ ವಿಡಿಯೋದಲ್ಲಿ ಇದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಅನೇಕರು ಟ್ರೋಲ್​ ಮಾಡುತ್ತಿದ್ದಾರೆ.

‘ಕಳೆದ 37 ದಿನಗಳಲ್ಲಿ ನಮ್ಮಿಂದ ಸಾಕಷ್ಟನ್ನು ಕಸಿದುಕೊಳ್ಳಲಾಗಿದೆ. ನನ್ನ ಕುಟುಂಬದವರು ಮತ್ತು ಹಿತೈಷಿಗಳ ಪ್ರಾರ್ಥನೆಯಿಂದ ನಾನು ಇಂದು ಇಲ್ಲಿ ಇದ್ದೇನೆ. ಸತ್ಯಕ್ಕೆ ಆಗಾಗ ಕತ್ತಲು ಕವಿದಿರುತ್ತದೆ. ಆದರೆ ಸತ್ಯ ನಾಶ ಆಗುವುದಿಲ್ಲ. ಅದು ಒಂದು ದಿನ ಗೆದ್ದೇ ಗೆಲ್ಲುತ್ತದೆ. ನನ್ನ ಜೀವನದ ಈ ಹಂತದಲ್ಲಿ ಕುಟುಂಬವರು ಅನುಭವಿಸಿದ ಕಷ್ಟ ನನ್ನ ಹೃದಯವನ್ನು ಯಾವಾಗಲೂ ಚುಚ್ಚುತ್ತದೆ’ ಎಂದು ಈ ವಿಡಿಯೋ ಜೊತೆ ಜಾನಿ ಮಾಸ್ಟರ್​ ಅವರು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ.

ಜಾನಿ ಮಾಸ್ಟರ್​ ನಿರಪರಾಧಿ ಎಂಬುದು ಇನ್ನೂ ಸಾಬೀತಾಗಿಲ್ಲ. ಸದ್ಯಕ್ಕೆ ಅವರಿಗೆ ಸಿಕ್ಕಿರುವುದು ಜಾಮೀನು ಮಾತ್ರ. ಹಾಗಿದ್ದರೂ ಕೂಡ ಅವರು ಸಮಾಜಸೇವೆ ಮಾಡಿ ಜೈಲಿಗೆ ಹೋಗಿ ಬಂದವರಂತೆ ಈ ವಿಡಿಯೋವನ್ನು ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಮಗೆ ನಿಮ್ಮ ಕುಟುಂಬದ ನೋವು ಏನು ಎಂಬುದು ಗೊತ್ತಾಗುತ್ತದೆ. ಆದರೆ ನೀವು ಇನ್ನೂ ಆರೋಪಿ. ಸಮಾಜ ಸೇವೆ ಮಾಡಿ ನೀವೇನು ಜೈಲಿಗೆ ಹೋಗಿಲ್ಲ ಅಥವಾ ಒಲೆಂಪಿಕ್ಸ್​ ಪದಕ ಗೆದ್ದು ಮನೆಗೆ ಬಂದಿಲ್ಲ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಆದರೆ ನಾನಿ ಮಾಸ್ಟರ್​ ಅವರ ಅಪ್ಪಟ ಅಭಿಮಾನಿಗಳು ಅವರಿಗೆ ಸ್ವಾಗತ ಕೋರಿದ್ದಾರೆ. ಆದಷ್ಟು ಬೇಗ ನ್ಯಾಯ ಸಿಗಲಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪೋಕ್ಸೋ ಕಾಯ್ದೆ ಅಡಿ ಕೇಸ್ ಹಿನ್ನೆಲೆ; ಜಾನಿ ಮಾಸ್ಟರ್​ಗೆ ಘೋಷಿಸಿದ್ದ ರಾಷ್ಟ್ರಪ್ರಶಸ್ತಿ ರದ್ದು  

ಕನ್ನಡ, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಯ ಸಿನಿಮಾಗಳಿಗೆ ಜಾನಿ ಮಾಸ್ಟರ್​ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಸೂಪರ್​ ಹಿಟ್ ಆದ ‘ರಾ ರಾ ರಕ್ಕಮ್ಮ..’ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು ಇದೇ ಜಾನಿ ಮಾಸ್ಟರ್​. ಚಿತ್ರರಂಗದಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಆದರೆ ಅತ್ಯಾಚಾರ ಆರೋಪ ಬಂದ ಬಳಿಕ ಅವರನ್ನು ಕೆಲವು ಸಿನಿಮಾ ತಂಡಗಳು ಹೊರಗಿಟ್ಟಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.