AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಡಿ’ ಹಾಡು ವಿವಾದ, ನೋರಾ ಫತೇಹಿ, ಸಂಜಯ್ ದತ್​​ಗೆ ಮತ್ತೊಮ್ಮೆ ನೋಟಿಸ್

Actress Nora Fatehi: ‘ಸೆರಗ ಸರ್ಸೆ’ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಉಂಟಾಗಿದ್ದು, ಈ ವಿಷಯ ಲೋಕಸಭೆಯಲ್ಲಿ ಸಹ ಚರ್ಚೆ ಆಗಿತ್ತು. ಹಾಡು ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನಿರ್ದೇಶಕ ಮತ್ತು ಹಾಡಿನ ಮೂಲ ಸಾಹಿತ್ಯ ಬರೆದಿರುವ ಪ್ರೇಮ್, ಹಾಡಿನಲ್ಲಿ ನಟಿಸಿರುವ ನೋರಾ ಫತೇಹಿ, ಸಂಜಯ್ ದತ್ ಹಾಗೂ ಹಾಡಿನ ಹಿಂದಿ ಸಾಹಿತ್ಯ ಬರೆದಿರುವ ರಖೀಬ್ ಆಲಂ ನೊಟೀಸ್ ಜಾರಿ ಮಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ ಇದೀಗ ಮತ್ತೊಮ್ಮೆ ನೊಟೀಸ್ ನೀಡಿದೆ.

‘ಕೆಡಿ’ ಹಾಡು ವಿವಾದ, ನೋರಾ ಫತೇಹಿ, ಸಂಜಯ್ ದತ್​​ಗೆ ಮತ್ತೊಮ್ಮೆ ನೋಟಿಸ್
Sarke
ಮಂಜುನಾಥ ಸಿ.
|

Updated on:Apr 07, 2026 | 12:24 PM

Share

ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ ಸಿನಿಮಾದ ಹಾಡೊಂದು ಭಾರಿ ವಿವಾದ ಸೃಷ್ಟಿಸಿತ್ತು. ‘ಸೆರಗ ಸರ್ಸೆ’ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಉಂಟಾಗಿದ್ದು, ಈ ವಿಷಯ ಲೋಕಸಭೆಯಲ್ಲಿ ಸಹ ಚರ್ಚೆ ಆಗಿತ್ತು. ಹಾಡು ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನಿರ್ದೇಶಕ ಮತ್ತು ಹಾಡಿನ ಮೂಲ ಸಾಹಿತ್ಯ ಬರೆದಿರುವ ಪ್ರೇಮ್, ಹಾಡಿನಲ್ಲಿ ನಟಿಸಿರುವ ನೋರಾ ಫತೇಹಿ, ಸಂಜಯ್ ದತ್ ಹಾಗೂ ಹಾಡಿನ ಹಿಂದಿ ಸಾಹಿತ್ಯ ಬರೆದಿರುವ ರಖೀಬ್ ಆಲಂ ನೊಟೀಸ್ ಜಾರಿ ಮಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ ಇದೀಗ ಮತ್ತೊಮ್ಮೆ ನೊಟೀಸ್ ನೀಡಿದೆ.

ಈ ಹಿಂದೆ ನೀಡಿದ್ದ ನೋಟೀಸಿನ ಅನ್ವಯ ನೋರಾ ಫತೇಹಿ ಏಪ್ರಿಲ್ 6 ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ನೋರಾ ಪರವಾಗಿ ಅವರ ವಕೀಲರು ಹಾಜರಾಗಿದ್ದರು, ಇದನ್ನು ಒಪ್ಪದ ಮಹಿಳಾ ಆಯೋಗ ಖುದ್ದಾಗಿ ನಟಿಯೇ ಹಾಜರಾಗೇಕು ಎಂದಿದೆ. ಇದೀಗ ಮತ್ತೊಮ್ಮೆ ನೋರಾ ಫತೇಹಿಗೆ ನೊಟೀಸ್ ಹೊರಡಿಸಿದ್ದು, ಏಪ್ರಿಲ್ 27 ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಅವರಿಗೆ ಏಪ್ರಿಲ್ 8 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಕುರಿತು ಮತ್ತೊಂದು ಸಮನ್ಸ್ ಸಹ ಹೊರಡಿಸಲಾಗಿದೆ.

ಇದನ್ನೂ ಓದಿ:ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್, ನಿರ್ಮಾಪಕ ಕೆವಿಎನ್ ವೆಂಕಟೇಶ್ ಹಾಗೂ ಹಿಂದಿ ಆವೃತ್ತಿ ಬರೆದಿರುವ ರಖೀಬ್ ಆಲಂ ಅವರಿಗೂ ಸಹ ರಾಷ್ಟ್ರೀಯ ಮಹಿಳಾ ಆಯೋಗ ನೊಟೀಸ್ ನೀಡಿತ್ತು. ಈ ಬಗ್ಗೆ ಲಿಖಿತ ಕ್ಷಮಾಪಣೆ ಸಲ್ಲಿಸಿರುವ ಇವರುಗಳು ಮೂರು ತಿಂಗಳು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿಯೂ ಹೇಳಿದ್ದಾರೆ. ನಿರ್ದೇಶಕ ಪ್ರೇಮ್ ಈ ಬಗ್ಗೆ ವಿಡಿಯೋ ಮೂಲಕವು ಕ್ಷಮೆ ಕೇಳಿದ್ದರು. ತಾವು ಹಾಡನ್ನು ಹಿಂಪಡೆದು ಸಾಹಿತ್ಯವನ್ನು ಮತ್ತೆ ರಚಿಸಿ ಹಾಡನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅಲ್ಲದೆ, ತಾವು ಆ ಹಾಡನ್ನು ಎಣ್ಣೆ ಬಾಟಲಿಗೆ ಹೋಲಿಕೆಯಾಗಿ ಬರೆದಿರುವುದಾಗಿ ಸ್ಪಷ್ಟನೆ ನೀಡಿದ್ದರು. ಹಾಡಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಸಹ ಹೇಳಿದ್ದರು.

‘ಕೆಡಿ’ ಸಿನಿಮಾವು ಬಹುತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾದ ಧ್ರುವ ಸರ್ಜಾ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ಜೀಸು ಸೇನ್​​ಗುಪ್ತ, ರವಿಚಂದ್ರನ್, ರಮೇಶ್, ಅಭಿಲಾಶ್ ಇನ್ನೂ ಹಲವರು ಈ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Tue, 7 April 26

Follow Us