AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್ 2’ನಲ್ಲಿ ಮೋಹನ್​​ಲಾಲ್ ದೃಶ್ಯಗಳಿಗೆ ಕತ್ತರಿ, ಅಭಿಮಾನಿಗಳ ಅಸಮಾಧಾನ

ಹಿಂದಿನ ‘ಜೈಲರ್’ನಲ್ಲಿ ಶಿವರಾಜ್ ಕುಮಾರ್, ಮೋಹನ್​​ಲಾಲ್ ಇನ್ನೂ ಕೆಲವರ ಪಾತ್ರ ಸಖತ್ ಹಿಟ್ ಆಗಿತ್ತು. ‘ಜೈಲರ್ 2’ನಲ್ಲೂ ಅವರು ಮುಂದುವರೆದಿರುವ ಜೊತೆಗೆ ಇನ್ನೂ ಕೆಲವು ಹೊಸ ಸ್ಟಾರ್ ನಟರನ್ನು ಸೇರಿಸಿಕೊಳ್ಳಲಾಗಿದೆ. ಆದರೆ ಇದೀಗ ಸಿನಿಮಾದ ಬಗ್ಗೆ ಸ್ಟಾರ್ ನಟ ಮೋಹನ್​​ಲಾಲ್ ಅಭಿಮಾನಿಗಳು ಖ್ಯಾತೆ ತೆಗೆದಿದ್ದು, ಸಿನಿಮಾನಲ್ಲಿ ಮೋಹನ್​​ಲಾಲ್​ ಪಾತ್ರ ಕತ್ತರಿಸಲಾಗಿದೆ ಎಂದಿದ್ದಾರೆ.

‘ಜೈಲರ್ 2’ನಲ್ಲಿ ಮೋಹನ್​​ಲಾಲ್ ದೃಶ್ಯಗಳಿಗೆ ಕತ್ತರಿ, ಅಭಿಮಾನಿಗಳ ಅಸಮಾಧಾನ
Jailer 2 Mohanlal
ಮಂಜುನಾಥ ಸಿ.
|

Updated on:Oct 16, 2026 | 8:16 AM

Share

ಮುಖ್ಯಾಂಶಗಳು

  • ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ
  • ‘ಜೈಲರ್ 2’ ಸಿನಿಮಾನಲ್ಲಿ ಮೋಹನ್​​ಲಾಲ್ ದೃಶ್ಯಕ್ಕೆ ಕತ್ತರಿ
  • ಅಸಮಾಧಾನ ವ್ಯಕ್ತಪಡಿಸಿದ ಮೋಹನ್​​ಲಾಲ್ ಸಹಾಯಕ

ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ನಿನ್ನೆಯಷ್ಟೆ (ಅಕ್ಟೋಬರ್ 15) ಭಾರಿ ಅದ್ಧೂರಿಯಾಗಿ ಎಲ್ಲೆಡೆ ರಿಲೀಸ್ ಆಗಿದೆ. ಸಿನಿಮಾ ನೋಡಿದವರು ಒಳ್ಳೆಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ‘ಜೈಲರ್ 2’ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಅತಿಥಿ ಪಾತ್ರಗಳೂ ಸಹ ಹೈಲೈಟ್. ಹಿಂದಿನ ‘ಜೈಲರ್’ನಲ್ಲಿ ಶಿವರಾಜ್ ಕುಮಾರ್, ಮೋಹನ್​​ಲಾಲ್ ಇನ್ನೂ ಕೆಲವರ ಪಾತ್ರ ಸಖತ್ ಹಿಟ್ ಆಗಿತ್ತು. ‘ಜೈಲರ್ 2’ನಲ್ಲೂ ಅವರು ಮುಂದುವರೆದಿರುವ ಜೊತೆಗೆ ಇನ್ನೂ ಕೆಲವು ಹೊಸ ಸ್ಟಾರ್ ನಟರನ್ನು ಸೇರಿಸಿಕೊಳ್ಳಲಾಗಿದೆ. ಆದರೆ ಇದೀಗ ಸಿನಿಮಾದ ಬಗ್ಗೆ ಸ್ಟಾರ್ ನಟ ಮೋಹನ್​​ಲಾಲ್ ಅಭಿಮಾನಿಗಳು ಖ್ಯಾತೆ ತೆಗೆದಿದ್ದು, ಸಿನಿಮಾನಲ್ಲಿ ಮೋಹನ್​​ಲಾಲ್​ ಪಾತ್ರ ಕತ್ತರಿಸಲಾಗಿದೆ ಎಂದಿದ್ದಾರೆ.

‘ಜೈಲರ್ 2’ನಲ್ಲಿ ಮೋಹನ್​​ಲಾಲ್ ಅತಿಥಿ ಪಾತ್ರದಲ್ಲಿ ನಟನೆ ಮಾಡಿದ್ದು, ಈ ಸಿನಿಮಾದಲ್ಲಿ ಅವರ ಕಡಿಮೆ ಸ್ಕ್ರೀನ್ ಟೈಮ್ ಕುರಿತು ಅಭಿಮಾನಿಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ಮೋಹನ್​​ಲಾಲ್ ಅವರ ವೈಯಕ್ತಿಕ ಫ್ಯಾಷನ್ ಸ್ಟೈಲಿಸ್ಟ್ ಮತ್ತು ಕಾಸ್ಟ್ಯೂಮ್ ಡಿಸೈನರ್ ಜಿಷಾದ್ ಶಮ್ಸುದ್ದೀನ್, ಚಿತ್ರಕ್ಕಾಗಿ ಪ್ಲಾನ್ ಮಾಡಲಾಗಿದ್ದ ಮೂರು ವಿಭಿನ್ನ ಲುಕ್‌ಗಳನ್ನು ಅಂತಿಮ ಕಟ್‌ನಿಂದ ತೆಗೆದುಹಾಕಲಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಮಾತ್ರಲ್ಲದೆ, ಟ್ರೈಲರ್​​ನಲ್ಲಿದ್ದ ಮೋಹನ್​​ಲಾಲ್ ಅವರ ಒಂದು ದೃಶ್ಯವನ್ನು ಸಿನಿಮಾದಿಂದ ಕತ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಿರ್ದೇಶಕ ನೆಲ್ಸನ್ ಅವರ ಈ ನಿರ್ಧಾರದ ಬಗ್ಗೆ ಜಿಷಾದ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಹಿರಿಯ ನಟ ಮೊಹನ್​​ಲಾಲ್ ಅವರಿಗೆ ‘ಜೈಲರ್ 2’ ಚಿತ್ರದಲ್ಲಿ ಮತ್ತಷ್ಟು ಪ್ರಮುಖವಾದ ಪಾತ್ರವಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಒಂದು ವೇಳೆ ಇದರ ಸೀಕ್ವೆಲ್ (ಜೈಲರ್ 3) ಬಂದರೆ ತಾನು ಅದರೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಜಿಷಾದ್ ಹೇಳಿರುವಂತೆ, ‘ಮೋಹನ್‌ಲಾಲ್ ಅವರ ಮೂರು ವಿಭಿನ್ನ ಲುಕ್‌ಗಳನ್ನು ಪ್ಲಾನ್ ಮಾಡಿ ಶೂಟ್ ಮಾಡಲಾಗಿದ್ದರೂ, ಅವುಗಳನ್ನು ಅಂತಿಮ ಕಟ್‌ನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಟ್ರೇಲರ್‌ನಲ್ಲಿದ್ದ ನಟನ ದೃಶ್ಯವನ್ನೂ ಕೂಡ ಥಿಯೇಟರ್ ಆವೃತ್ತಿಯಿಂದ ಕಟ್‌ ಮಾಡಲಾಗಿದೆ. ‘ನಾನು ಒಂದು ಪ್ರಮುಖ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಶೂಟ್ ಮಾಡಲಾದ ದೃಶ್ಯಗಳ ಆಧಾರದ ಮೇಲೆ ನನಗೆ ನಮ್ಮ ಕೆಲಸದ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು, ಟ್ರೇಲರ್‌ನಲ್ಲಿ ಕೇವಲ 2 ಸೆಕೆಂಡ್‌ಗಳ ದೃಶ್ಯವಿದ್ದಾಗಲೂ ನನಗೆ ನಂಬಿಕೆಯಿತ್ತು. ಆದರೆ ಸಿನಿಮಾ ಬಿಡುಗಡೆಯಾದಾಗ, ಮೋಹನ್‌ಲಾಲ್ ಸರ್ ಅವರ ಮೂರು ವಿಭಿನ್ನ ಲುಕ್‌ಗಳನ್ನು ಸಂಪೂರ್ಣವಾಗಿ ಕಟ್ ಮಾಡಲಾಗಿದೆ ಮತ್ತು ಟ್ರೇಲರ್‌ನಲ್ಲಿದ್ದ ದೃಶ್ಯವನ್ನೂ ಕೂಡ ತೆಗೆದುಹಾಕಲಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ರಜನೀಕಾಂತ್ ‘ಧರ್ಮನ್’ ಸಿನಿಮಾನಲ್ಲಿ ನಟಿ ಶ್ರೀಲೀಲಾ

ಪೋಸ್ಟ್ ವೈರಲ್ ಆಗುತ್ತಿದ್ದಂತೆ ಮೋಹನ್​​ಲಾಲ್ ಅಭಿಮಾನಿಗಳು ಸಹ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ‘ಜೈಲರ್ 2’ ಸಿನಿಮಾದ ನಿರ್ದೇಶಕ ನೆಲ್ಸನ್ ಅವರನ್ನು ಟೀಕಿಸಲು ಆರಂಭಿಸಿದ್ದಾರೆ. ಸ್ಟಾರ್ ನಟನೊಬ್ಬನಿಗೆ ಭಿನ್ನವಾದ ಕಾಸ್ಟ್ಯೂಮ್, ಮೇಕಪ್ ಹಾಕಿಸಿ ಶೂಟ್ ಮಾಡಿ ಬಳಿಕ ಆ ದೃಶ್ಯಗಳನ್ನು ತೆಗೆದುಹಾಕುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:14 am, Fri, 16 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More