ಪ್ರಭಾಸ್ ಸಿನಿಮಾಕ್ಕೆ ನೋ ಹೇಳಿದ ಸ್ಟಾರ್ ನಟಿ, ಕಾರಣ ನಿರ್ದೇಶಕ

Prabhas: ಪ್ರಭಾಸ್ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲು ದೊಡ್ಡ ಬಾಲಿವುಡ್ ನಟಿಯರೇ ಸಾಲುಗಟ್ಟಿ ನಿಂತಿದ್ದಾರೆ. ಆದರೆ ಇಲ್ಲೊಬ್ಬ ನಟಿ ತಾವು ಪ್ರಭಾಸ್ ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಅವಕಾಶವನ್ನು ಪಕ್ಕಕ್ಕೆ ತಳ್ಳಿದ್ದಾರೆ. ಆದರೆ ಹೀಗೆ ಪ್ರಭಾಸ್ ಸಿನಿಮಾ ಅವಕಾಶ ನಿರಾಕರಿಸಲು ಪ್ರಭಾಸ್ ಕಾರಣ ಅಲ್ಲ, ಬದಲಿಗೆ ಆ ಸಿನಿಮಾದ ನಿರ್ದೇಶಕ ಕಾರಣ.

ಪ್ರಭಾಸ್ ಸಿನಿಮಾಕ್ಕೆ ನೋ ಹೇಳಿದ ಸ್ಟಾರ್ ನಟಿ, ಕಾರಣ ನಿರ್ದೇಶಕ
ಪ್ರಭಾಸ್
Follow us
ಮಂಜುನಾಥ ಸಿ.
|

Updated on: Dec 17, 2024 | 11:01 AM

ಪ್ರಭಾಸ್ ಜೊತೆ ನಾಯಕಿಯಾಗಿ ನಟಿಸಲು ಬಾಲಿವುಡ್ ನಟಿಯರೇ ತುದಿಗಾಲಲ್ಲಿ ನಿಂತಿದ್ದಾರೆ. ಪ್ರಭಾಸ್ ಜೊತೆ ನಟಿಸಿದರೆ ವಿಶ್ವಮಟ್ಟದಲ್ಲಿ ಗುರುತು ಸಿಗುತ್ತದೆ ಎಂಬುದೇ ಇದಕ್ಕೆ ಕಾರಣ. ಈಗಾಗಲೇ ಶ್ರದ್ಧಾ ಕಪೂರ್, ಕೃತಿ ಸೆನನ್ ಇನ್ನೂ ಕೆಲವು ಬಾಲಿವುಡ್​ನ ಸ್ಟಾರ್ ನಟಿಯರು ಪ್ರಭಾಸ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಇದೀಗ ನಟಿಯೊಬ್ಬರು ಪ್ರಭಾಸ್​ಗೆ ನಾಯಕಿಯಾಗುವ ಅವಕಾಶವನ್ನು ಒಲ್ಲೆ ಎಂದಿದ್ದಾರೆ. ಆದರೆ ಅದಕ್ಕೆ ಪ್ರಭಾಸ್ ಕಾರಣ ಅಲ್ಲ ಬದಲಿಗೆ ನಿರ್ದೇಶಕ ಕಾರಣ.

ಪ್ರಭಾಸ್, ‘ಸ್ಪಿರಿಟ್’ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾಕ್ಕೆ ‘ಅರ್ಜುನ್ ರೆಡ್ಡಿ’, ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಕ. ಸಂದೀಪ್ ಅವರ ನಿರ್ದೇಶನ ಶೈಲಿಯ ಬಗ್ಗೆ ಟೀಕೆಗಳು ಈ ಹಿಂದೆ ವ್ಯಕ್ತವಾಗಿವೆ. ಸಂದೀಪ್, ತಮ್ಮ ಸಿನಿಮಾಗಳಲ್ಲಿ ಅನವಶ್ಯಕ ಹಿಂಸೆಯನ್ನು ಪ್ರದರ್ಶಿಸುತ್ತಾರೆ. ನಾಯಕಿಯರನ್ನು ನಾಯಕನ ಅಡಿಯಾಳಿನಂತೆ, ಸೇವಕಿಯಂತೆ ಚಿತ್ರಿಸುತ್ತಾರೆ ಎಂಬ ದೂರಿದೆ. ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಪಾತ್ರವನ್ನು ಹೀಗೆಯೇ ತೋರಿಸಿದ್ದರು. ಅದೇ ಕಾರಣಕ್ಕೆ ಈಗ ಮೃಣಾಲ್ ಠಾಕೂರ್, ತಾವು ಸಂದೀಪ್ ರೆಡ್ಡಿ ವಂಗಾ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್, ಮಹೇಶ್ ಬಾಬು, ಪ್ರಭಾಸ್ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು?

‘ಸ್ಪಿರಿಟ್’ ಸಿನಿಮಾಕ್ಕೆ ಮೃಣಾಲ್ ಠಾಕೂರ್ ನಾಯಕಿಯಾಗಿ ಆಯ್ಕೆ ಆಗಿದ್ದರು. ಅನಿವಾರ್ಯ ಕಾರಣಕ್ಕೆ ತನ್ನ ಪೊಲೀಸ್ ಹುದ್ದೆ ಕಳೆದುಕೊಂಡಿರುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕತೆಯನ್ನು ಹೊಂದಿದೆ ‘ಸ್ಪಿರಿಟ್’ ಸಿನಿಮಾ. ಪ್ರಭಾಸ್​ ಮಡದಿಯ ಪಾತ್ರಕ್ಕೆ ಮೃಣಾಲ್ ಠಾಕೂರ್ ಅನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಂದೀಪ್ ರೆಡ್ಡಿ ವಂಗಾ ವಿರುದ್ಧದ ಪ್ರತಿಭಟನಾರ್ಥವಾಗಿ ಮೃಣಾಲ್ ಠಾಕೂರ್ ಈಗ ಸಿನಿಮಾ ಕೈಬಿಟ್ಟಿದ್ದಾರೆ.

ಮೃಣಾಲ್ ಠಾಕೂರ್ ಮೂಲತಃ ಹಿಂದಿ ನಟಿಯಾಗಿದ್ದರೂ ತೆಲುಗು ಚಿತ್ರರಂಗದಲ್ಲಿ ಬಹಳ ಜನಪ್ರಿಯ. ಅವರು ನಟಿಸಿದ್ದ ‘ಸೀತಾ ರಾಮಂ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಅದಾದ ಬಳಿಕ ಅವರು ನಟಿಸಿದ ‘ಹಾಯ್ ನಾನ್ನ’ ಸಿನಿಮಾ ಸಹ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಎರಡು ಸಿನಿಮಾಗಳಿಂದ ಮೃಣಾಲ್ ಠಾಕೂರ್ ತೆಲುಗು ಸಿನಿಮಾ ಪ್ರೇಮಿಗಳ ಮೆಚ್ಚಿನ ನಟಿಯಾಗಿಬಿಟ್ಟಿದ್ದಾರೆ. ಮೃಣಾಲ್ ಸದ್ಯಕ್ಕೆ ನಾಲ್ಕು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ