‘ಆರ್ಆರ್ಆರ್’ ಚಿತ್ರದ ಕಲೆಕ್ಷನ್ ಹಿಂದಿಕ್ಕಿದ ‘ಪುಷ್ಪ 2’ ಚಿತ್ರ; ದಾಖಲೆಯ ಮೇಲೆ ದಾಖಲೆ
‘ಪುಷ್ಪ 2: ದಿ ರೂಲ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. 1,300 ಕೋಟಿ ರೂಪಾಯಿಗಿಂತ ಅಧಿಕ ಗಳಿಕೆ ಮಾಡಿದ ಈ ಚಿತ್ರ, ‘ಆರ್ಆರ್ಆರ್’ನ ದಾಖಲೆಯನ್ನು ಮುರಿದಿದೆ. ಅಲ್ಲು ಅರ್ಜುನ್ ಅವರ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುಷ್ಪ 3ರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ, ಅದರ ಚಿತ್ರೀಕರಣಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.
‘ಪುಷ್ಪ 2: ದಿ ರೂಲ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. 2021ರಲ್ಲಿ ರಿಲೀಸ್ ಆದ ಸೂಪರ್ ಹಿಟ್ ಸಿನಿಮಾ ‘ಪುಷ್ಪ’ ಚಿತ್ರದ ಸೀಕ್ವೆಲ್ ಇದಾಗಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಸಿನಿಮಾ ಸಾಗುತ್ತಿರುವ ವೇಗಕ್ಕೆ ಅನೇಕ ದಾಖಲೆಗಳು ಪುಡಿಯಾಗಿವೆ. ಈಗ ‘ಪುಷ್ಪ 2’ ಚಿತ್ರ ‘ಆರ್ಆರ್ಆರ್’ ಚಿತ್ರದ ಗಳಿಕೆ ದಾಖಲೆಯನ್ನು ಹಿಂದಿಕ್ಕಿದೆ.
ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ಟಿಆರ್-ರಾಮ್ ಚರಣ್ ನಟನೆಯ ‘ಪುಷ್ಪ 2’ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1230 ಕೋಟಿ ರೂಪಾಯಿ ಬಾಚಿಕೊಂಡಿತ್ತು. 2022ರಲ್ಲಿ ರಿಲೀಸ್ ಆಗಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಗಳಿಕೆಯನ್ನು ‘ಪುಷ್ಪ 2’ ಹಿಂದಿಕ್ಕಿ ಸಾಗಿದೆ. ಚಿತ್ರದ ಗಳಿಕೆ 1,300 ಕೋಟಿ ರೂಪಾಯಿ ದಾಟಿದೆ.
ಡಿಸೆಂಬರ್ 16ರಂದು ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 27 ಕೋಟಿ ರೂಪಾಯಿ ಬಾಚಿಕೊಂಡಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ನಿಧಾನವಾಗಿ ತಗ್ಗುತ್ತ ಸಾಗಲಿದೆ. ಈ ಚಿತ್ರ ‘ದಂಗಲ್’ (1790 ಕೋಟಿ ರೂಪಾಯಿ) ಹಾಗೂ ‘ಬಾಹುಬಲಿ 2’ (2070) ಕೋಟಿ ರೂಪಾಯಿ ಗಳಿಕೆಯನ್ನು ಹಿಂದಿಕ್ಕೋದು ಅನುಮಾನ ಎಂದು ಹೇಳಲಾಗುತ್ತಿದೆ.
‘ಪುಷ್ಪ 2’ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲು ಅರ್ಜುನ್ ಪರ್ಫಾರ್ಮೆನ್ಸ್ನ ಜನರು ಕೊಂಡಾಡಿದ್ದಾರೆ. ಸಿನಿಮಾದ ಅವಧಿ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ಸದ್ಯ ‘ಪುಷ್ಪ 3’ ಸಿನಿಮಾದ ಶೂಟಿಂಗ್ಗೆ ತಂಡ ಯವಾಗ ರೆಡಿ ಆಗಲಿದೆ ಎಂಬ ಪ್ರಶ್ನೆ ಮೂಡಿದೆ. ‘ಪುಷ್ಪ 3: ದಿ ರ‍್ಯಾಂಪೇಜ್’ ಎನ್ನುವ ಟೈಟಲ್ ಇಡಲಾಗಿದೆ. ಸದ್ಯ ಅಲ್ಲು ಅರ್ಜುನ್ ಬೇರೆ ಕಮಿಟ್ಮೆಂಟ್ ಹೊಂದಿದ್ದು ಸದ್ಯಕ್ಕಂತೂ ಸಿನಿಮಾ ಸೆಟ್ಟೇರೋದು ಅನುಮಾನ.
ಇದನ್ನೂ ಓದಿ: ವಿವಾದದ ಮಧ್ಯೆಯೂ ಕಮಾಯಿ ನಿಲ್ಲಿಸದ ‘ಪುಷ್ಪ 2’; ಗಳಿಕೆಯಲ್ಲಿ ದಾಖಲೆ
‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಸುಕುಮಾರ್ ದೊಡ್ಡ ಗೆಲುವು ಕಂಡಿದ್ದಾರೆ. ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ಗೆ ಈ ಚಿತ್ರದಿಂದ ದೊಡ್ಡ ಮಟ್ಟದ ಲಾಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.