AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಬಂತು ‘19.20.21’ ಸಿನಿಮಾ; ಈ ಚಿತ್ರದಲ್ಲಿದೆ ಕನ್ನಡದ ಮಣ್ಣಿನ ನೈಜ ಕಥೆ

‘19.20.21’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆದ ಬಗ್ಗೆ ನಿರ್ದೇಶಕ ಮಂಸೋರೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಶೃಂಗ ಬಿ.ವಿ. ಅಭಿನಯಿಸಿದ್ದಾರೆ. ಹಲವು ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಸಿನಿಮಾ ಲಭ್ಯವಾಗಿದೆ.

ಒಟಿಟಿಗೆ ಬಂತು ‘19.20.21’ ಸಿನಿಮಾ; ಈ ಚಿತ್ರದಲ್ಲಿದೆ ಕನ್ನಡದ ಮಣ್ಣಿನ ನೈಜ ಕಥೆ
19.20.21 ಸಿನಿಮಾ
ಮದನ್​ ಕುಮಾರ್​
|

Updated on: Jan 12, 2024 | 7:43 PM

Share

ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಕನ್ನಡದ ‘19.20.21’ ಸಿನಿಮಾ (19.20.21 Kannada Movie) ಬಿಡುಗಡೆ ಆಗಿತ್ತು. ಚಿತ್ರಮಂದಿರದಲ್ಲಿ ನೋಡಿದ ಎಲ್ಲರೂ ಈ ಸಿನಿಮಾಗೆ ಮೆಚ್ಚುಗೆ ಸೂಚಿಸಿದರು. ವಿಮರ್ಶಕರು ಕೂಡ ಪ್ರಶಂಸೆ ವ್ಯಕ್ತಪಡಿಸಿದರು. ನೈಜ ಘಟನೆ ಆಧಾರಿತ ಈ ಚಿತ್ರವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಕಾದಿದ್ದ ಸಿನಿಪ್ರಿಯರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಇಂದಿನಿಂದ (ಜನವರಿ 12) ಒಟಿಟಿ ಅಂಗಳಕ್ಕೆ ‘19.20.21’ ಸಿನಿಮಾ ಕಾಲಿಟ್ಟಿದೆ. ಈ ಸಿನಿಮಾಗೆ ಮಂಸೋರೆ (Mansore) ನಿರ್ದೇಶನ ಮಾಡಿದ್ದಾರೆ. ರಿಯಲಿಸ್ಟಿಕ್​ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಒಟಿಟಿ (OTT Platform) ಮೂಲಕ ಈ ಚಿತ್ರ ಇನ್ನೂ ಹೆಚ್ಚಿನ ಪ್ರೇಕ್ಷಕರನ್ನು ತಲುಪುತ್ತಿದೆ.

‘19.20.21’ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡದವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕನ್ನಡದ ಚಿತ್ರಗಳಿಗೆ ಒಟಿಟಿಯಲ್ಲಿ ಸರಿಯಾದ ರೀತಿಯ ಮನ್ನಣೆ ದೊರೆಯುತ್ತಿಲ್ಲ. ಅದರಲ್ಲೂ ಸ್ವಲ್ಪ ನಿಷ್ಠುರವಾದ ಕಥೆಗಳು ಇದ್ದರಂತೂ ಒಟಿಟಿ ಸಂಸ್ಥೆಗಳು ಮೀನಾಮೇಷ ಎನಿಸುತ್ತವೆ. ಈ ರೀತಿ ಎದುರಾದ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ‘19.20.21’ ಚಿತ್ರ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿದೆ.

ಒಟಿಟಿಯಲ್ಲಿ ಬಿಡುಗಡೆ ಆದ ಬಗ್ಗೆ ನಿರ್ದೇಶಕ ಮಂಸೋರೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನಿಮ್ಮ ಅಂಗೈಯಲ್ಲಿ ನಮ್ಮ ಸಿನಿಮಾ. ಹಲವು ವಿಘ್ನಗಳನ್ನು ದಾಟಿ ನಿಮ್ಮ ಬಳಿಗೆ ನಮ್ಮ ಸಿನಿಮಾ ಬಂದಿದೆ. ನಮ್ಮದೇ ನೆಲದ ಪುಟ್ಟ ಸಮುದಾಯ ಮಲೆಕುಡಿಯರ ಸ್ಫೂರ್ತಿದಾಯಕ ಕತೆಯನ್ನು ಎಲ್ಲರಿಗೂ ತಲುಪಿಸಬೇಕೆಂಬ ಕನಸು ನನಸಾಗಿದೆ. ಜೊತೆಗೆ ನಮ್ಮ ಇನ್ನೊಂದು ಸಿನಿಮಾ ಕೂಡ ಇದೆ. ನೋಡಿ, ಹಂಚಿ, ಪ್ರೋತ್ಸಾಹಿಸಿ’ ಎಂದು ಮಂಸೋರೆ ಬರೆದುಕೊಂಡಿದ್ದಾರೆ.

ಅಪ್ಪಟ ಕನ್ನಡದ ಮಣ್ಣಿನ ಕಥೆಗಳು ಈಗ ಹಿಟ್​ ಆಗುತ್ತಿವೆ. ‘ಕಾಟೇರ’, ‘ಕಾಂತಾರ’ ಮುಂತಾದ ಚಿತ್ರಗಳ ರೀತಿಯೇ ‘19.20.21’ ಚಿತ್ರದ್ದು ಕೂಡ ಅಪ್ಪಟ ಕನ್ನಡದ ನೆಲದ ಕಥೆ. ನೆಲದ ಹಕ್ಕುಗಳ ಜೊತೆಗೆ ಅಂಟಿಕೊಂಡಿರುವ ಕಥೆ. ಹಾಗಾಗಿ ಒಟಿಟಿಯಲ್ಲಿ ಈ ಸಿನಿಮಾ ಎಲ್ಲರಿಗೂ ಇಷ್ಟ ಆಗಲಿದೆ ಎಂಬ ನಿರೀಕ್ಷೆ ಇದೆ. ‘Bcineet’ ಒಟಿಟಿ ಮೂಲಕ ಹಲವು ಪ್ಲಾಟ್​ಫಾರ್ಮ್​ಗಳಲ್ಲಿ ಈ ಸಿನಿಮಾ ಲಭ್ಯವಾಗಿದೆ. ಏರ್​ಟೆಲ್​ ಎಕ್ಸ್​ಸ್ಟ್ರೀಮ್​, ಅಮೇಜಾನ್​ ಪ್ರೈಂ ವಿಡಿಯೋ, ಮೂವೀಫ್ಲೆಕ್ಸ್​, ಜಸ್ಟ್​ ವಾಚ್​, ಒನ್​ಪ್ಲಸ್​ ಟಿವಿ, ಹಂಗಾಮಾ ಪ್ಲೇ, ಎಬಿಸಿ ಟಾಕೀಸ್​ ಮುಂತಾದ ಕಡೆಗಳಲ್ಲಿ ಈ ಸಿನಿಮಾ ನೋಡಬಹುದು.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

‘19.20.21’ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಶೃಂಗ ಬಿ.ವಿ. ಅಭಿನಯಿಸಿದ್ದಾರೆ. ಮಹದೇವ್​ ಹಡಪದ, ಕೃಷ್ಣ ಹೆಬ್ಬಾಳೆ, ಸಂಪತ್​ ಮೈತ್ರೇಯ, ಎಂ.ಡಿ. ಪಲ್ಲವಿ, ರಾಜೇಶ್​ ನಟರಂಗ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಬಿಂದು ಮಾಲಿನಿ ಸಂಗೀತ ನೀಡಿದ್ದಾರೆ. ಶಿವ ಬಿ.ಕೆ. ಕುಮಾರ್​ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್