ಸೆಲೆಬ್ರಿಟಿ ಆದ ನಂತರದಲ್ಲಿ ಅಭಿಮಾನಿಗಳು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಮಾಡುವ ಸಣ್ಣ ತಪ್ಪಿಗೆ ಕೆಲವೊಮ್ಮೆ ಅವರು ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ. ಈಗ ಮಲಯಾಳಂನ ಜನಪ್ರಿಯ ಕಿರುತೆರೆ ನಟಿ ನಿಮಿಷಾಗೆ ಸಂಕಷ್ಟ ಎದುರಾಗಿದೆ. ದೇವಸ್ಥಾನವೊಂದರ ಸಂಪ್ರದಾಯ ಮುರಿದ ಆರೋಪ ಈ ನಟಿಯ ವಿರುದ್ಧ ಕೇಳಿ ಬಂದಿದೆ. ಈ ಬೆನ್ನಲ್ಲೇ ಅವರಿಗೆ ದೂರವಾಣಿ ಕರೆಗಳು ಬರೋಕೆ ಆರಂಭವಾಗಿದ್ದು, ಸಾಕಷ್ಟು ಜನರು ನಿಂದಿಸುತ್ತಿದ್ದಾರೆ.
ಕೇರಳದ ದೇವಸ್ಥಾನದವರು ಪಂಬಾ ನದಿಯಲ್ಲಿ ಹಾವಿನ ಆಕಾರದ ದೋಣಿ ನಿರ್ಮಾಣ ಮಾಡಿದ್ದರು. ಸಂಪ್ರದಾಯದ ಪ್ರಕಾರ ಮಹಿಳೆಯರು ಈ ದೋಣಿ ಏರುವಂತಿಲ್ಲ. ಅದರಲ್ಲೂ ಈ ದೋಣಿ ಸಮೀಪ ಚಪ್ಪಲಿ ಹಾಕಿಕೊಂಡು ಬರುವುದು ಅಥವಾ ಚಪ್ಪಲಿ ಹಾಕಿಕೊಂಡು ದೋಣಿ ಏರುವುದು ಎಲ್ಲರಿಗೂ ನಿಷಿದ್ಧ. ಆದಾಗ್ಯೂ ನಿಮಿಷಾ ಈ ದೋಣಿ ಬಳಿ ಚಪ್ಪಲಿ ಧರಿಸಿ ಹೋಗಿದ್ದಾರೆ. ಜತೆಗೆ ಚಪ್ಪಲಿ ಹಾಕಿಕೊಂಡೇ ದೋಣಿ ಏರಿದ್ದಾರೆ.
ಈ ಫೋಟೋಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಒಪ್ಪಿಗೆ ಇಲ್ಲದೆ ಅವರು ದೋಣಿ ಹೇಗೆ ಏರಿದರು? ದೋಣಿ ಏರುವಾಗ ಚಪ್ಪಲಿ ಹಾಕಿಕೊಂಡಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ನಿಮಿಷಾ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ‘ದೋಣಿ ಒಳಗೆ ಮಹಿಳೆಯರು ಹೋಗಬಾರದು, ಅಲ್ಲಿ ಚಪ್ಪಲಿ ಧರಿಸಬಾರದು ಎಂಬುದು ನನಗೆ ಗೊತ್ತಿರಲಿಲ್ಲ. ಹೀಗಾಗಿ, ಫೋಟೋ ಅಪ್ಲೋಡ್ ಮಾಡಿ ನಂತರ ಡಿಲೀಟ್ ಮಾಡಿದೆ. ಈ ಫೋಟೋ ಪೋಸ್ಟ್ ಮಾಡಿದ ನಂತರದಲ್ಲಿ ನನಗೆ ಬೆದರಿಕೆ ಹಾಗೂ ಅಶ್ಲೀಲ ನಿಂದನೆಗಳು ಬರುತ್ತಿವೆ. ನಿತ್ಯ ಹಲವು ಕರೆಗಳು ಬರುತ್ತಿವೆ. ಅವರೆಲ್ಲ ಯಾರು ಎಂಬುದೇ ನನಗೆ ಗೊತ್ತಿಲ್ಲ. ಇದು ಈಗ ನನ್ನ ಕುಟುಂಬವನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ’ ಎಂದಿದ್ದಾರೆ.
ಇದನ್ನೂ ಓದಿ: ‘ನಾನು ಎಲ್ಲೂ ಹಾರಿ ಹೋಗಿಲ್ಲ, ಮುಂಬೈಗೆ ಹೋಗಿದ್ದು ವೈಯಕ್ತಿಕ ಕೆಲಸಕ್ಕಾಗಿ‘; ಆ್ಯಂಕರ್ ಅನುಶ್ರೀ ಸ್ಪಷ್ಟನೆ
‘ನಾನಿರೋದು ಬಾಡಿಗೆ ಮನೆಯಲ್ಲಿ’; ಪ್ರಶಾಂತ್ ಸಂಬರಗಿಗೆ ತಿರುಗೇಟು ನೀಡಿದ ಅನುಶ್ರೀ