ಆಂಧ್ರ ಅಲ್ಲ, ಕರ್ನಾಟಕದಲ್ಲೂ ಅಲ್ಲ ಈಶಾನ್ಯ ಭಾರತದ ಈ ರಾಜ್ಯದಲ್ಲಿ ‘ಪುಷ್ಪ 2’ ಟ್ರೇಲರ್ ರಿಲೀಸ್
‘ಪುಷ್ಪ 2’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈಶಾನ್ಯ ಭಾರತದಲ್ಲಿ ಭಾರಿ ಬೇಡಿಕೆ ಇರುವುದರಿಂದ, ಅಲ್ಲಿ ಟ್ರೇಲರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ನವೆಂಬರ್ 17ರಂದು ಟ್ರೇಲರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರವು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
‘ಪುಷ್ಪ 2’ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಈ ಚಿತ್ರ ತೆಲುಗು ಮಾತ್ರವಲ್ಲದೆ, ಕನ್ನಡ, ಹಿಂದಿ, ತಮಿಳು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ದಕ್ಷಿಣ ಭಾರತ, ಉತ್ತರ ಭಾರತ ದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಈ ಕಾರಣದಿಂದಿಂದ ಈಶಾನ್ಯ ಭಾರತದಲ್ಲೇ ಚಿತ್ರದ ಟ್ರೇಲರ್ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ದೊಡ್ಡದಾಗಿ ಪ್ರೀ-ರಿಲೀಸ್ ಇವೆಂಟ್ ನಡೆಸಲು ಪ್ಲ್ಯಾನ್ ನಡೆದಿದೆ.
ಇತ್ತೀಚೆಗೆ ಚಿತ್ರತಂಡ ಹಿನ್ನೆಲೆ ಸಂಗೀತ ನಿರ್ದೇಶಕರನ್ನು ಬದಲಿಸಿತ್ತು. ದೇವಿಶ್ರೀ ಪ್ರಸಾದ್ ಬದಲು ಥಮನ್ ಅವರು ತಂಡ ಸೇರಿಕೊಂಡಿದ್ದರು. ಹೀಗಾಗಿ, ಸಿನಿಮಾ ಕೆಲಸಗಳು ಪೂರ್ಣಗೊಂಡಿಲ್ಲವೇ ಎನ್ನುವ ಆತಂಕ ಮೂಡಿತ್ತು. ಆದರೆ, ಆ ಬಗ್ಗೆ ವರಿ ಮಾಡುವ ಆಲೋಚನೆ ಇಲ್ಲ ಎನ್ನಲಾಗಿದೆ.
ನವೆಂಬರ್ 17ರಂದು ‘ಪುಷ್ಪ 2’ ಟ್ರೇಲರ್ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ. ಈ ಸಂದರ್ಭದಲ್ಲಿ ತಂಡ ಬಿಹಾರದಲ್ಲಿ ಇರಲಿದೆ. ಬಿಹಾರದ ಪಾಟ್ನಾದಲ್ಲಿ ತಂಡ ಪ್ರಚಾರ ಮಾಡಲಿದೆ. ಈ ಕಾರಣಕ್ಕೆ ಅಲ್ಲಿಯೇ ಟ್ರೇಲರ್ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಬಂದಿದೆ. ಇದರಿಂದ ಈಶಾನ್ಯ ಭಾರತದಲ್ಲಿಯೂ ಸಿನಿಮಾಗೆ ಮತ್ತಷ್ಟು ಹೈಪ್ ಸಿಕ್ಕಂತೆ ಆಗಲಿದೆ ಎಂಬುದು ತಂಡದ ಆಲೋಚನೆ.
ಶೀಘ್ರವೇ ತಂಡ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ‘ಪುಷ್ಪ 2’ ತಂಡ ಸಂಪೂರ್ಣವಾಗಿ ವಿವಿಧ ಪ್ಲ್ಯಾನಿಂಗ್ ಮಾಡಿಕೊಂಡಿದೆ. ಸಿನಿಮಾ ರಿಲೀಸ್ವರೆಗೂ ವಿವಿಧ ನಗರಗಳಿಗೆ ತೆರಳಿ ತಂಡದವರು ಪ್ರಚಾರ ಮಾಡಲಿದ್ದಾರೆ.
ಇದನ್ನೂ ಓದಿ: ಬಿಡುಗಡೆ ಹಂತದಲ್ಲಿ ಪ್ರಮುಖ ಬದಲಾವಣೆ, ಹೊಸ ಪ್ರಯೋಗಕ್ಕೆ ಮುಂದಾದ ‘ಪುಷ್ಪ 2’
‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಸೇರಿ ದೊಡ್ಡ ತಾರಾಗಣವೇ ಇದೆ. ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡಿದರೆ, ಮೈತ್ರಿ ಮೂವೀ ಮೇಕರ್ಸ್ ದೊಡ್ಡ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.