ಬಿಡುಗಡೆ ಹಂತದಲ್ಲಿ ಪ್ರಮುಖ ಬದಲಾವಣೆ, ಹೊಸ ಪ್ರಯೋಗಕ್ಕೆ ಮುಂದಾದ ‘ಪುಷ್ಪ 2’

Pushpa 2: ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಒಂದು ತಿಂಗಳು ಸಹ ಇಲ್ಲ. ಈ ನಡುವೆ ಚಿತ್ರತಂಡ ತನ್ನ ಪ್ರಮುಖ ತಂತ್ರಜ್ಞ ಒಬ್ಬರನ್ನು ಬದಲಿಸಿ ಮತ್ತೊಬ್ಬರನ್ನು ಕರೆತರಲು ಮುಂದಾಗಿದೆ. ಈ ಪ್ರಯೋಗ ಸಫಲ ಆಗುವುದೇ.

ಬಿಡುಗಡೆ ಹಂತದಲ್ಲಿ ಪ್ರಮುಖ ಬದಲಾವಣೆ, ಹೊಸ ಪ್ರಯೋಗಕ್ಕೆ ಮುಂದಾದ ‘ಪುಷ್ಪ 2’
Follow us
ಮಂಜುನಾಥ ಸಿ.
|

Updated on: Nov 08, 2024 | 5:48 PM

‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಒಂದು ತಿಂಗಳು ಸಹ ಇಲ್ಲ. ಸಿನಿಮಾದ ಪ್ರಚಾರ ಈಗಾಗಲೇ ಪ್ರಾರಂಭವಾಗಿದೆ. ಅಲ್ಲು ಅರ್ಜುನ್, ಟಾಕ್ ಶೋ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲ್ಲಿದ್ದು, ಅಲ್ಲಿಂದಲೇ ಅಧಿಕೃತವಾಗಿ ಸಿನಿಮಾದ ಪ್ರಚಾರ ಪ್ರಾರಂಭ ಮಾಡಲಿದ್ದಾರೆ. ಇದೆಲ್ಲದರ ನಡುವೆ ‘ಪುಷ್ಪ 2’ ಸಿನಿಮಾ ತಂಡದಲ್ಲಿ ಪ್ರಮುಖ ಬದಲಾವಣೆ ಒಂದನ್ನು ಚಿತ್ರತಂಡ ಮಾಡುತ್ತಿದೆ. ಇದು ಅಭಿಮಾನಿಗಳಿಗೆ ಆತಂಕ ತಂದಿದೆ. ಸಿನಿಮಾದ ಪ್ರಮುಖ ತಂತ್ರಜ್ಞ ಒಬ್ಬರನ್ನು ಕೊನೆಯ ಹಂತದಲ್ಲಿ ಪಕ್ಕಕ್ಕೆ ಸರಿಸಲಿದೆ ಎನ್ನಲಾಗುತ್ತಿದೆ. ಆದರೆ ಒಳ್ಳೆಯ ಕಾರಣಕ್ಕೆ.

2021 ರಲ್ಲಿ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗುವಲ್ಲಿ ಆ ಸಿನಿಮಾದ ಹಾಡುಗಳ ಪಾತ್ರ ದೊಡ್ಡದಿತ್ತು. ಸಿನಿಮಾದ ಬಹುತೇಕ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಅದರಲ್ಲಿಯೂ ‘ಶ್ರೀವಲ್ಲಿ’ ಹಾಗೂ ‘ಊ ಅಂಟಾವ’ ಹಾಡಂತೂ ಈಗಲೂ ವೈರಲ್ ಪಟ್ಟಿಯಲ್ಲಿರುತ್ತವೆ. ಸಿನಿಮಾಕ್ಕೆ ಅದ್ಭುತವಾದ ಹಾಡೂ ಮತ್ತು ಹಿನ್ನೆಲೆ ಸಂಗೀತವನ್ನು ದೇವಿಶ್ರೀ ಪ್ರಸಾದ್ ನೀಡಿದ್ದರು. ಆದರೆ ಈಗ ದೇವಿ ಶ್ರೀ ಪ್ರಸಾದ್ ಬದಲಿಗೆ ಮತ್ತೊಬ್ಬರಿಂದ ಹಿನ್ನೆಲೆ ಸಂಗೀತ ಕೊಡಿಸಲಿದೆಯಂತೆ ಚಿತ್ರತಂಡ.

ಹೀಗೊಂದು ಸುದ್ದಿ ಹರಿದಾಡುತ್ತಿದೆ. ಸಿನಿಮಾದ ಹಾಡುಗಳಿಗೆ ಈಗಾಗಲೇ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾಗಿದೆ. ಕೆಲವು ಹಾಡುಗಳ ಚಿತ್ರೀಕರಣ, ಮುಗಿದು, ಕಲರ್ ಗ್ರೇಡಿಂಗ್, ಎಡಿಟಿಂಗ್ ಸಹ ಮುಗಿದು ಹೋಗಿದೆ. ಆದರೆ ಸಿನಿಮಾದ ಹಿನ್ನೆಲೆ ಸಂಗೀತಕ್ಕೆ ಮತ್ತೊಬ್ಬ ಸ್ಟಾರ್ ಸಂಗೀತ ನಿರ್ದೇಶಕರನ್ನು ಕರೆತರಲಾಗುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಪುಷ್ಪ 2’ ಚಿತ್ರದ ಮೊದಲ ದಿನದ ಗಳಿಕೆ 270 ಕೋಟಿ ರೂಪಾಯಿ? ಕರ್ನಾಟಕದಲ್ಲೆಷ್ಟು?

ದೇವಿಶ್ರೀ ಪ್ರಸಾದ್ ಈಗಾಗಲೇ ‘ಪುಷ್ಪ 2’ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಆದರೆ ಚಿತ್ರತಂಡ ಇನ್ನೊಬ್ಬ ನಿರ್ದೇಶಕರಿಂದಲೂ ಸಿನಿಮಾಕ್ಕೆ ಸಂಗೀತ ಕೊಡಿಸುವ ಯೋಜನೆ ಹಾಕಿಕೊಂಡಿದ್ದು, ಯಾವುದು ಉತ್ತಮ ಅನಿಸುತ್ತದೆಯೋ ಅದನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿದೆ. ಸಿನಿಮಾದ ಡಾಲ್ಬಿ ಮತ್ತಿತರೆ ತಂತ್ರಜ್ಞಾನ ಅತ್ಯುತ್ತಮವಾಗಿದ್ದು ಅದಕ್ಕೆ ಹೊಂದುವಂಥಹಾ ಸಂಗೀತವನ್ನು ಉಳಿಸಿಕೊಳ್ಳುವ ಯೋಜನೆಯಲ್ಲಿ ಚಿತ್ರತಂಡ ಇದೆ. ಇದೇ ಕಾರಣಕ್ಕೆ ತಮಿಳಿನ ಒಬ್ಬ ಜನಪ್ರಿಯ ಸಂಗೀತ ನಿರ್ದೇಶಕರಿಂದ ಸಂಗೀತ ಕೊಡಿಸುವ ಯೋಜನೆಯಲ್ಲಿ ಚಿತ್ರತಂಡ ಇದೆ. ಪುಷ್ಪ ಚಿತ್ರತಂಡದ ಈ ಪ್ರಯೋಗಕ್ಕೆ ದೇವಿಶ್ರೀ ಪ್ರಸಾದ್ ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ದಕ್ಷಿಣ ಚಿತ್ರರಂಗದಲ್ಲಿ ಪ್ರಸ್ತುತ ಹಾಟ್ ಸ್ಟಾರ್ ಆಗಿರುವ ಅನಿರುದ್ಧ್ ರವಿಚಂದ್ರನ್ ಅವರಿಂದ ‘ಪುಷ್ಪ 2’ ಸಿನಿಮಾಕ್ಕೆ ಸಂಗೀತ ಕೊಡಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲವರ ಪ್ರಕಾರ, ಜಿವಿ ಪ್ರಕಾಶ್, ಸಂಗೀತ ನೀಡಲಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿದೆ. ಆದರೆ ಅಂತಿಮವಾಗಿ ಯಾರ ಸಂಗೀತ ಉಳಿಯಲಿದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ