‘ಜೈಲರ್ 2’ ಚಿತ್ರದ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ 'ಜೇಲರ್ 2' ಶೂಟಿಂಗ್ ಪೂರ್ಣಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ 'ಧರ್ಮನ್' ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅವರು, ಶೀಘ್ರದಲ್ಲೇ ಕಮಲ್ ಹಾಸನ್ ಜೊತೆ ನಟಿಸಲಿರುವ ನೆಲ್ಸನ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

ಮುಖ್ಯಾಂಶಗಳು
- 'ಜೇಲರ್ 2' ಶೂಟಿಂಗ್ ಕಂಪ್ಲೀಟ್
- ಅಕ್ಟೋಬರ್ 15ಕ್ಕೆ ಬಿಡುಗಡೆಯಾಗಲಿದೆ ರಜನಿ ಸಿನಿಮಾ
- 'ಧರ್ಮನ್' ಚಿತ್ರದಲ್ಲಿ ಡಾಕ್ಟರ್ ಅವತಾರ
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಬಹುನಿರೀಕ್ಷಿತ ‘ಜೇಲರ್ 2’ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಸ್ತುತ ‘ಧರ್ಮನ್’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಕಮಲ್ ಹಾಸನ್ ಅವರೊಂದಿಗೆ ನಟಿಸುತ್ತಿರುವ ಹೊಸ ಸಿನಿಮಾದ ಕುರಿತಾಗಿಯೂ ರಜನಿಕಾಂತ್ ಪ್ರಮುಖ ಅಪ್ಡೇಟ್ ನೀಡಿದ್ದಾರೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೇಲರ್ 2’ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್ ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸಿನಿಮಾವು ಅಕ್ಟೋಬರ್ 15 ರಂದು ಬಿಡುಗಡೆಯಾಗಲಿದೆ.
ರಜನಿಕಾಂತ್ ಅಭಿನಯದ ಮುಂದಿನ ಸಿನಿಮಾ ‘ಧರ್ಮನ್’ ಪ್ರಸ್ತುತ ಎರಡನೇ ಹಂತದ ಶೂಟಿಂಗ್‌ನಲ್ಲಿದೆ. ಆಶ್ವಿನ್ ಮಾರಿಮುತ್ತು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಮತ್ತು ರೆಡ್ ಜೈಂಟ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಈ ಸಿನಿಮಾದಲ್ಲಿ ರಜನಿಕಾಂತ್ ವೈದ್ಯನ ಪಾತ್ರದಲ್ಲಿ ನಟಿಸುತ್ತಿದ್ದು, ಸಿಮ್ರಾನ್ ನಾಯಕಿಯಾಗಿದ್ದಾರೆ.
We heard you !! Ithan hair styleu !! Ithan looku ! Sexy work @kabilanchelliah ❤️ pic.twitter.com/mW8vmkYeeX
— Ashwath Marimuthu (@Dir_Ashwath) June 25, 2026
ರಜನಿಕಾಂತ್ ಮತ್ತು ಕಮಲ್ ಹಾಸನ್ ಬಹುವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಲಿದ್ದಾರೆ. 1975 ರಿಂದ 1985 ರ ನಡುವೆ ಈ ಜೋಡಿ ಸುಮಾರು 21 ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿತ್ತು. 1985 ರಲ್ಲಿ ಬಂದ ‘ಗೆರಾಫ್ತಾರ್’ ಚಿತ್ರದ ನಂತರ ಇಬ್ಬರೂ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.
ಇದನ್ನೂ ಓದಿ: ವಿಜಯ್ ಸಿಎಂ ಆಗಿ ಕಳೆಯಿತು 100 ದಿನ: ಮಾಧ್ಯಮದ ಪ್ರಶ್ನೆಗೆ ಮುಗುಳ್ನಕ್ಕು ಹೊರಟ ರಜನಿಕಾಂತ್
ಈ ಇಬ್ಬರು ದೈತ್ಯ ನಟರು ಸುಮಾರು 40 ವರ್ಷಗಳ ಸುದೀರ್ಘ ವಿರಾಮದ ನಂತರ ಒಂದಾಗುತ್ತಿದ್ದಾರೆ. ಈ ಬಿಗ್ ಪ್ರಾಜೆಕ್ಟ್‌ಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಪ್ರೋಮೋ ವೀಡಿಯೋ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




