AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ಕ್ಕೂ ಪ್ರದರ್ಶನಕ್ಕೂ ಮೊದಲೇ ಐಕಾನಿಕ್ ‘ಊರ್ವಶಿ’ ಥಿಯೇಟರ್ ನೆಲಸಮ

ಬೆಂಗಳೂರಿನ 55 ವರ್ಷಗಳ ಇತಿಹಾಸವಿರುವ ಐಕಾನಿಕ್ ಊರ್ವಶಿ ಥಿಯೇಟರ್ ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳ್ಳುತ್ತಿದೆ. 5,000 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಕ್ಷಿಯಾಗಿದ್ದ ಈ ಲಕ್ಕಿ ಚಿತ್ರಮಂದಿರವು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಇತಿಹಾಸದ ಪುಟ ಸೇರುತ್ತಿರುವುದು ಪ್ರೇಕ್ಷಕರಲ್ಲಿ ತೀವ್ರ ಬೇಸರ ತಂದಿದೆ.

‘ಟಾಕ್ಸಿಕ್’ಕ್ಕೂ ಪ್ರದರ್ಶನಕ್ಕೂ ಮೊದಲೇ ಐಕಾನಿಕ್ ‘ಊರ್ವಶಿ’ ಥಿಯೇಟರ್ ನೆಲಸಮ
ಊರ್ವಶಿ ಚಿತ್ರಮಂದಿರ
ಮಾಲತೇಶ ಜಗ್ಗೀನ್
| Edited By: |

Updated on:Aug 24, 2026 | 12:30 PM

Share

ಬೆಂಗಳೂರಿನ ಲಾಲ್‌ಬಾಗ್ ಮುಖ್ಯರಸ್ತೆಯಲ್ಲಿದ್ದ ಪ್ರೇಕ್ಷಕರ ಅತ್ಯಂತ ನೆಚ್ಚಿನ ಹಾಟ್ ಸ್ಪಾಟ್ ಹಾಗೂ ಐಕಾನಿಕ್ ಚಿತ್ರಮಂದಿರ ‘ಊರ್ವಶಿ’ ಇನ್ಮುಂದೆ ನೆನಪು ಮಾತ್ರ. ಕಳೆದ 8 ವರ್ಷಗಳಿಂದ ಗುತ್ತಿಗೆ ವಿವಾದ ನಡೆಯುತ್ತು, ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಹಿನ್ನೆಲೆಯಲ್ಲಿ, ಭೂಮಾಲೀಕರು ಪೊಲೀಸರ ಸಮ್ಮುಖದಲ್ಲಿ ಸ್ಥಳವನ್ನು ವಾಪಸ್ ಪಡೆದುಕೊಂಡಿದ್ದಾರೆ. ಇದೀಗ ಚಿತ್ರಮಂದಿರವನ್ನು ನೆಲಸಮಗೊಳಿಸುವ ಕಾರ್ಯ ಅಧಿಕೃತವಾಗಿ ಆರಂಭವಾಗಿದೆ.

1970ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರ ಹಸ್ತದಿಂದ ಉದ್ಘಾಟನೆಗೊಂಡಿದ್ದ ಈ ಚಿತ್ರಮಂದಿರಕ್ಕೆ ಸುಮಾರು 55 ವರ್ಷಗಳ ಸುದೀರ್ಘ ಇತಿಹಾಸವಿದೆ. 1,100 ಆಸನಗಳ ಬೃಹತ್ ಸಾಮರ್ಥ್ಯ ಹೊಂದಿದ್ದ ಥಿಯೇಟರ್, 5 ಭಾಷೆಗಳ 5,000ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಕ್ಷಿಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಎಕೆ 47’ ಸಿನಿಮಾ ಇಲ್ಲೇ 100 ದಿನಗಳ ಯಶಸ್ವಿ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತ್ತು. ವಿಶೇಷವೆಂದರೆ, ಭಾರತದ ಕೇವಲ 2 ಏಕಪರದೆ ಚಿತ್ರಮಂದಿರಗಳಲ್ಲಿ ಮಾತ್ರ ಲಭ್ಯವಿದ್ದ ಅತ್ಯಾಧುನಿಕ ಸೌಂಡ್ ಟೆಕ್ನಾಲಜಿಯನ್ನು ಊರ್ವಶಿ ಹೊಂದಿತ್ತು.

ಚಿತ್ರಮಂದಿರವನ್ನು ಗುತ್ತಿಗೆಗೆ ಪಡೆದಿದ್ದ ಬಸಟ್ಟಿ ಶೆಟ್ಟಿ ಅವರ ಲೀಸ್ ಅವಧಿಯು 2018ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿತ್ತು. 3 ವರ್ಷ ಕಾಂಟ್ರಾಕ್ಟ್ ಮುಂದುವರಿದಿದೆ ಎಂಬ ಚರ್ಚೆಗಳು ಇದ್ದವು. ಈಗ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಈ ಐತಿಹಾಸಿಕ ಚಿತ್ರಮಂದಿರದ ಭವಿಷ್ಯಕ್ಕೆ ಸಂಪೂರ್ಣ ತೆರೆ ಬಿದ್ದಂತಾಗಿದೆ. ಕಟ್ಟಡ ನೆಲಸಮವಾಗುತ್ತಿರುವುದನ್ನು ಕಂಡು ಸಿನೆಮಾ ಪ್ರಿಯರು ತೀವ್ರ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’ ಪ್ರದರ್ಶನ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಮುನ್ನವೇ ಈ ಘಟನೆ ಸಂಭವಿಸಿದೆ. ಒಂದು ವೇಳೆ ಊರ್ವಶಿ ಥಿಯೇಟರ್ ನೆಲಸಮ ಆಗದಿದ್ದರೆ ‘ಟಾಕ್ಸಿಕ್’ ಸಿನಿಮಾ ಇಲ್ಲೇ ಅದ್ದೂರಿಯಾಗಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ ಸ್ಯಾಂಡಲ್‌ವುಡ್‌ನ ಪ್ರಮುಖ ಮೈಲಿಗಲ್ಲಾಗಿದ್ದ ಊರ್ವಶಿ ಧರೆಗುರುಳುತ್ತಿರುವುದು ಕನ್ನಡ ಸಿನಿರಂಗಕ್ಕೆ ಮತ್ತು ಪ್ರೇಕ್ಷಕರಿಗೆ ದೊಡ್ಡ ನಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:07 pm, Mon, 24 August 26

Follow Us
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
‘ಟಾಕ್ಸಿಕ್’ಗೆ 100 ಪೀಸ್ ಆರ್ಕೆಸ್ಟ್ರಾ, ಅನುಭವ ಹಂಚಿಕೊಂಡ ಗಾಯಕ ಸಂತೋಷ್
‘ಟಾಕ್ಸಿಕ್’ಗೆ 100 ಪೀಸ್ ಆರ್ಕೆಸ್ಟ್ರಾ, ಅನುಭವ ಹಂಚಿಕೊಂಡ ಗಾಯಕ ಸಂತೋಷ್
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ