AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಹೊಸ ದಾಖಲೆ: ವಿದೇಶಿ ವಿತರಣೆ ಹಕ್ಕು 105 ಕೋಟಿ ರೂಪಾಯಿಗೆ ಮಾರಾಟ

ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ಹಣದ ಹೊಳೆ ಹರಿಯುತ್ತಿದೆ. ಯಶ್ ನಟನೆಯ ಈ ಸಿನಿಮಾಗೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಭಾರಿ ಬೇಡಿಕೆ ಸೃಷ್ಟಿ ಆಗಿದೆ. ಈ ಸಿನಿಮಾದ ವಿದೇಶಿ ವಿತರಣೆಯ ಹಕ್ಕುಗಳು ಬರೋಬ್ಬರಿ 105 ಕೋಟಿ ರೂಪಾಯಿಗೆ ಮಾರಾಟ ಆಗಿವೆ.

‘ಟಾಕ್ಸಿಕ್’ ಹೊಸ ದಾಖಲೆ: ವಿದೇಶಿ ವಿತರಣೆ ಹಕ್ಕು 105 ಕೋಟಿ ರೂಪಾಯಿಗೆ ಮಾರಾಟ
Toxic Movie Poster
ಮದನ್​ ಕುಮಾರ್​
|

Updated on: Feb 10, 2026 | 8:44 PM

Share

‘ರಾಕಿಂಗ್ ಸ್ಟಾರ್’ ಯಶ್ (Yash) ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇತ್ತೀಚೆಗಷ್ಟೇ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿತರಣಾ ಹಕ್ಕುಗಳು 120 ಕೋಟಿ ರೂಪಾಯಿಗೆ ಮಾರಾಟ ಆಗಿದ್ದವು. ಈಗ ‘ಟಾಕ್ಸಿಕ್’ (Toxic) ಸಿನಿಮಾ ವಿದೇಶಿ ಮಾರುಕಟ್ಟೆಯಲ್ಲೂ ದೂಳೆಬ್ಬಿಸಿದೆ. ವಿಶ್ವದಾದ್ಯಂತ ಸಿನಿಮಾ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಫಾರ್ಸ್ ಫಿಲ್ಮ್ (Phars Film) ಸಂಸ್ಥೆಯು ‘ಟಾಕ್ಸಿಕ್’ ಚಿತ್ರದ ಓವರ್​ಸೀಸ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ.

ಈ ಐತಿಹಾಸಿಕ ಡೀಲ್ ಬರೋಬ್ಬರಿ ₹105 ಕೋಟಿ ಅಡ್ವಾನ್ಸ್ ಮೊತ್ತಕ್ಕೆ ಕುದುರಿದ್ದು, ಭಾರತೀಯ ಚಿತ್ರರಂಗದಲ್ಲೇ ಇದು ಅತ್ಯಂತ ದೊಡ್ಡ ಮಟ್ಟದ ವಿದೇಶಿ ವ್ಯವಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ವಿಶೇಷವೆಂದರೆ, ಈ 105 ಕೋಟಿ ರೂಪಾಯಿ ವ್ಯವಹಾರ ಕೇವಲ ಭಾರತೀಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಆವೃತ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಚಿತ್ರದ ಇಂಗ್ಲಿಷ್ ಆವೃತ್ತಿಯ ಹಕ್ಕುಗಳು ಇದರಲ್ಲಿ ಒಳಗೊಂಡಿಲ್ಲ.

ಈ ಬಗ್ಗೆ ‘ಫಾರ್ಸ್ ಫಿಲ್ಮ್ಸ್’ ಸಿಇಒ ಅಹಮದ್ ಗೋಲ್ಚಿನ್ ಮಾತನಾಡಿದ್ದಾರೆ.‘ಟಾಕ್ಸಿಕ್ ಮೂಲಕ ನಾವು ಗಡಿಗಳನ್ನು ಮೀರಿದ ಕಥೆಯನ್ನು ಹೇಳಲು ಹೊರಟಿದ್ದೇವೆ. ಈ ಚಿತ್ರದ ಕಥಾವಸ್ತು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಕನೆಕ್ಟ್ ಆಗಲಿದೆ ಎಂಬ ನಂಬಿಕೆ ನಮಗಿದೆ’ ಎಂದು ಅವರು ಹೇಳಿದ್ದಾರೆ. ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ವಿದೇಶಗಳಲ್ಲಿ ಸೃಷ್ಟಿಸಿದ ಸುನಾಮಿಯೇ ಈ ದೊಡ್ಡ ಮಟ್ಟದ ವ್ಯವಹಾರಕ್ಕೆ ತಳಹದಿಯಾಗಿದೆ. ಚೀನಾ, ಜಪಾನ್ ಮತ್ತು ನೇಪಾಳ ಹೊರತುಪಡಿಸಿ ವಿಶ್ವದಾದ್ಯಂತ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಬಿಡುಗಡೆ ಆಗಲಿದೆ.

View this post on Instagram

A post shared by TOXIC (@toxic_themovie)

ಗಮನಿಸಬೇಕಾದ ಇನ್ನೊಂದು ಅಂಶ ಏನೆಂದರೆ, ಈ ಸಿನಿಮಾದ ಮುಖ್ಯ ಟೀಸರ್ ಆಗಲಿ, ಟ್ರೇಲರ್ ಆಗಲಿ ಇನ್ನೂ ಬಿಡುಗಡೆ ಆಗಿಲ್ಲ. ಸದ್ಯಕ್ಕೆ ರಿಲೀಸ್ ಆಗಿರುವುದು ಹೀರೋ ಪಾತ್ರದ ಇಂಟ್ರಡಕ್ಷನ್ ಟೀಸರ್ ಮಾತ್ರ. ಅಷ್ಟರಲ್ಲಿಯೇ ಭಾರಿ ಮಟ್ಟದ ಕ್ರೇಜ್ ಸೃಷ್ಟಿಸಿದೆ. ಇನ್ನು, ಟ್ರೇಲರ್ ರಿಲೀಸ್ ಆದರೆ ‘ಟಾಕ್ಸಿಕ್’ ಸಿನಿಮಾದ ಹವಾ ಭರ್ಜರಿ ಆಗಲಿದೆ.

‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ‘ಟಾಕ್ಸಿಕ್’ ಸಿನಿಮಾ ನಿರ್ಮಾಣ ಆಗಿದೆ. ಮಾರ್ಚ್ 19ರಂದು ಅದ್ದೂರಿಯಾಗಿ ಈ ಚಿತ್ರ ತೆರೆಕಾಣಲಿದೆ. ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಘಟಾನುಘಟಿ ತಂತ್ರಜ್ಞರು ಈ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ‘ಐ ಲವ್ ಯಶ್’; ‘ಟಾಕ್ಸಿಕ್’ ಬಗ್ಗೆ ನಿರೀಕ್ಷೆ ಹೊರಹಾಕಿದ ಆಶಿಶ್ ಚಂಚ್ಲಾನಿ

ಯಶ್ ನಟಿಸಿದ್ದ ‘ಕೆಜಿಎಫ್: ಚಾಪ್ಟರ್ 2’ ವಿಶ್ವಾದ್ಯಂತ ಅಬ್ಬರಿಸಿತ್ತು. ಆ ಬಳಿಕ ಅವರು ಒಪ್ಪಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಮೇಲೆ ಮುಗಿಲೆತ್ತರದಷ್ಟು ನಿರೀಕ್ಷೆ ಮನೆ ಮಾಡಿದೆ. ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಟಾಕ್ಸಿಕ್’ ಎದುರು ‘ಧುರಂಧರ್ 2’ ಸಿನಿಮಾ ಕೂಡ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ