‘ಸರ್ಕಾರು ವಾರಿ ಪಾಟ’ ಸಿನಿಮಾ (Sarkaru Vaari Paata Movie) ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುತ್ತಿದೆ. ಮೇ 12 ರಂದು ರಿಲೀಸ್ ಆದ ಈ ಚಿತ್ರ ಕಲೆಕ್ಷನ್ ವಿಚಾರದಲ್ಲಿ ರಾಜಿ ಆಗುತ್ತಿಲ್ಲ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 200 ಕೋಟಿ ರೂಪಾಯಿ ಗಳಿಕೆ ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಈ ಮೂಲಕ ಹೊಸ ದಾಖಲೆ ಬರೆಯಲು ಸಿನಿಮಾ ರೆಡಿ ಆಗಿದೆ. ಮಹೇಶ್ ಬಾಬು (Mahesh Babu) ಚಿತ್ರ ಸೋಮವಾರದ ಪರೀಕ್ಷೆ ಕೂಡ ಪಾಸ್ ಆಗಿದೆ. ಸದ್ಯದ ಮಟ್ಟಿಗೆ ಮುಂದಿನ ದಿನಗಳಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ.
ಮಹೇಶ್ ಬಾಬು ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿತು. ಅನೇಕ ಕಡೆಗಳಲ್ಲಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಇದು ಸಿನಿಮಾ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಿತ್ತು. ಆದರೆ, ಮೊದಲ ದಿನ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಒಂದು ವರ್ಗದ ಜನರು ಈ ಚಿತ್ರವನ್ನು ಇಷ್ಟಪಟ್ಟರು. ಮೇ 13ರಂದು ಈ ಚಿತ್ರ 27.50 ಕೋಟಿ ರೂಪಾಯಿ, ಮೇ 14ರಂದು 28.84 ಕೋಟಿ ರೂಪಾಯಿ, ಮೇ 15ರಂದು 29.12 ಕೋಟಿ ಗಳಿಸಿ 150 ಕೋಟಿ ರೂಪಾಯಿ ಕ್ಲಬ್ ಸೇರಿತು.
ಇದನ್ನೂ ಓದಿ: ಮೂರು ದಿನಕ್ಕೆ ‘ಸರ್ಕಾರು ವಾರಿ ಪಾಟ’ ಸಿನಿಮಾ ಮಾಡಿದ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ
ಪ್ರತೀ ಚಿತ್ರಕ್ಕೆ ಸೋಮವಾರ ತುಂಬಾನೇ ಮುಖ್ಯವಾಗಿರುತ್ತದೆ. ವೀಕೆಂಡ್ನಲ್ಲಿ ಜನರು ಸಿನಿಮಾ ನೋಡಲು ಆದ್ಯತೆ ನೀಡುತ್ತಾರೆ. ಆದರೆ, ವಾರದ ಮೊದಲ ದಿನವಾದ ಸೋಮವಾರ ಸಿನಿಮಾ ವೀಕ್ಷಿಸೋಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕುವುದಿಲ್ಲ. ಆ ದಿನವೂ ಸಿನಿಮಾ ಒಳ್ಳೆಯ ಗಳಿಕೆ ಮಾಡಿದರೆ ಸಿನಿಮಾ ಗೆದ್ದಂತೆ. ಈ ಪರೀಕ್ಷೆಯಲ್ಲಿ ‘ಸರ್ಕಾರು ವಾರಿ ಪಾಟ’ ಸಿನಿಮಾ ಪಾಸ್ ಆಗಿದೆ. ಸೋಮವಾರ (ಮೇ 16) ಸಿನಿಮಾ 9.38 ಕೋಟಿ ಬಾಚಿಕೊಂಡಿದೆ. ಈ ಮೂಲಕ ಸಿನಿಮಾ ಕಲೆಕ್ಷನ್ 170.05 ಕೋಟಿ ರೂಪಾಯಿ ಆಗಿದೆ. ಶೀಘ್ರವೇ ಈ ಚಿತ್ರ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
#SVP WW Box Office
Day 1 – ₹ 75.21 cr Day 2 – ₹ 27.50 cr Day 3 – ₹ 28.84 cr Day 4 – ₹ 29.12 cr Day 5 – ₹ 9.38 cr Total – ₹ 170.05 cr
UNSTOPPABLE#MaheshBabu
— Manobala Vijayabalan (@ManobalaV) May 17, 2022
ಇದನ್ನೂ ಓದಿ: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಸರ್ಕಾರು ವಾರಿ ಪಾಟ’; ಮಹೇಶ್ ಬಾಬು ಸಿನಿಮಾ ದಾಖಲೆ
‘ಸರ್ಕಾರು ವಾರಿ ಪಾಟ’ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಅವರು ಕಲೆಕ್ಷನ್ ಲೆಕ್ಕಾಚಾರ ನೀಡಿದ್ದಾರೆ. ಹೆಚ್ಚಿನ ಕಲೆಕ್ಷನ್ ಆಂಧ್ರಪ್ರದೇಶ ಹಾಗೂ ತೆಲಂಗಾಣ ಭಾಗದಿಂದ ಆಗುತ್ತಿದೆ. ವಿದೇಶಗಳಲ್ಲೂ ಚಿತ್ರವನ್ನು ಫ್ಯಾನ್ಸ್ ನೋಡುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ತೆಲುಗಿನ ‘ಆಚಾರ್ಯ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿದೆ. ಇದು ‘ಸರ್ಕಾರು ವಾರಿ ಪಾಟ’ ಸಿನಿಮಾಗೆ ಸಹಕಾರಿ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.