AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತಿಯಿಂದ ಹೆಚ್ಚಿತು ಅಶಾಂತಿ; ಚಿತ್ರರಂಗ ತೊರೆದೇ ಬಿಟ್ಟ ನಟಿ

ಬಿಗ್ ಬಾಸ್ ಹಿಂದಿ ಸೀಸನ್ 17 ರ ಸ್ಪರ್ಧಿ ಹಾಗೂ ನಟಿ ಸೋನಿಯಾ ಬನ್ಸಲ್ ಅವರು ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ಹಣ ಮತ್ತು ಖ್ಯಾತಿಗಿಂತ ಆಂತರಿಕ ಶಾಂತಿ ಮುಖ್ಯ ಎಂದು ಅವರು ಹೇಳಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಕಂಡರೂ ಶಾಂತಿ ಸಿಗದಿರುವುದು ಅವರ ನಿರ್ಧಾರಕ್ಕೆ ಕಾರಣ.ಈಗ ಅವರು ಆಧ್ಯಾತ್ಮಿಕತೆಯತ್ತ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

ಖ್ಯಾತಿಯಿಂದ ಹೆಚ್ಚಿತು ಅಶಾಂತಿ; ಚಿತ್ರರಂಗ ತೊರೆದೇ ಬಿಟ್ಟ ನಟಿ
ಸೋನಿಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 07, 2025 | 10:54 AM

Share

‘ಬಿಗ್ ಬಾಸ್ ಹಿಂದಿ ಸೀಸನ್ 17’ (Bigg Boss) ಸ್ಪರ್ಧಿ ಹಾಗೂ ನಟಿ ಸೋನಿಯಾ ಬನ್ಸಲ್ ಅವರು ಈಗ ಚಿತ್ರರಂಗ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ನಟನೆಯಿಂದ ದೂರ ಹೋಗಲು ಅವರು ಕಾರಣ ನೀಡಿದ್ದಾರೆ. ಚಿತ್ರರಂಗದಿಂದ ಅವರಿಗೆ ಖ್ಯಾತಿ ಏನೋ ಸಿಕ್ಕಿತು. ಆದರೆ, ಶಾಂತಿ ಸಿಕ್ಕಿಲ್ಲ ಎಂಬುದು ಅವರ ಅಭಿಪ್ರಾಯ ಆಗಿದೆ. ಅವರ ಮಾತನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ನಟಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.

ಚಿತ್ರರಂಗಕ್ಕೆ ಬಂದು ಖ್ಯಾತಿ ಪಡೆಯಬೇಕು ಎಂದು ಅಂದುಕೊಳ್ಳುವವರು ಕೆಲವರು. ಇನ್ನೂ ಕೆಲವರು ಚಿತ್ರರಂಗದಲ್ಲಿ ಖ್ಯಾತಿ ಸಿಕ್ಕ ಹೊರತಾಗಿಯೂ ನಟನೆಯಲ್ಲಿ ಮುಂದುವರೆಯೋದಿಲ್ಲ. ಇದಕ್ಕೆ ನಾನಾ ಕಾರಣ ನೀಡುತ್ತಾರೆ. ಕೆಲವರಿಗೆ ಕಿರುಕುಳ ಸಿಕ್ಕಿರುತ್ತದೆ. ಇನ್ನೂ ಕೆಲವರಿಗೆ ಖ್ಯಾತಿ ಸಿಕ್ಕ ಹೊರತಾಗಿಯೂ ಆಫರ್​ಗಳು ಬಂದಿರೋದಿಲ್ಲ. ನಟಿ ಸೋನಿಯಾ ಬನ್ಸಲ್​ಗೆ ಆಫರ್ ಸಿಕ್ಕಿದೆ. ಆದರೆ, ಶಾಂತಿ ಇಲ್ಲ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸೋನಿಯಾ ಮಾತನಾಡಿದರು. ‘ಹಣ, ಖ್ಯಾತಿ ಹಾಗೂ ಜನಪ್ರಿಯತೆ ಪಡೆದುಕೊಳ್ಳುವ ಭರದಲ್ಲಿ ನನ್ನನ್ನು ನಾನು ಕಳೆದುಕೊಂಡೆ. ನನಗೆ ಶಾಂತಿ ಅನ್ನೋದು ಸಿಗಲೇ ಇಲ್ಲ. ಶಾಂತಿ ಇಲ್ಲ ಎಂದಮೇಲೆ ಹಣ ಇದ್ದು ಏನು ಪ್ರಯೋಜನ? ಹೊರಗೆ ಎಲ್ಲವೂ ಇದ್ದು ಒಳಗೆ ಖಾಲಿ ಎಂದರೆ ಏನು ಮಾಡೋಕೆ ಆಗುತ್ತದೆ? ಅದು ನಿಜಕ್ಕೂ ಇರಲು ಸಾಧ್ಯವಾಗದ ಜಾಗ’ ಎಂದಿದ್ದಾರೆ ಅವರು.

ಇದನ್ನೂ ಓದಿ
Image
ಆ ಒಂದು ಘಟನೆಯಿಂದ ಅಂಬಿಗೆ ಅಣ್ಣಾವ್ರ ಮೇಲಿನ ಗೌರವ ಹೆಚ್ಚಿತ್ತು
Image
‘ಎಲ್ಲರಿಗೂ ಒಂದೇ ರೀತಿಯ ಸಂಭಾವನೆ’; ಸಮಂತಾ ಹೊಸ ನಿಯಮ
Image
ಪಾಕ್ ಉಗ್ರ ನೆಲೆಗಳ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್; ಉಘೇ ಎಂದ ಬಾಲಿವುಡ್
Image
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ

ಹಾಗಾದರೆ ನಟಿ ಜೀವನಕ್ಕಾಗಿ ಏನು ಮಾಡುತ್ತಾರೆ? ಅದಕ್ಕೂ ಅವರ ಬಳಿ ಉತ್ತರ ಇದೆ. ‘ನಾನು ಜೀವನದ ಪಾಠ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಅಂದರೆ, ಆಧ್ಯಾತ್ಮದ ಆಲೋಚನೆಗಳನ್ನು ಅವರು ಜನರಿಗೆ ತಲುಪಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಿನಿಮಾಗಳು ಸೋಲುತ್ತಿರುವುದೇಕೆ? ಚಿತ್ರರಂಗದ ಹುಳುಕು ತೆರೆದಿಟ್ಟ ಆಮಿರ್ ಖಾನ್

‘ನಾಟಿ ಗ್ಯಾಂಗ್’ ಸಿನಿಮಾದಿಂದ ಸೋನಿಯಾ ಬನ್ಸಲ್ ಅವರು ಬಣ್ಣದ ಬದಕು ಆರಂಭಿಸಿದರು. ಆ ಬಳಿಕ ಅವರು, ‘ಡುಬ್ಕಿ’, ‘ಗೇಮ್ 100 ಕ್ರೋರ್ ಕಾ’, ‘ಶೋರ್ವೀರ್’ ರೀತಿಯ ಸಿನಿಮಾ ಮಾಡಿದರು. ಅವರು ‘ಧೀರ’ ಹೆಸರಿನ ತೆಲುಗು ಸಿನಿಮಾ ಮಾಡಿದರು. 2023ರಲ್ಲಿ ಸಲ್ಮಾನ್ ಖಾನ್ ಅವರು ನಡೆಸಿಕೊಡೋ ‘ಬಿಗ್ ಬಾಸ್’ನಲ್ಲಿ ಭಾಗವಹಿಸಿದರು.  ಮೊದಲ ವಾರವೇ ಅವರು ಮನೆಯಿಂದ ಹೊರಹೋಗಬೇಕಾಯಿತು. ಇದು ಅವರಿಗೆ ಆಘಾತ ತಂದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು