ಈ ಸೆಲೆಬ್ರಿಟಿಗಳಲ್ಲಿ ಆದ ಬದಲಾವಣೆ ಎಲ್ಲರ ಊಹೆಗೆ ಮೀರಿದ್ದು..
ಸೆಲೆಬ್ರಿಟಿಗಳ ಬಾಲ್ಯದ ಫೋಟೋ ಸಾಕಷ್ಟು ವೈರಲ್ ಆಗಿರುತ್ತವೆ. ಅದೇ ರೀತಿ ಅವರು ಇಂಡಸ್ಟ್ರಿಗೆ ಕಾಲಿಟ್ಟಾಗ ಹೇಗಿದ್ದರು, ಈಗ ಹೇಗಿದ್ದಾರೆ ಎನ್ನುವ ಹೋಲಿಕೆ ಮಾಡಲಾಗುತ್ತದೆ. ಆ ಬಗ್ಗೆ ಇಲ್ಲಿದೆ ವಿವರ.

ಚಿತ್ರರಂಗಕ್ಕೆ ಬಂದ ಅನೇಕ ಹೀರೋಯಿನ್ಗಳು ಯಶಸ್ಸು ಪಡೆಯುತ್ತಾರೆ. ಇನ್ನೂ ಕೆಲವರಿಗೆ ಗೆಲುವು ಸಿಗುವುದಿಲ್ಲ. ಕೆಲವರು ರಾತ್ರೋರಾತ್ರಿ ಹಿಟ್ ಆದರೆ, ಇನ್ನೂ ಕೆಲ ಸೆಲೆಬ್ರಿಟಿಗಳು (Celebrity) ವರ್ಷ ಕಳೆದಂತೆ ಗೆಲುವು ಪಡೆಯುತ್ತಾರೆ. ವರ್ಷ ಕಳೆದಂತೆ ಹೀರೋಯಿನ್ ಮುಖದಲ್ಲಿ, ದೇಹದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಈ ರೀತಿ ಬದಲಾವಣೆ ಕಂಡ ಸಾಕಷ್ಟು ಸೆಲೆಬ್ರಿಟಿಗಳು ಇದ್ದಾರೆ. ಗ್ಲಾಮರ್ ಹೆಚ್ಚಿಸಿಕೊಂಡು ಎಲ್ಲರ ಹುಬ್ಬೇರಿಸುವಂತೆ ಮಾಡಿದವರು ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು 2016ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಕಿರಿಕ್ ಪಾರ್ಟಿ’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದ ಮೂಲಕ ಅವರು ಗೆದ್ದು ಬೀಗಿದರು. ರಶ್ಮಿಕಾ ಮಂದಣ್ಣ ಆರಂಭದಲ್ಲಿ ಗ್ಲಾಮರಸ್ ಆಗಿ ಇರಲಿಲ್ಲ. ಈಗ ಅವರಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಸಖತ್ ಗ್ಲಾಮರಸ್ ಆಗಿ ಕಾಣಿಸುತ್ತಾರೆ. ಫಿಸಿಕಲಿ ಅವರು ಸಾಕಷ್ಟು ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದಾರೆ.
ನಯನತಾರಾ
ನಯನತಾರಾ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಲೇಡಿ ಸೂಪರ್ಸ್ಟಾರ್ ಎಂದೇ ಅವರು ಫೇಮಸ್. ಅವರು ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಬ್ಯುಸಿ ಇದ್ದಾರೆ. ಅವರು ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಸಾಕಷ್ಟು ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದಾರೆ. ಅವರು ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುತ್ತಾರೆ. ಜಿಮ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ.
ಸಮಂತಾ
ಮೊದಲ ಚಿತ್ರದಲ್ಲಿ ನೋಡಿರುವುದಕ್ಕೂ ಸಮಂತಾ ಅವರನ್ನು ಈಗ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಅವರು ಮುಖ ಮೊದಲು ಊದಿಕೊಂಡಿತ್ತು. ಆ ಬಳಿಕ ಅವರು ಫಿಟ್ ಆಗೋಕೆ ಜಿಮ್ ಮಾಡಿದರು. ಈಗ ಸಖತ್ ಫಿಟ್ ಆಗಿದ್ದಾರೆ. ಅವರು ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪವೂ ಇದೆ.
ಕಾಜಲ್ ಅಗರ್ವಾಲ್
ನಟಿ ಕಾಜಲ್ ಅಗರ್ವಾಲ್ ಚಿತ್ರರಂಗದಲ್ಲಿ ಅಷ್ಟಾಗಿ ಬ್ಯುಸಿ ಇಲ್ಲ. ಪತಿ, ಮಕ್ಕಳ ಜೊತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಕಾಜಲ್ ಹಿಂದಿ ಹಾಗೂ ಸೌತ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಈಗ ಸಖತ್ ಹಾಟ್ ಆಗಿದ್ದಾರೆ.
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ ಅವರು ಮೊದಲು ಸಖತ್ ದಪ್ಪ ಇದ್ದರು. ಆ ಬಳಿಕ ಅವರು ಜಿಮ್ ಮಾಡಿ ತೆಳ್ಳಗಾದರು. ಅವರು ಗ್ಲಾಮರ್ ಅವತಾರದಲ್ಲಿ ಮಿಂಚಿದ್ದಾರೆ. ಈಗ ಅವರ ದೇಹದ ತೂಕ ಮತ್ತೆ ಹೆಚ್ಚಿದೆ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ.
ಇದನ್ನೂ ಓದಿ: ಹಬ್ಬದ ಸಮಯದಲ್ಲಿ ಸಖತ್ ಬೋಲ್ಡ್ ಆದ ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ ಅವರ ಮೊದಲ ಸಿನಿಮಾ ನೋಡಿದವರಿಗೆ ಅಚ್ಚರಿ ಆಗೋದು ಗ್ಯಾರಂಟಿ. ಈಗ ಅವರು ಸಖತ್ ಹಾಟ್ ಆಗಿದ್ದಾರೆ. ಬೋಲ್ಡ್ ಫೋಟೋ ಹಾಗೂ ಸಿನಿಮಾಗಳ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಾ ಇರುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



