ಸೀತಾಗೆ ಗೊತ್ತಾಗಿ ಹೋಯಿತು ಸಿಹಿಯ ಸಾವಿನ ವಿಷಯ; ಮುಂದೇನು?
ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಸಾವಿನ ರಹಸ್ಯ ಈಗ ಸೀತೆಗೆ ಗೊತ್ತಾಗಿದೆ. ಭಾರ್ಗವಿಯು ಸೀತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾಳೆ. ಈ ಸುದ್ದಿಯಿಂದ ಸೀತೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದು ಕುತೂಹಲಕಾರಿ. ಅಶೋಕನ ಪೋಷಕರ ಸಾವಿಗೂ ಭಾರ್ಗವಿ ಸಂಬಂಧ ಹೊಂದಿದ್ದಾಳೆ ಎಂದು ತಿಳಿದು ಬಂದಿದೆ. ಈ ಘಟನೆಗಳು ಧಾರಾವಾಹಿಯಲ್ಲಿ ಮತ್ತಷ್ಟು ತಿರುವುಗಳನ್ನು ತರುವ ಸಾಧ್ಯತೆ ಇದೆ.

‘ಸೀತಾ ರಾಮ’ (Seetha Raama) ಧಾರಾವಾಹಿ ಕತೆ ಲಯ ತಪ್ಪಿದೆ ಎಂದು ಕೆಲವರು ಆರೋಪ ಮಾಡುತ್ತಿರೋದನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ಕಾಣುತ್ತಾ ಇರಬಹುದು. ಆದರೆ, ಈ ಧಾರಾವಾಹಿಯ ಕಟ್ಟಾಭಿಮಾನಿಗಳು ಧಾರಾವಾಹಿ ಯಾವ ರೀತಿ ಮೂಡಿ ಬಂದರೂ ನೋಡುತ್ತಿದ್ದಾರೆ. ಸಿಹಿಯನ್ನು ಸಾಯಿಸುವ ಮೂಲಕ ಧಾರಾವಾಹಿಗೆ ದೊಡ್ಡ ತಿರುವು ನೀಡಲಾಯಿತು. ಆದರೆ, ಇದು ಅನೇಕರಿಗೆ ಇಷ್ಟ ಆಗಿರಲೇ ಇಲ್ಲ. ಇಷ್ಟು ದಿನವಾದರೂ ಸೀತಾಗೆ ಸಿಹಿಯ ಸಾವಿನ ರಹಸ್ಯ ಗೊತ್ತಿರಲಿಲ್ಲ. ಆದರೆ, ಈಗ ಅದು ತಿಳಿಯುವ ಸಮಯ ಬಂದಿದೆ.
ಧಾರಾವಾಹಿಯ ವಿಲನ್ ಎನಿಸಿಕೊಂಡಿರುವ ಭಾರ್ಗವಿಯು ಹೇಗಾದರೂ ಮಾಡಿ ಸೀತಾಳನ್ನು ಮಟ್ಟ ಹಾಕುವ ಪ್ರಯತ್ನದಲ್ಲಿ ಇದ್ದಾಳೆ. ಈ ಪ್ರಯತ್ನದಲ್ಲಿ ಅವಳು ಕೆಲವು ಸಮಯದಲ್ಲಿ ಯಶಸ್ಸು ಕಂಡಿದ್ದೂ ಇದೆ. ಸಿಹಿ ಸತ್ತ ವಿಚಾರವನ್ನು ಸೀತಾಗೆ ಹೇಳಬೇಕು ಎಂದು ಭಾರ್ಗವಿ ಅನೇಕ ಬಾರಿ ಪ್ರಯತ್ನಪಟ್ಟಿದ್ದನ್ನು ನೀವು ಕಾಣಬಹುದು. ಹಾಗೆ ಹೇಳಿದರೆ ಸೀತಾ ಮತ್ತೆ ಹುಚ್ಚಿಯಾಗಿ ಮಾರ್ಪಾಡಾಗುತ್ತಾಳೆ ಅನ್ನೋದು ಅವಳ ಆಲೋಚನೆ. ಆದರೆ, ಪ್ರತಿ ಹಂತದಲ್ಲು ಇದಕ್ಕೆ ರಾಮ್ ಬ್ರೇಕ್ ಹಾಕುತ್ತಾ ಬರುತ್ತಿದ್ದ. ಈಗ ಸಿಹಿಯ ಸಾವಿನ ವಿಚಾರ ಗೊತ್ತಾಗಿ ಹೋಗಿದೆ. ಆಕೆಯು ಹೇಗೆ ರಿಯಾಕ್ಟ್ ಮಾಡುತ್ತಾಳೆ ಎಂಬುದರ ಪ್ರೋಮೋ ಹಂಚಿಕೊಳ್ಳಲಾಗಿದೆ.
ಅಶೋಕನ ತಂದೆ-ತಾಯಿ ಸಾವಿಗೆ ರಾಮನ ಚಿಕ್ಕಪ್ಪ ಸತ್ಯ ಕಾರಣ ಎಂದು ಎಲ್ಲರೂ ಅಂದುಕೊಂಡಿದ್ದರು. ಇದನ್ನು ಸುಳ್ಳು ಮಾಡುವ ಪ್ರಯತ್ನದಲ್ಲಿ ಸತ್ಯ ಇದ್ದಾನೆ. ಈ ಕಾರಣಕ್ಕೆ ಆತ ನೇರವಾಗಿ ಭಾರ್ಗವಿಯ ಹೆಸರನ್ನು ತೆಗೆದುಕೊಂಡಿದ್ದಾನೆ. ಇದರಿಂದ ಸಿಟ್ಟಾದ ಭಾರ್ಗವಿಯು ಕೋಪಗೊಂಡಿದ್ದಾಳೆ ಮತ್ತು ಕೂಗಾಡಿದ್ದಾಳೆ.
View this post on Instagram
‘ಈ ಮೊದಲು ಸಿಹಿಯ ಸಾವಿಗೆ ಭಾರ್ಗವಿ ಕಾರಣ ಎಂದು ಅಶೋಕ ಹೇಳಿದ್ದ, ಈಗ ಇವರ ಸಾವಿನ ಹೊಣೆಯನ್ನೂ ನನಗೆ ಕಟ್ಟಲಾಗುತ್ತಿದೆಯೇ ಎಂಬರ್ಥದಲ್ಲಿ’ ಭಾರ್ಗವಿ ಕೂಗಾಡಿದಳು. ಇದನ್ನು ಅಲ್ಲೇ ಇದ್ದ ಸೀತಾ ಕೇಳಿಕೊಂಡಿದ್ದಾಳೆ. ‘ಚಿಕ್ಕಿ, ಸಿಹಿ ಸತ್ತು ಹೋಗಿದ್ದಾಳಾ’ ಎಂದು ಶಾಕ್ನಲ್ಲಿ ಕೇಳಿದ್ದಾಳೆ ಅವಳು. ಈ ವಿಚಾರ ಸೀತಾಗೆ ತಿಳಿದರೆ ಆಕೆ ಹುಚ್ಚಿ ಆಗುವ ಸಾಧ್ಯತೆ ಇದೆ. ಈಗ ಎಲ್ಲರೂ ಆಕೆಯ ಮನ ಒಲಿಸುತ್ತಾರೆ ಎಂಬುದುನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಸೀತಾ ರಾಮ’: ಸಿಹಿ ಆತ್ಮವೇ ಹೆದರಿ ಮನೆಬಿಟ್ಟು ಹೋದಾಗ.. ವೀಕ್ಷಕರಲ್ಲಿ ಮೂಡಿದೆ ಅಸಮಾಧಾನ
ಈಗಾಗಲೇ ಸುಬ್ಬಿಯು ಸಿಹಿ ಅಲ್ಲ ಎಂಬ ಅನುಮಾನ ಸೀತಾಗೆ ಬಂದಿದೆ. ಇದಕ್ಕೆ ಆಕೆ ನಡೆದುಕೊಳ್ಳುತ್ತಿರುವ ರೀತಿಯೇ ಕಾರಣ. ಮುಂದೇನು ಎನ್ನುವ ಪ್ರಶ್ನೆ ಕೂಡ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







