ವಿಜಯ್​ ಹೊಸ ಸಿನಿಮಾ ಘೋಷಣೆ, ಅಭಿಮಾನಿಗಳ ಕಣ್ಣೀರು

Thalapathy Vijay: ದಳಪತಿ ವಿಜಯ್ ಸಿನಿಮಾ ಘೋಷಣೆಯಾದರೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಅಂತೆಯೇ ವಿಜಯ್​ರ ಸಿನಿಮಾ ಇಂದು ಘೋಷಣೆ ಆಗಿದೆ. ಆದರೆ ಅಭಿಮಾನಿಗಳು ಸಂಭ್ರಮ ಪಡುವ ಬದಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯ್​ ಹೊಸ ಸಿನಿಮಾ ಘೋಷಣೆ, ಅಭಿಮಾನಿಗಳ ಕಣ್ಣೀರು
Follow us
ಮಂಜುನಾಥ ಸಿ.
|

Updated on: Sep 13, 2024 | 7:10 PM

ಯಾವುದೇ ಸ್ಟಾರ್ ನಟರ ಹೊಸ ಸಿನಿಮಾ ಘೋಷಣೆಯಾದಾಗ ಅಭಿಮಾನಿಗಳು ಖುಷಿ ಪಡುತ್ತಾರೆ. ಅದರಲ್ಲೂ ದಳಪತಿ ವಿಜಯ್ ಹೊಸ ಸಿನಿಮಾ ಘೋಷಣೆ ಮಾಡಿದರೆ ಮುಗಿಯಿತು ಕತೆ, ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ವಿಜಯ್ ಅವರ ಸಿನಿಮಾ ಘೋಷಣೆಯನ್ನೂ ಸಹ ಹಬ್ಬದಂತೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಅಂತೆಯೇ ಇಂದು (ಸೆಪ್ಟೆಂಬರ್ 13) ದಳಪತಿ ವಿಜಯ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ವಿಜಯ್ ಅಭಿಮಾನಿಗಳು ಮಾತ್ರ ವಿಜಯ್ ಸಿನಿಮಾ ಘೋಷಣೆಯಿಂದ ಖುಷಿಯಾಗಿಲ್ಲ ಬದಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣವೂ ಇದೆ.

ವಿಜಯ್ ತಮ್ಮ 69ನೇ ಸಿನಿಮಾವನ್ನು ಇಂದು ಘೋಷಣೆ ಮಾಡಿದ್ದಾರೆ. ಈ ಸಿನಿಮಾವನ್ನು ಕನ್ನಡದ ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ. ಸಿನಿಮಾ ಘೋಷಣೆಯನ್ನು ವಿಜಯ್​ರ ಇತರೆ ಸಿನಿಮಾಗಳ ವಿಡಿಯೋ ತುಣುಕುಗಳನ್ನು ಬಳಸಿ ಮಾಡಲಾಗಿದೆ. ವಿಜಯ್ ಸಿನಿಮಾ ಘೋಷಣೆಯೇನೋ ಆಗಿದೆ. ಆದರೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ:ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಕನ್ನಡ ನಿರ್ಮಾಣ ಸಂಸ್ಥೆಯಿಂದ ಬಂಡವಾಳ; ಟೀಸರ್ ರಿಲೀಸ್

ಕಾರಣವೆಂದರೆ, ವಿಜಯ್​ರ ಈ 69ನೇ ಸಿನಿಮಾ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ಸಕ್ರಿಯ ರಾಜಕೀಯಕ್ಕೆ ಧುಮುಕಿರುವ ವಿಜಯ್​, ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿದ್ದಾರೆ. ಹಾಗಾಗಿ ಸಿನಿಮಾಗಳಿಗೆ ಪೂರ್ಣ ವಿರಾಮವಿಟ್ಟು ವಿಜಯ್ ತಮಿಳುನಾಡಿನ ಸಕ್ರಿಯ ರಾಜಕೀಯಕ್ಕೆ ಧುಮುಕಲಿದ್ದಾರೆ. ಇದೇ ಕಾರಣಕ್ಕೆ ಈ ಸಿನಿಮಾದ ಬಳಿಕ ವಿಜಯ್ ಇನ್ನು ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ವಿಜಯ್ ಅಭಿಮಾನಿಗಳು, ಹೊಸ ಸಿನಿಮಾ ಘೋಷಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಘೋಷಣೆಯಲ್ಲಿಯೂ ಸಹ ಇದು ವಿಜಯ್​ರ ಕೊನೆಯ ಸಿನಿಮಾ ಎಂದೇ ಬಂಬಿಸಲಾಗಿದೆ.

ಅಂದಹಾಗೆ ಈ ಹೊಸ ಸಿನಿಮಾದಲ್ಲಿ ವಿಜಯ್, ಸುಮಾರು 20 ವರ್ಷಗಳ ಬಳಿಕ ನಟಿ ಸಿಮ್ರನ್ ಜೊತೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿಮ್ರನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಲಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ವಿಜಯ್ ನಟನೆಯ ‘ಗೋಟ್’ ಸಿನಿಮಾ ಬಿಡುಗಡೆ ಆಗಿದ್ದು, ಮಿಶ್ರ ವಿಮರ್ಶೆಗಳ ನಡುವೆಯೂ ಸಹ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ಕೊಲೆ ಮಾಡಿದವನಿಗೆ 2 ನಿಮಿಷ ಬಿಸಿಲಲ್ಲಿ ನಿಂತುಕೊಳ್ಳಲಾಗದೇ? ಶಶಿಕುಮಾರ್
ಕೊಲೆ ಮಾಡಿದವನಿಗೆ 2 ನಿಮಿಷ ಬಿಸಿಲಲ್ಲಿ ನಿಂತುಕೊಳ್ಳಲಾಗದೇ? ಶಶಿಕುಮಾರ್
ಪಂತ್​ನ ಔಟ್ ಮಾಡಿದ ಬಳಿಕ ಅಶ್ಲೀಲವಾಗಿ ಸಂಭ್ರಮಿಸಿದ್ರಾ ಟ್ರಾವಿಸ್ ಹೆಡ್
ಪಂತ್​ನ ಔಟ್ ಮಾಡಿದ ಬಳಿಕ ಅಶ್ಲೀಲವಾಗಿ ಸಂಭ್ರಮಿಸಿದ್ರಾ ಟ್ರಾವಿಸ್ ಹೆಡ್
ಸಚಿನ್ ಡೆತ್​ನೋಟ್ ಪ್ರಕಾರ ಖರ್ಗೆ ತಮ್ಮ ಆಪ್ತ ಎಳೆದ ಗೆರೆ ದಾಟಲ್ಲ:ವಿಜಯೇಂದ್ರ
ಸಚಿನ್ ಡೆತ್​ನೋಟ್ ಪ್ರಕಾರ ಖರ್ಗೆ ತಮ್ಮ ಆಪ್ತ ಎಳೆದ ಗೆರೆ ದಾಟಲ್ಲ:ವಿಜಯೇಂದ್ರ
ಕಾಂಗ್ರೆಸ್ ಸೇರುವ ವದಂತಿಗಳ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಏನಂದ್ರು ನೋಡಿ
ಕಾಂಗ್ರೆಸ್ ಸೇರುವ ವದಂತಿಗಳ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಏನಂದ್ರು ನೋಡಿ
ಯಶಸ್ವಿ ಜೈಸ್ವಾಲ್ ಔಟಾ ಅಥವಾ ನಾಟೌಟಾ? ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು
ಯಶಸ್ವಿ ಜೈಸ್ವಾಲ್ ಔಟಾ ಅಥವಾ ನಾಟೌಟಾ? ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು
ಕಾಂಗ್ರೆಸ್ ಪಕ್ಷ ಸೇರುವ ಉದ್ದೇಶ ಸರ್ವಥಾ ಇಲ್ಲ: ಪ್ರತಾಪ್ ಸಿಂಹ
ಕಾಂಗ್ರೆಸ್ ಪಕ್ಷ ಸೇರುವ ಉದ್ದೇಶ ಸರ್ವಥಾ ಇಲ್ಲ: ಪ್ರತಾಪ್ ಸಿಂಹ
Video: ಸಾಲು ಸಾಲು ರಜೆ, ಮಂತ್ರಾಲಯಕ್ಕೆ ಹರಿದು ಬರುತ್ತಿರುವ ಭಕ್ತಸಾಗರ
Video: ಸಾಲು ಸಾಲು ರಜೆ, ಮಂತ್ರಾಲಯಕ್ಕೆ ಹರಿದು ಬರುತ್ತಿರುವ ಭಕ್ತಸಾಗರ