ಸ್ಪೇನ್​ನಲ್ಲಿ ನಯನತಾರಾ-ವಿಘ್ನೇಶ್​; ವೈರಲ್ ಆಯ್ತು ಬೋಲ್ಡ್ ಫೋಟೋ

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 9ರಂದು ಮದುವೆ ಆದರು. ತಮಿಳುನಾಡಿನ ಮಹಾಬಲಿ ಪುರಂನಲ್ಲಿ ಇಬ್ಬರೂ ವಿವಾಹವಾದರು. ಶಾರುಖ್​ ಖಾನ್​, ರಜನಿಕಾಂತ್ ಸೇರಿ ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಹಾಜರಿ ಹಾಕಿದ್ದರು.

ಸ್ಪೇನ್​ನಲ್ಲಿ ನಯನತಾರಾ-ವಿಘ್ನೇಶ್​; ವೈರಲ್ ಆಯ್ತು ಬೋಲ್ಡ್ ಫೋಟೋ
ನಯನತಾರಾ
TV9kannada Web Team

| Edited By: Rajesh Duggumane

Aug 15, 2022 | 4:17 PM

ನಯನತಾರಾ (Nayanthara) ಹಾಗೂ ವಿಘ್ನೇಶ್ ಶಿವನ್ ಇತ್ತೀಚೆಗೆ ಮದುವೆ ಆದರು. ಪ್ರೀತಿಸಿ ಮದುವೆ ಆದ ಈ ಜೋಡಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಹನಿಮೂನ್​​ಗೆ ವಿದೇಶಕ್ಕೆ ತೆರಳಿದ್ದ ನಯನತಾರಾ-ವಿಘ್ನೇಶ್​ ಮರಳಿ ಭಾರತಕ್ಕೆ ಬಂದಿದ್ದರು. ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈಗ ನಯನತಾರಾ ಮರಳಿ ವಿದೇಶಕ್ಕೆ ಹಾರಿದ್ದಾರೆ. ಪತಿ ವಿಘ್ನೇಶ್​ ಶಿವನ್ ಜತೆ ಸ್ಪೇನ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ವಿಘ್ನೇಶ್ (Vignesh Shivan) ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ಬೋಲ್ಡ್​ ಆಗಿದ್ದು ಬಗೆಬಗೆಯಲ್ಲಿ ಕಮೆಂಟ್​ಗಳು ಬರುತ್ತಿವೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 9ರಂದು ಮದುವೆ ಆದರು. ತಮಿಳುನಾಡಿನ ಮಹಾಬಲಿ ಪುರಂನಲ್ಲಿ ಇಬ್ಬರೂ ವಿವಾಹವಾದರು. ಶಾರುಖ್​ ಖಾನ್​, ರಜನಿಕಾಂತ್ ಸೇರಿ ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಹಾಜರಿ ಹಾಕಿದ್ದರು. ಈ ಮದುವೆಯ ಫೋಟೋಗಳು ವೈರಲ್ ಆದವು. ಈಗ ವಿಘ್ನೇಶ್​ ಹಾಗೂ ನಯನತಾರಾ ಸ್ಪೇನ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ.

ವಿಘ್ನೇಶ್ ಶಿವನ್ ಹಾಗೂ ನಯನತಾರಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರ ಮದುವೆ ವಿಡಿಯೋದ ಪ್ರಸಾರ ಹಕ್ಕನ್ನು ದೊಡ್ಡ ಮೊತ್ತಕ್ಕೆ ನೆಟ್​ಫ್ಲಿಕ್ಸ್ ಖರೀದಿ ಮಾಡಿದೆ. ಈ ವಿಡಿಯೋ ಒಟಿಟಿಯಲ್ಲಿ ಇನ್ನಷ್ಟೇ ಪ್ರಸಾರ ಕಾಣಬೇಕಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ನೆಟ್​ಫ್ಲಿಕ್ಸ್​ ಜೊತೆ ಒಪ್ಪಂದ ಆಗಿದ್ದರೂ ಕೂಡ ನಯನತಾರಾ ಮತ್ತು ವಿಘ್ನೇಶ್ ಶಿವನ್​ ಅವರು ತಮ್ಮ ಮದುವೆಯ ಕೆಲವು ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದರಿಂದ ನೆಟ್​​ಫ್ಲಿಕ್ಸ್​ ಸಂಸ್ಥೆಯವರು ಗರಂ ಆಗಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಅವರು ಡೀಲ್​ ಕ್ಯಾನ್ಸಲ್​ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಆದರೆ ಅದು ನಿಜವಲ್ಲ ಎಂದು ಸ್ವತಃ ನೆಟ್​ಫ್ಲಿಕ್ಸ್​ ಹೇಳಿತ್ತು.

ಇದನ್ನೂ ಓದಿ: ‘ನಯನತಾರಾಗೆ ನಾನು ಅವಮಾನ ಮಾಡಿಲ್ಲ’; ಸ್ಪಷ್ಟನೆ ನೀಡಿದ ಕರಣ್ ಜೋಹರ್

ಇದನ್ನೂ ಓದಿ

ಶಾರುಖ್​ ಖಾನ್​ ಅವರು ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್​ಮೆಂಟ್​’ ಬ್ಯಾನರ್​ ಮೂಲಕ ‘ಜವಾನ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಪ್ರಾಜೆಕ್ಟ್​ ಬಗ್ಗೆ ಸ್ವತಃ ಶಾರುಖ್​ ಖಾನ್​ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ನಯನತಾರಾ ನಾಯಕಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada