ಬದಲಾಯಿತು ವಿಜಯ್ ದೇವರಕೊಂಡ ಹೇರ್ಸ್ಟೈಲ್; ವೈರಲ್ ಆಗುತ್ತಿದೆ ಹೊಸ ಲುಕ್
‘ಲೈಗರ್’ನಲ್ಲಿ ಬಾಕ್ಸರ್ ಆಗಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ಗಾಗಿ ವಿಜಯ್ ಅವರು ಮುಂಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಉದ್ದ ಕೂದಲು ಎಲ್ಲರ ಗಮನ ಸೆಳೆದಿತ್ತು.
ನಟ ವಿಜಯ್ ದೇವರಕೊಂಡ (Vijay Devarakonda) ಟಾಲಿವುಡ್ನ ಹ್ಯಾಂಡ್ಸಮ್ ಹೀರೋಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರು ತಮ್ಮ ಲುಕ್ನಿಂದ ಹಲವರಿಗೆ ಇಷ್ಟವಾಗಿದ್ದಾರೆ. ವಿಜಯ್ ಅವರನ್ನು ಯುವತಿಯರು ಹೆಚ್ಚಾಗಿ ಫಾಲೋ ಮಾಡುತ್ತಾರೆ. ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ (Arjun Reddy) ವಿಜಯ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದರು. ಅವರ ಗಡ್ಡ ಬಿಟ್ಟು ಕಾಣಿಸಿಕೊಂಡಿದ್ದ ಲುಕ್ ಎಲ್ಲರಿಗೂ ಇಷ್ಟವಾಗಿತ್ತು. ಅದಾದ ಬಳಿಕ ಸಿನಿಮಾಗಳಿಗೆ ತಕ್ಕಂತೆ ಕೇಶ ವಿನ್ಯಾಸ ಮಾಡಿಕೊಂಡಿದ್ದರು ವಿಜಯ್. ಇತ್ತೀಚೆಗೆ ಅವರು ಉದ್ದ ಕೂದಲ ಬಿಟ್ಟು ಗಮನ ಸೆಳೆದಿದ್ದರು. ಆದರೆ, ಇದಕ್ಕೆ ಈಗ ದೇವರಕೊಂಡ ಕತ್ತರಿ ಹಾಕಿದ್ದಾರೆ. ಅವರ ಹೊಸ ಲುಕ್ ವೈರಲ್ ಆಗುತ್ತಿದೆ.
ವಿಜಯ್ ಅವರು ‘ಲೈಗರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ಲೈಗರ್’ನಲ್ಲಿ ಬಾಕ್ಸರ್ ಆಗಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ಗಾಗಿ ವಿಜಯ್ ಅವರು ಮುಂಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಉದ್ದ ಕೂದಲು ಎಲ್ಲರ ಗಮನ ಸೆಳೆದಿತ್ತು. ಆದರೆ, ಈಗ ಅವರು ಇದಕ್ಕೆ ಕತ್ತರಿ ಹಾಕಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ವಾಲಿಬಾಲ್ ಕಾರ್ಯಕ್ರಮಕ್ಕೆ ವಿಜಯ್ ಅವರು ಆಗಮಿಸಿದ್ದರು. ಈ ವೇಳೆ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಅವರ ಶಾರ್ಟ್ ಹೇರ್ ಗಮನ ಸೆಳೆದಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಹೊಸ ಲುಕ್ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.
ನಟ ವಿಜಯ್ ದೇವರಕೊಂಡ ‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು. ಅವರ ನಟನೆಯ ‘ಗೀತ ಗೋವಿಂದಂ’ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಆ ಬಳಿಕ ಅವರ ಹಲವು ಸಿನಿಮಾಗಳು ತೆರೆಗೆ ಬಂದವು. ಈಗ ಅವರು ‘ಲೈಗರ್’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ರೆಡಿ ಆಗಿದ್ದಾರೆ. ಈ ಚಿತ್ರದ ಮೂಲಕ ಅವರು ಬಾಲಿವುಡ್ಗೂ ಕಾಲಿಡುತ್ತಿದ್ದಾರೆ. ವಿಜಯ್ ಹಿಂದಿ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲೇ ಅದ್ಭುತ ಸ್ವಾಗತ ಸಿಕ್ಕಿತ್ತು. ಇತ್ತೀಚೆಗೆ ರಿಲೀಸ್ ಆದ ‘ಲೈಗರ್’ ಚಿತ್ರದ ಗ್ಲಿಂಪ್ಸ್ ವಿಡಿಯೋ ಭಾರೀ ಮೆಚ್ಚುಗೆ ಗಳಿಸಿಕೊಂಡಿತ್ತು. ಈ ಸಿನಿಮಾವನ್ನು ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ, ಹೀರೂ ಯಶ್ ಜೋಹರ್ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಈ ಸಿನಿಮಾದ ಬಜೆಟ್ 125 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕನ್ನಡದಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ.
ಇದನ್ನೂ ಓದಿ: ರಶ್ಮಿಕಾ ಜತೆಗಿನ ಮದುವೆಯ ಗಾಸಿಪ್ಗೆ ಕೊನೆಗೂ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ; ನಟ ಹೇಳಿದ್ದೇನು?
ರಶ್ಮಿಕಾ ಜತೆಗಿನ ಮದುವೆಯ ಗಾಸಿಪ್ಗೆ ಕೊನೆಗೂ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ; ನಟ ಹೇಳಿದ್ದೇನು?