ಮೆಟ್ಟಿಲಿನಿಂದ ಜಾರಿ ಬಿದ್ದ ವಿಜಯ್ ದೇವರಕೊಂಡ; ಕ್ಯಾಮೆರಾ ಆಫ್ ಮಾಡಿಸಿದ ಟೀಮ್

ನಟ ವಿಜಯ್ ದೇವರಕೊಂಡ ಅವರು ಕೇವಲ ಟಾಲಿವುಡ್​ಗೆ ಸೀಮಿತವಾಗಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಫೇಮಸ್​ ಆಗಿದ್ದಾರೆ. ಹಾಗಾಗಿ ಅವರು ಮುಂಬೈನಲ್ಲಿ ಪ್ರಮೋಷನ್ ಮಾಡಿದ್ದಾರೆ. ತಮ್ಮ ಹೊಸ ಹಾಡಿನ ಪ್ರಚಾರಕ್ಕಾಗಿ ಒಂದು ಕಾಲೇಜಿಗೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ. ಮೆಟ್ಟಿಲಿನಿಂದ ವಿಜಯ್ ದೇವರಕೊಂಡ ಜಾರಿ ಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮೆಟ್ಟಿಲಿನಿಂದ ಜಾರಿ ಬಿದ್ದ ವಿಜಯ್ ದೇವರಕೊಂಡ; ಕ್ಯಾಮೆರಾ ಆಫ್ ಮಾಡಿಸಿದ ಟೀಮ್
ವಿಜಯ್ ದೇವರಕೊಂಡ
Follow us
ಮದನ್​ ಕುಮಾರ್​
|

Updated on: Nov 08, 2024 | 7:25 PM

ಟಾಲಿವುಡ್​ ಹೀರೋ ವಿಜಯ್ ದೇವರಕೊಂಡ ಅವರು ಬರೀ ತೆಲುಗು ಚಿತ್ರರಂಗಕ್ಕೆ ಸೀಮಿತ ಆಗಿಲ್ಲ. ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಇತ್ತೀಚೆಗೆ ಅವರು ಮುಂಬೈನಲ್ಲಿ ಪ್ರಮೋಷನ್ ಮಾಡಲು ತೆರಳಿದ್ದಾರೆ. ತಮ್ಮ ಹೊಸ ಹಾಡಿನ ಪ್ರಮೋಷನ್ ಸಲುವಾಗಿ ಮುಂಬೈನ ಒಂದು ಕಾಲೇಜಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮೆಟ್ಟಿಲುಗಳನ್ನು ಇಳಿಯುವಾಗ ಕಾಲ ಜಾರಿದ್ದಾರೆ. ಪಾಪರಾಜಿಗಳ ಕ್ಯಾಮೆರಾದಲ್ಲಿ ಆ ಸಂದರ್ಭದ ವಿಡಿಯೋ ಸೆರೆಯಾಗಿದೆ.

‘ಸಾಹಿಬಾ’ ಹಾಡಿನಲ್ಲಿ ವಿಜಯ್ ದೇವರಕೊಂಡ ಅವರು ನಟಿಸಿದ್ದಾರೆ. ಅವರ ಜೊತೆ ರಾಧಿಕಾ ಮದನ್ ತೆರೆ ಹಂಚಿಕೊಂಡಿದ್ದಾರೆ. ಸಿಂಗರ್ ಜಸ್ಲೀನ್ ರಾಯಲ್, ರಾಧಿಕಾ ಮದನ್, ವಿಜಯ್ ದೇವರಕೊಂಡ ಮುಂತಾದವರು ಜೊತೆಯಾಗಿ ಮುಂಬೈನ ಕಾಲೇಜಿನಲ್ಲಿ ಪ್ರಚಾರಕ್ಕೆ ತೆರಳಿದ್ದಾರೆ. ಕಾರ್ಯಕ್ರಮ ಮುಗಿಸಿ ಕಾಲೇಜಿನಿಂದ ಹೊರಗೆ ಬರುವಾಗ ವಿಜಯ್ ದೇವರಕೊಂಡ ಅವರು ಕಾಲು ಜಾರಿ ಬಿದ್ದಿದ್ದಾರೆ.

ವಿಜಯ್ ದೇವರಕೊಂಡ ಅವರು ಕಾಲೇಜಿಗೆ ಭೇಟಿ ನೀಡಿದಾಗ ಪಾಪರಾಜಿಗಳು ಮುತ್ತಿಕೊಂಡಿದ್ದರು. ಮೆಟ್ಟಿಲುಗಳಿಂದ ಅವರು ಜಾರಿ ಬಿದ್ದಾಗ ವಿಜಯ್ ದೇವರಕೊಂಡ ಅವರ ತಂಡದವರು ಅಲರ್ಟ್​ ಆಗಿದ್ದಾರೆ. ನಟನ ಮುಜುಗರದ ಕ್ಷಣಗಳು ಸೆರೆಯಾಗಬಾರದು ಎಂಬ ಕಾರಣಕ್ಕೆ ಕೂಡಲೇ ಕ್ಯಾಮೆರಾ ಆಫ್​ ಮಾಡುವಂತೆ ಮನವಿ ಮಾಡಲಾಗಿದೆ. ಹಾಗಿದ್ದರೂ ಕೂಡ ಒಂದಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: ಗಾಯಗೊಂಡರೂ ಶೂಟಿಂಗ್ ನಿಲ್ಲಿಸುತ್ತಿಲ್ಲ ವಿಜಯ್ ದೇವರಕೊಂಡ; ಅಭಿಮಾನಿಗಳಲ್ಲಿ ಆತಂಕ

ಜಾರಿ ಬಿದ್ದರೂ ಕೂಡ ವಿಜಯ್ ದೇವರಕೊಂಡ ಅವರು ಗಲಿಬಿಲಿಗೊಂಡಿಲ್ಲ. ಕೂಡಲೇ ಅವರು ಎದ್ದು ನಿಂತಿದ್ದಾರೆ. ಅಕ್ಕ ಪಕ್ಕದಲ್ಲಿ ಇದ್ದ ಅವರ ತಂಡದವರು ಸಹಾಯಕ್ಕೆ ಬಂದಿದ್ದಾರೆ. ಬಳಿಕ ವಿಜಯ್ ದೇವರಕೊಂಡ ಅವರು ಐಷಾರಾಮಿ ಕಾರಿನಲ್ಲಿ ವಾಪಸ್ ತೆರಳಿದ್ದಾರೆ. ಸಿನಿಮಾ ಮಾತ್ರವಲ್ಲದೇ ಖಾಸಗಿ ಬದುಕಿನ ಕಾರಣದಿಂದಲೂ ಅವರ ಹೆಸರು ಆಗಾಗ ಕೇಳಿಬರುತ್ತದೆ. ಇತ್ತೀಚೆಗೆ ವಿಜಯ್ ದೇವರಕೊಂಡ ಅವರ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಹಬ್ಬ ಆಚರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ