‘ಲಿಯೋ’ ಚಿತ್ರದ ಟ್ರೇಲರ್ ರಿಲೀಸ್ ದಿನಾಂಕ ಘೋಷಣೆ; ಕರ್ನಾಟಕದಲ್ಲಿ ವಿಜಯ್ ಸಿನಿಮಾ ಬ್ಯಾನ್ ಆಗುತ್ತಾ?
ಈ ಮೊದಲು ‘ಜೈಲರ್’ ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬೆಂಗಳೂರಿನಲ್ಲೂ ಈ ಚಿತ್ರ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಂಡಿತ್ತು. ಎಲ್ಲವೂ ಸರಿಯಾಗೇ ಇದ್ದಿದ್ದರೆ ‘ಲಿಯೋ’ ಚಿತ್ರಕ್ಕೂ ಭರ್ಜರಿ ಬೇಡಿಕೆ ಸೃಷ್ಟಿ ಆಗಿರುತ್ತಿತ್ತು. ಆದರೆ, ಈಗ ಎದ್ದಿರುವ ಪ್ರತಿಭಟನೆ ಕಾವಿನಿಂದ ಸಿನಿಮಾಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರಕ್ಕೆ ಸಂಬಂಧಿಸಿ ಎದ್ದಿರುವ ಗಲಾಟೆ (Cauvery Water Dispute) ಸದ್ಯಕ್ಕೆ ಕಡಿಮೆ ಆಗುವ ಸೂಚನೆ ಸಿಗುತ್ತಿಲ್ಲ. ಇದಕ್ಕೆ ಸಂಬಂಧಿಸಿ ಪ್ರತಿಭಟನೆ ಹಾಗೂ ಬಂದ್ಗಳು ನಡೆದಿವೆ. ಇತ್ತೀಚೆಗೆ ತಮಿಳು ನಟ ಸಿದ್ದಾರ್ಥ್ ಅವರು ಬೆಂಗಳೂರಿಗೆ ಬಂದಾಗ ಅವಮಾನ ಎದುರಿಸಿದ್ದರು. ಅವರ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಹೀಗಿರುವಾಗಲೇ ತಮಿಳುನಾಡಿನಲ್ಲಿ ಕನ್ನಡದ ಚಿತ್ರಗಳನ್ನು ರಿಲೀಸ್ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಮಾತು ಅಲ್ಲಿಯವರಿಂದ ಕೇಳಿ ಬಂದಿದೆ. ತಮಿಳು ಸಿನಿಮಾಗಳನ್ನು (Tamil Cinema) ಕರ್ನಾಟಕದಲ್ಲಿ ಬ್ಯಾನ್ ಮಾಡಲು ಪ್ಲ್ಯಾನ್ ನಡೆದಿದೆ. ‘ಲಿಯೋ’ ಸಿನಿಮಾ (Leo Movie) ಕರ್ನಾಟಕದಲ್ಲಿ ಬ್ಯಾನ್ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದರ ಮಧ್ಯೆ ಸಿನಿಮಾದ ಟ್ರೇಲರ್ ರಿಲೀಸ್ ದಿನಾಂಕ ತಿಳಿಸಲಾಗಿದೆ.
ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಅಕ್ಟೋಬರ್ 19ರಂದು ರಿಲೀಸ್ ಆಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳಿನ ಜೊತೆಗೆ ಕನ್ನಡ, ತೆಲುಗು ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದಾರೆ. ‘ಕೈದಿ’, ‘ವಿಕ್ರಮ್’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು ಕೇವಲ 10 ತಿಂಗಳಲ್ಲಿ ‘ಲಿಯೋ’ ಚಿತ್ರದ ಕೆಲಸ ಮಾಡಿ ಮುಗಿಸಿದ್ದಾರೆ. ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಟ್ರೇಲರ್ ರಿಲೀಸ್ ದಿನಾಂಕ ತಿಳಿಸಲಾಗಿದೆ.
Your order is being prepared 😎#LeoTrailer is on its way! Get ready to enjoy your meal 🔥
Unga delivery partner @7screenstudio will deliver them on October 5th 😉#LeoTrailerFromOct5#Thalapathy @actorvijay sir @Dir_Lokesh @trishtrashers @anirudhofficial @duttsanjay… pic.twitter.com/xgHzueGWpJ
— Seven Screen Studio (@7screenstudio) October 2, 2023
ಅಕ್ಟೋಬರ್ 5ರಂದು ‘ಲಿಯೋ’ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಟ್ರೇಲರ್ ರಿಲೀಸ್ ದಿನಾಂಕದ ಬಗ್ಗೆ ಪೋಸ್ಟರ್ನಲ್ಲಿ ತಿಳಿಸಲಾಗಿದೆ. ಹಿಮದಲ್ಲಿ ದಳಪತಿ ವಿಜಯ್ ಅವರು ಹೈನಾ ಜೊತೆ ಕಾದಾಟ ಮಾಡಲು ರೆಡಿ ಆಗಿದ್ದಾರೆ. ಆ ರೀತಿಯಲ್ಲಿ ಪೋಸ್ಟರ್ ಇದೆ. ತಾವು ಟ್ರೇಲರ್ಗಾಗಿ ಕಾದಿರುವುದಾಗಿ ಅನೇಕರು ಬರೆದುಕೊಂಡಿದ್ದಾರೆ. ಕರ್ನಾಟಕದವರು ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ್ದಾರೆ. ತಮಿಳು ಸಿನಿಮಾಗಳನ್ನು ಬಿಡುಗಡೆ ಮಾಡೋಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಈ ಮೊದಲೇ ಹೇಳಿದ್ದಾರೆ. ಈ ಕಾರಣಕ್ಕೆ ‘ಲಿಯೋ’ ಸಿನಿಮಾ ಇಲ್ಲಿ ಬ್ಯಾನ್ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕಾವೇರಿ ಬಿಕ್ಕಟ್ಟಿನ ನಡುವೆ ಬಿಡುಗಡೆ ಆಗಲಿದೆ ‘ಲಿಯೋ’; ಏನಾಗಬಹುದು ಬಾಕ್ಸ್ ಆಫೀಸ್ ಭವಿಷ್ಯ?
ತಮಿಳು ಸಿನಿಮಾಗಳಿಗೆ ಕರ್ನಾಟಕದಲ್ಲಿ ಭರ್ಜರಿ ಮಾರುಕಟ್ಟೆ ಸೃಷ್ಟಿ ಆಗಿದೆ. ಈ ಮೊದಲು ರಿಲೀಸ್ ಆದ ‘ಜೈಲರ್’ ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬೆಂಗಳೂರಿನಲ್ಲೂ ಈ ಚಿತ್ರ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಂಡಿತ್ತು. ಎಲ್ಲವೂ ಸರಿಯಾಗೇ ಇದ್ದರೆ ‘ಲಿಯೋ’ ಚಿತ್ರಕ್ಕೂ ಭರ್ಜರಿ ಬೇಡಿಕೆ ಸೃಷ್ಟಿ ಆಗಿರುತ್ತಿತ್ತು. ಆದರೆ, ಈಗ ಎದ್ದಿರುವ ಪ್ರತಿಭಟನೆ ಕಾವಿನಿಂದ ಸಿನಿಮಾಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೇರಳದಲ್ಲಿ ‘ಲಿಯೋ’ ಚಿತ್ರಕ್ಕೆ ಬಹಿಷ್ಕಾರ; ಫ್ಯಾನ್ಸ್ ಮಾಡಿದ ತಪ್ಪಿನಿಂದ ನಿರ್ಮಾಪಕರಿಗೆ ತೊಂದರೆ
‘ಲಿಯೋ’ ಚಿತ್ರವನ್ನು ‘ಸೆವೆನ್ ಸ್ಕ್ರೀನ್ ಸ್ಟುಡಿಯೋ’ ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಜೈಲರ್’ ಹಾಗೂ ‘ಜವಾನ್’ ಸಿನಿಮಾ ಮೂಲಕ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಈಗ ಮೂರನೇ ಗೆಲುವಿನ ನಿರೀಕ್ಷೆಯಲ್ಲಿ ಅವರಿದ್ದಾರೆ. ‘ಕೈದಿ’ ಹಾಗೂ ‘ವಿಕ್ರಮ್’ ಮೂಲಕ ಗೆಲುವು ಕಂಡ ಲೋಕೇಶ್ ಕನಗರಾಜ್ ಅವರು ಮತ್ತೊಂದು ಗೆಲುವು ಕಾಣುವ ಭರವಸೆಯಲ್ಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.