ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್ ಸಮಾರಂಭಕ್ಕೆ ರಿಯಾನಾ ಬಂದಿದ್ದರ ಹಿಂದಿದೆ ಬೇರೆ ಕಾರಣ
ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಪ್ರೀ-ವೆಡ್ಡಿಂಗ್ ಸಮಾರಂಭಕ್ಕೆ ಬಂದಿದ್ದ ವಿಶ್ವ ಪ್ರಸಿದ್ಧ ಗಾಯಕಿ ರಿಯಾನಾ ಅವರಿಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗಿದೆ. ಕೇವಲ ಈ ಸಂಭಾವನೆ ಹಣಕ್ಕಾಗಿ ರಿಯಾನಾ ಅವರು ಭಾರತಕ್ಕೆ ಬಂದಿದ್ದಲ್ಲ. ಈ ಭೇಟಿಯ ಹಿಂದೆ ಬಿಸ್ನೆಸ್ ಪ್ಲ್ಯಾನ್ ಇದೆ.

ಒಂದಷ್ಟು ದಿನಗಳ ಹಿಂದೆ ಅನಂತ್ ಅಂಬಾನಿ (Mukesh Ambani) ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭ ಗ್ರ್ಯಾಂಡ್ ಆಗಿ ನಡೆಯಿತು. ಗುಜರಾತ್ನ ಜಾಮ್ನಗರ್ನಲ್ಲಿ ನಡೆದ ಈ ಪ್ರೀ-ವೆಡ್ಡಿಂಗ್ (Anant Ambani Pre Wedding) ಸಮಾರಂಭಕ್ಕೆ ಬೇರೆ ಬೇರೆ ರಾಷ್ಟ್ರಗಳಿಂದ ಸೆಲೆಬ್ರಿಟಿಗಳು ಬಂದಿದ್ದರು. ಜಾಗತಿಕ ಮಟ್ಟದಲ್ಲಿ ಫೇಮಸ್ ಆಗಿರುವ ಬಲಿಷ್ಠ ಕಂಪನಿಗಳ ಸಿಇಒಗಳೆಲ್ಲ ಈ ಸಮಾರಂಭಕ್ಕೆ ಹಾಜರಿ ಹಾಕಿದ್ದರು. ವಿಶ್ವ ಪ್ರಸಿದ್ಧ ಪಾಪ್ ಗಾಯಕಿ ರಿಯಾನಾ (Rihanna) ಕೂಡ ಬಂದು ಸಂಗೀತ ಕಾರ್ಯಕ್ರಮ ನೀಡಿದರು. ಅದರೆ ಅವರು ಈ ಸಮಾರಂಭಕ್ಕೆ ಬಂದಿದ್ದರ ಹಿಂದೆ ಅಸಲಿ ಕಾರಣ ಬೇರೆಯೇ ಇದೆ ಎನ್ನಲಾಗುತ್ತಿದೆ.
ಮುಖೇಶ್ ಅಂಬಾನಿ ಹಾಗೂ ನಿತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಜುಲೈನಲ್ಲಿ ಅವರ ಮುದುವೆ ನಡೆಯಲಿದೆ. ಈ ಜೋಡಿಯ ಪ್ರೀ-ವೆಡ್ಡಿಂಗ್ ಸಮಾರಂಭಕ್ಕೆ ಬಂದಿದ್ದ ರಿಯಾನಾ ಅವರಿಗೆ ಬರೋಬ್ಬರಿ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗಿದೆ. ಕೇವಲ ಈ ಸಂಭಾವನೆ ಹಣಕ್ಕಾಗಿ ರಿಯಾನಾ ಅವರು ಭಾರತಕ್ಕೆ ಬಂದಿದ್ದಲ್ಲ. ಈ ಭೇಟಿಯ ಹಿಂದೆ ಬಿಸ್ನೆಸ್ ಪ್ಲ್ಯಾನ್ ಇದೆ.
ಇದನ್ನೂ ಓದಿ: 74 ಕೋಟಿ ರೂ. ಪಡೆದರೂ 2 ದಿನದ ಬಳಿಕ ಭಾರತದಲ್ಲಿ ಒಂದು ಕ್ಷಣವೂ ನಿಲ್ಲದ ರಿಯಾನಾ; ಕಾರಣ?
ಬೇರೆ ಸೆಲೆಬ್ರಿಟಿಗಳ ರೀತಿ ಗಾಯಕಿ ರಿಯಾನಾ ಕೂಡ ಬ್ಯೂಟಿ ಬ್ರ್ಯಾಂಡ್ ಹೊಂದಿದ್ದಾರೆ. ‘ಫೆಂಟಿ’ ಎಂಬುದು ಅವರ ಕಂಪನಿಯ ಹೆಸರು. ಈಗಾಗಲೇ ಅಮೆರಿಕ, ಇಂಗ್ಲೆಂಡ್, ಮೆಕ್ಸಿಕೋ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಇದರ ಮಾರಾಟ ಆಗುತ್ತಿದೆ. ಆದರೆ ಭಾರತದಲ್ಲಿ ಇನ್ನಷ್ಟೇ ಇದರ ವ್ಯವಹಾರ ಬೆಳೆಯಬೇಕಿದೆ. ಭಾರತದಲ್ಲಿ ‘ಸೆಫೋರಾ ಇಂಡಿಯಾ’ ಮಳಿಗೆಗಳ ಮೂಲಕ ‘ಫೆಂಟಿ’ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ‘ಸೆಫೋರಾ’ ಇರುವುದು ಅಂಬಾನಿ ಒಡೆತನದಲ್ಲಿ. ಅಂಬಾನಿಯವರ ರಿಲಯನ್ಸ್ ರಿಟೇಲ್ ಉದ್ಯಮದ ಜೊತೆ ಕೈ ಜೋಡಿಸುವ ಉದ್ದೇಶದಿಂದಲೇ ರಿಯಾನಾ ಅವರು ಅನಂತ್ ಅಂಬಾನಿಯ ಪ್ರೀ-ವೆಡ್ಡಿಂಗ್ ಸಮಾರಂಭಕ್ಕೆ ಬಂದಿದ್ದರು ಎಂದು ವರದಿ ಆಗಿದೆ.
ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಗೆ ಬಂದ ರಿಯಾನಾ ಜತೆ ವಿದೇಶದಿಂದ ಬಂತು 4 ಗಾಡಿ ಲಗೇಜ್
ಗಾಯಕಿ ರಿಯಾನಾ ಅವರು ಭಾರತಕ್ಕೆ ಬಂದಾಗ ಸಖತ್ ಸುದ್ದಿ ಆಯಿತು. ಕಾರಣ ಏನೆಂದರೆ, ಅವರು ಬರುವಾಗ 4 ದೊಡ್ಡ ಗಾಡಿಯಲ್ಲಿ ಲಗೇಜ್ ತಂದಿದ್ದರು. ಕೇವಲ ಎರಡು ದಿನಗಳ ಕಾಲ ಇಂಡಿಯಾದಲ್ಲಿ ಇರಲು ನಾಲ್ಕು ಗಾಡಿ ಲಗೇಜ್ ಯಾಕೆ ಎಂಬುದು ಎಲ್ಲರ ಪ್ರಶ್ನೆ ಆಗಿತ್ತು. ವರದಿಗಳ ಪ್ರಕಾರ, ತಮ್ಮ ವೇದಿಕೆ ಕಾರ್ಯಕ್ರಮಕ್ಕೆ ಬೇಕಾದ ಸಾಮಗ್ರಿಗಳನ್ನು ಕೂಡ ಅವರು ವಿದೇಶದಿಂದ ತಂದಿದ್ದರು ಎನ್ನಲಾಗಿದೆ. ರಿಯಾನಾ ಜೊತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಹಾಡಿ, ಕುಣಿದು ಎಂಜಾಯ್ ಮಾಡಿದರು. ಫೋಟೋ ತೆಗೆದುಕೊಂಡು ಸಂಭ್ರಮಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




