AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಲಕ್ಷಣಗಳು ದೇಹದಲ್ಲಿ ಕಂಡುಬಂದ್ರೆ ನಿಮಗೆ ಹೃದಯದಲ್ಲಿ ಬ್ಲಾಕೇಜ್ ಇರಬಹುದು ಎಚ್ಚರ!

ಕೋರೊನರಿ ಆರ್ಟರಿ ಡಿಸೀಸ್ ಅಥವಾ ಹೃದಯದ ಬ್ಲಾಕೇಜ್ ಎಂಬುದು ಏಕಾ ಏಕಿ ಉಂಟಾಗುವ ಆರೋಗ್ಯ ಸಮಸ್ಯೆ ಅಲ್ಲವೇ ಅಲ್ಲ. ಅಷ್ಟಕ್ಕೂ ಈ ರೋಗದ ಲಕ್ಷಣಗಳೇನು? ಯಾರಿಗೆ ಇದರಿಂದ ಅಪಾಯ ಹೆಚ್ಚು? ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಉಳಿಯಲು ನಾವೇನು ಮಾಡಬಹುದೆಂಬ ಮಾಹಿತಿ, ವೈದ್ಯರ ಅಭಿಪ್ರಾಯ ಇಲ್ಲಿದೆ.

ಈ ಲಕ್ಷಣಗಳು ದೇಹದಲ್ಲಿ ಕಂಡುಬಂದ್ರೆ ನಿಮಗೆ ಹೃದಯದಲ್ಲಿ ಬ್ಲಾಕೇಜ್ ಇರಬಹುದು ಎಚ್ಚರ!
ಸಾಂದರ್ಭಿಕ ಚಿತ್ರImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Mar 23, 2026 | 11:40 AM

Share

ಇತ್ತೀಚೆಗೆ ಹೃದಯ ಸಂಬಂಧ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದರಲ್ಲೂ ಹೃದಯಾಘಾತ ಕೇಸ್ಗಳು ಯುವಕರಲ್ಲೂ ಗಣನೀಯವಾಗಿ ಹೆಚ್ಚುತ್ತಿವೆ. ಈ ಹಾರ್ಟ್ ಅಟ್ಯಾಕ್ಗೆ ಹೃದಯದ ನರಗಳಲ್ಲಿ ಉಂಟಾಗುವ ಬ್ಲಾಕೇಜ್ ಕೂಡ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅಷ್ಟಕ್ಕೂ ಹೃದಯದಲ್ಲಿ ಬ್ಲಾಕೇಜ್ ಏಕೆ ಉಂಟಾಗುತ್ತದೆ? ಅದರ ಆರಂಭಿಕ ಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು? ಎಂಬುದನ್ನು ತಿಳಿದುಕೊಳ್ಳುವ ಅಗತ್ಯ ಇಂದಿಗಿದೆ.

ಹೃದಯದ ನರಗಳಲ್ಲಿ ಕೊಬ್ಬು (ಫ್ಯಾಟ್) ಅಥವಾ ಕೊಲೆಸ್ಟ್ರಾಲ್ ಶೇಖರೆಯಾಗುವುದರಿಂದ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ. ಇದರಿಂದ ಹೃದಯಕ್ಕೆ ಬೇಕಾದಷ್ಟು ರಕ್ತ ಮತ್ತು ಆಮ್ಲಜನಕ ಸಿಗದೆ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಕೋರೊನರಿ ಆರ್ಟರಿ ಡಿಸೀಸ್ ಎಂದು ಕರೆಯಲಾಗುತ್ತದೆ. ಇಲ್ಲಿ ತಿಳಿಯಬೇಕಾದ ಪ್ರಮುಖ ವಿಚಾರವೆಂದರೆ ಹೃದಯದಲ್ಲಿ ಬ್ಲಾಕೇಜ್ ಅಚಾನಕ್ ಆಗಿ ಉಂಟಾಗುವುದಿಲ್ಲ. ಬದಲಾಗಿ ದೀರ್ಘಕಾಲದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಇದು ಆಗುವಂತಹದ್ದು. ಈ ಸಮಸ್ಯೆಯ ಲಕ್ಷಣಗಳು ಬಹಳ ಹಿಂದಿನಿಂದಲೇ ಕಾಣಿಸಿಕೊಳ್ಳುತ್ತವೆಯಾದರೂ ಅವನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆಯೇ ದೊಡ್ಡದಿದೆ ಎಂಬುದು ವಿಪರ್ಯಾಸ.

ಇದನ್ನೂ ಓದಿ: ತಂದೆ ಧೂಮಪಾನ ಮಾಡುತ್ತಿದ್ದರೆ ಮಕ್ಕಳಿಗೆ ಬರುತ್ತೆ ಈ ಗಂಭೀರ ರೋಗಗಳು; ಅಧ್ಯಯನದಿಂದ ಬಹಿರಂಗ

ಕೋರೊನರಿ ಆರ್ಟರಿ ಡಿಸೀಸ್ ಲಕ್ಷಣಗಳೇನು?

  • ಹೃದಯದಲ್ಲಿ ಬ್ಲಾಕೇಜ್‌ನ ಅತ್ಯಂತ ಸಾಮಾನ್ಯ ಲಕ್ಷಣವೆಂದರೆ ಎದೆನೋವು. ವಿಶೇಷವಾಗಿ, ಎದೆಯ ಮೇಲೆ ಒತ್ತಡ ಇಟ್ಟಂತಾಗುವ ನೋವು ಕಾಣಿಸಬಹುದು. ಈ ನೋವು ಕೆಲವೊಮ್ಮೆ ಎಡಗೈ, ಭುಜ, ಕುತ್ತಿಗೆ ಅಥವಾ ದವಡೆವರೆಗೆ ಹರಡಬಹುದು.
  • ಕೆಲವರಲ್ಲಿ ಸಾಮಾನ್ಯವಾಗಿ ನಡೆಯುವಾಗಲೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಹೃದಯಕ್ಕೆ ಸರಿಯಾದ ಪ್ರಮಾಣದಲ್ಲಿ ರಕ್ತ ತಲುಪದ ಕಾರಣ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದರಿಂದ ಸ್ವಲ್ಪ ಶಾರೀರಿಕ ಚಟುವಟಿಕೆ ಮಾಡಿದರೂ ಉಸಿರಾಟ ವೇಗವಾಗಬಹುದು.
  • ಇದರ ಜೊತೆಗೆ ಅಚಾನಕ್ ತಲೆಸುತ್ತು, ಕಾರಣವಿಲ್ಲದೆ ಬೆವರುವುದು ಕೂಡ ಹೃದಯ ಸಂಬಂಧಿತ ಸಮಸ್ಯೆಗಳ ಸೂಚನೆಗಳಾಗಿರಬಹುದು.

ಯಾರಿಗೆ ಹೆಚ್ಚು ಅಪಾಯ?

ವೈದ್ಯರ ಪ್ರಕಾರ ಕುಟುಂಬದಲ್ಲಿ ಹೃದಯ ರೋಗದ ಇತಿಹಾಸ ಇರುವವರು, ಹೈ ಬಿಪಿ (ರಕ್ತದೊತ್ತಡ) ಇರುವವರು ಮತ್ತು ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಇರುವವರಿಗೆ ಅಪಾಯ ಹೆಚ್ಚು ಎನ್ನಲಾಗಿದೆ.

ಇನ್ನು ಇವೆಲ್ಲವೂ ಕೋರೊನರಿ ಆರ್ಟರಿ ಡಿಸೀಸ್ ಲಕ್ಷಣ ಮತ್ತು ಯಾರಿಗೆ ಅಪಾಯ ಹೆಚ್ಚೆಂಬ ಮಾಹಿತಿಯಾದರೆ ಹೃದಯ ಸಂಬಂಧಿ ರೋಗಗಳಿಂದಲೇ ದೂರ ಉಳಿಯಲು ನಾವೇನು ಮಾಡಬಹುದು ಎಂಬೂದನ್ನೂ ತಿಳಿದುಕೊಳ್ಳಬೇಕಿದೆ. ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವ ಜೊತೆಗೆ ಪ್ರತಿದಿನ ವ್ಯಾಯಾಮ ಮಾಡುವುದು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಅಗತ್ಯವಿದೆ ಎಂಬುದು ವೈದ್ಯರ ಮಾತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್